Site icon Vistara News

ಭಾರತ-ಆಫ್ಘನ್​ 3ನೇ ಟಿ20 ಪಂದ್ಯ ನಡೆಯುವ ಚಿನ್ನಸ್ವಾಮಿ ಸ್ಟೇಡಿಯಂನ ಪಿಚ್​ ರಿಪೋರ್ಟ್ ಹೇಗಿದೆ?

M Chinnaswamy Stadium in Bengaluru

ಬೆಂಗಳೂರು: ಮೊದಲ ಎರಡು ಟಿ20 ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿ ಸರಣಿ ವಶಪಡಿಸಿಕೊಂಡಿರುವ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ, ಜನವರಿ 17 ಬುಧವಾರದ ಮೂರನೇ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯವನ್ನು ಕೂಡ ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಯೋಜನೆಯಲ್ಲಿದೆ. ಈ ಪಂದ್ಯ ನಡೆಯುವ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನ ಪಿಚ್​ ರಿಪೋರ್ಟ್(M Chinnaswamy Stadium Pitch Report)​, ಹವಾಮಾನ ವರದಿಯ(Bengaluru Weather Forecast) ಮಾಹಿತಿ ಇಂತಿದೆ.

ಪಿಚ್​ ರಿಪೋರ್ಟ್​


ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಯಾವಾಗಲೂ ಬ್ಯಾಟಿಂಗ್ ಸ್ನೇಹಿ ಸ್ಥಳವಾಗಿದೆ. ಇದುವರೆಗೆ ಇಲ್ಲಿ ಒಂಬತ್ತು ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ನಡೆದಿವೆ. ಚೇಸಿಂಗ್​ ನಡೆಸಿದ ತಂಡವೇ ಹೆಚ್ಚು ಬಾರಿ ಗೆದ್ದಿದೆ. 5 ಬಾರಿ ಚೇಸಿಂಗ್​ ನಡೆಸಿದ ತಂಡ ಗೆದ್ದರೆ, 3 ಬಾರಿ ಮಾತ್ರ ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಜಯಶಾಲಿಯಾಗಿದೆ. ರಾತ್ರಿಯ ವೇಳೆ ಇಬ್ಬನಿಯ ಕಾಟ ಇರುವ ಕಾರಣ ಟಾಸ್ ಗೆದ್ದ ನಾಯಕ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಬಹುದು.

ಔಟ್​ ಫೀಲ್ಡ್​ ಕೂಡ ತುಂಬಾ ಹತ್ತಿರ ಇರುವ ಕಾರಣ ಬ್ಯಾಟರ್​ಗಳಿಗೆ ಇದು ಸ್ವರ್ಗವಾಗಿದೆ. ಹೀಗಾಗಿ ಬೌಲರ್​ಗಳು ಇಲ್ಲಿ ಶಕ್ತಿಗಿಂತ ಯುಕ್ತಿಯನ್ನು ಪ್ರದರ್ಶಿಸಬೇಕಿದೆ. ಸ್ಲೋ ಬೌಲಿಂಗ್​ ಮೂಲಕ ಬ್ಯಾಟರ್​ಗಳನ್ನು ಕಟ್ಟಿ ಹಾಕಬೇಕಿದೆ. ಸ್ಪಿನ್ನರ್​ಗಳಿಗೆ ಈ ಪಿಚ್​ ಹೆಚ್ಚು ನರವು ನೀಡುತ್ತದೆ. ಆದ್ದರಿಂದ ಇತ್ತಂಡಗಳು ಸ್ಪಿನ್ನ್​ ಬೌಲರ್​ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬಹುದು.

ಇದನ್ನೂ ಓದಿ IND vs AFG 3rd T20: ಮೂರನೇ ಟಿ20ಗೆ ಟೀಮ್​ ಇಂಡಿಯಾದಲ್ಲಿ ಮೂರು ಬದಲಾವಣೆ

ಹವಾಮಾನ ವರದಿ


ಅಂತಿಮ ಟಿ20 ಪಂದ್ಯ ನಡೆಯುವ ಬೆಂಗಳೂರಿನಲ್ಲಿ ಹವಾಮಾನ ವರದಿಯ ಮುನ್ಸೂಚನೆಗಳ ಪ್ರಕಾರ, ಬುಧವಾರ ಭಾಗಶಃ ಮೋಡ ಕವಿದ ವಾತಾವರಣವಿದ್ದು ಯಾವುದೇ ಮಳೆಯ ಕಾಟ ಇಲ್ಲ ಎಂದು ತಿಳಿಸಿದೆ. ಗರಿಷ್ಠ ತಾಪಮಾನವು 28 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ. ಚಳಿಯ ವಾತಾವರಣ ಇರುವ ಕಾರಣ ಇಬ್ಬನಿ ಸಮಸ್ಯೆ ಕೊಂಚ ಅಧಿಕವಾಗಿರಲಿದೆ.

ಮುಖಾಮುಖಿ


ಇತ್ತಂಡಗಳು ಇದುವರೆಗೆ ಟಿ20 ಕ್ರಿಕೆಟ್​ನಲ್ಲಿ ಒಟ್ಟು 7 ಬಾರಿ ಮುಖಾಮುಖಿಯಾಗಿವೆ. ಭಾರತ 6 ಪಂದ್ಯಗಳನ್ನು ಗೆದ್ದು ಅಜೇಯ ದಾಖಲೆ ಹೊಂದಿದೆ. ಒಂದು ಪಂದ್ಯ ರದ್ದುಗೊಂಡಿದೆ. ಇದೀಗ 8ನೇ ಮುಖಾಮುಖಿಯಲ್ಲಾದರೂ ಅಫಘಾನಿಸ್ತಾನ ಗೆಲುವು ಕಂಡೀತೇ ಎನ್ನುವುದು ಈ ಪಂದ್ಯದ ಕೌತುಕ.

ಸಂಭಾವ್ಯ ತಂಡಗಳು


ಭಾರತ: ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್​ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ಅಕ್ಷರ್ ಪಟೇಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅರ್ಶ್​ದೀಪ್​ ಸಿಂಗ್​, ಅವೇಶ್​ ಖಾನ್​, ವಾಷಿಂಗ್ಟನ್​ ಸುಂದರ್​.

ಅಫಘಾನಿಸ್ತಾನ: ಇಬ್ರಾಹಿಂ ಜದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್​ ಕೀಪರ್​), ರಹಮತ್ ಶಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಕರೀಮ್ ಜನತ್, ಅಜ್ಮತುಲ್ಲಾ ಒಮರ್ಜಾಯ್, ಮುಜೀಬ್ ಉರ್ ರೆಹಮಾನ್, ಫಜಲ್ ಹಕ್ ಫಾರೂಕಿ, ನವೀನ್ ಉಲ್ ಹಕ್, ಕೈಸ್ ಅಹ್ಮದ್.

Exit mobile version