Site icon Vistara News

IND vs AFG 2nd T20: ಹೋಳ್ಕರ್ ಸ್ಟೇಡಿಯಂನ ಪಿಚ್​ ರಿಪೋರ್ಟ್, ಟಿ20 ದಾಖಲೆ​ ಹೇಗಿದೆ?

Holkar Stadium

ಇಂದೋರ್​: ಈಗಾಗಲೇ ಮೊದಲ ಪಂದ್ಯ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿರುವ ರೋಹಿತ್​ ಶರ್ಮ ಪಡೆ. ಭಾನುವಾರ ನಡೆಯುವ ಅಫಘಾನಿಸ್ತಾನ ವಿರುದ್ಧ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ಮಧ್ಯ ಪ್ರದೇಶದ ಇಂದೋರ್​ ಸ್ಟೇಡಿಯಂ ಈ ಪಂದ್ಯಕ್ಕೆ ಅಣಿಯಾಗಿದೆ.

ಪಿಚ್​ ರಿಪೋರ್ಟ್​


ಹೋಳ್ಕರ್ ಸ್ಟೇಡಿಯಂನ(Holkar Stadium) ಪಿಚ್ ಸಂಪೂರ್ಣವಾಗಿ ಬ್ಯಾಟಿಂಗ್​ ಸ್ನೇಹಿಯಾಗಿದ್ದು ಬ್ಯಾಟರ್​ಗಳಿಗೆ ಇದು ಸ್ವರ್ಗವಾಗಿದೆ. ಹೀಗಾಗಿ ಬೃಹತ್​ ಮೊತ್ತದ ಪಂದ್ಯ ಎಂದು ನಿರೀಕ್ಷೆ ಮಾಡಬಹುದು. ಔಟ್‌ಫೀಲ್ಡ್ ಸಾಕಷ್ಟು ವೇಗವಾಗಿದೆ. ಆದ್ದರಿಂದ ಬ್ಯಾಟರ್‌ಗಳು ತಮ್ಮ ಹೊಡೆತಗಳಿಗೆ ಸಂಪೂರ್ಣ ಪ್ರತಿಫಲವನ್ನು ಪಡೆಯಲಿದ್ದಾರೆ. ಗೆಲುವು ಸಾಧಿಸಬೇಕೆಂದರೆ 200 ರನ್​ ಅತ್ಯಗತ್ಯ. ಈ ಮೈದಾನದಲ್ಲಿ ಸರಾಸರಿ ಮೊದಲ ಇನಿಂಗ್ಸ್ ಒಟ್ಟು 209 ಆಗಿದೆ.

ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇದುವರೆಗೆ 3 ಟಿ20 ಪಂದ್ಯಗಳು ನಡೆದಿವೆ. ಮೊದಲು ಬ್ಯಾಟ್ ಮಾಡಿದ ತಂಡ ಎರಡು ಬಾರಿ ಗೆದ್ದರೆ, ಚೇಸಿಂಗ್​ ನಡೆಸಿದ ತಂಡ ಒಮ್ಮೆ ಮಾತ್ರ ಗೆದ್ದಿದೆ. ಹೀಗಾಗಿ ಟಾಸ್​ ಗೆದ್ದ ತಂಡ ಬ್ಯಾಟಿಂಗ್​ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹಚ್ಚು ಎನ್ನಲಡ್ಡಿಯಿಲ್ಲ.

ಇದನ್ನೂ ಓದಿ Virat Kohli: 14 ತಿಂಗಳ ಬಳಿಕ ಮೊದಲ ಟಿ20 ಆಡಲು ಇಂದೋರ್​ಗೆ ತೆರಳಿದ ಕೊಹ್ಲಿ; ಇಲ್ಲಿದೆ ವಿಡಿಯೊ

ಹವಾಮಾನ ವರದಿ


ಪಂದ್ಯ ನಡೆಯುವ ಭಾನುವಾರದಂದು (ಜನವರಿ 14) ಇಂದೋರ್‌ನಲ್ಲಿ ಮಳೆ ಸಾಧ್ಯತೆ ಇಲ್ಲ. ಗರಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾತ್ರಿಯ ವೇಳೆ ಕೊಂಚ ಇಬ್ಬನಿ ಕಾಡ ಇರಲಿದೆ.

ಉಭಯ ತಂಡಗಳು ಇದುವರೆಗೆ ಟಿ20 ಕ್ರಿಕೆಟ್​ನಲ್ಲಿ ಒಟ್ಟು 6 ಬಾರಿ ಮುಖಾಮುಖಿಯಾಗಿವೆ. ಭಾರತ 5 ಪಂದ್ಯಗಳನ್ನು ಗೆದ್ದು ಅಜೇಯ ದಾಖಲೆ ಹೊಂದಿದೆ. ಇದರಲ್ಲಿ ಒಂದು ಗೆಲುವು ಈ ಸರಣಿಯಲ್ಲಿ ದಾಖಲಾದದ್ದು. ಒಂದು ಪಂದ್ಯ ರದ್ದುಗೊಂಡಿದೆ. ಈ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠ ಎನ್ನಲಡ್ಡಿಯಿಲ್ಲ.

ಆಫ್ಘನ್​ಗೆ ಮಾಡು ಇಲ್ಲ ಮಡಿ ಪಂದ್ಯ


ಅಫಘಾನಿಸ್ತಾನಕ್ಕೆ ಈ ಪಂದ್ಯ ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ. ಮೊದಲ ಪಂದ್ಯ ಸೋತ ಕಾರಣ ಸರಣಿಯನ್ನು ಜೀವಂತವಿರಿಸಬೇಕಿದ್ದರೆ ಈ ಪಂದ್ಯ ಗೆಲ್ಲಲೇ ಬೇಕು. ರಶೀದ್​ ಖಾನ್​ ಅವರ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹಿನ್ನಡೆ. ಇದು ಕಳೆದ ಪಂದ್ಯದಲ್ಲೇ ತೋರಿಬಂದಿತ್ತು.

ಸಂಭಾವ್ಯ ತಂಡಗಳು


ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಂಕು ಸಿಂಗ್, ಅಕ್ಷರ್​ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್.

ಅಫಘಾನಿಸ್ತಾನ: ಅಹ್ಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್ (ನಾಯಕ), ರಹಮತ್ ಶಾ, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ನಜೀಬುಲ್ಲಾ ಝದ್ರಾನ್, ಕರೀಂ ಜನತ್, ಗುಲ್ಬದಿನ್ ನೈಬ್, ಫಜಲ್ಹಕ್ ಫಾರೂಕಿ, ನವೀನ್-ಉಲ್-ಹಕ್, ಮುಜೀಬ್ ಉರ್​ ರೆಹಮಾನ್​.

Exit mobile version