Site icon Vistara News

IND vs AFG: ಇಂದಿನ ಪಂದ್ಯದಲ್ಲಿ ಕೊಹ್ಲಿ ನಿರ್ಮಿಸಬಹುದಾದ ದಾಖಲೆಗಳ ಪಟ್ಟಿ ಹೀಗಿದೆ

Virat Kohli hits out at the nets

ಇಂದೋರ್​: ಮೊದಲ ಪಂದ್ಯದಿಂದ ಹೊರಗುಳಿದಿದ್ದ ವಿರಾಟ್‌ ಕೊಹ್ಲಿ(Virat Kohli) ಇಂದು ಇಂದೋರ್‌ನಲ್ಲಿ ಆಡಲಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿಗೆ ಹಲವು ದಾಖಲೆ ಬರೆಯುವ ಅವಕಾಶವಿದೆ. ವಿಶೇಷ ಎಂದರೆ ವಿರಾಟ್​ ಕೊಹ್ಲಿ 14 ತಿಂಗಳ ಬಳಿಕ ಭಾರತ ಪರ ಆಡುತ್ತಿರುವ ಟಿ20 ಪಂದ್ಯ(India vs Afghanistan, 2nd T20I) ಇದಾಗಿದೆ. ಅವರ ಮುಂದಿರುವ ದಾಖಲೆಯ ಪಟ್ಟಿ ಇಂತಿದೆ.

ರನ್​ ದಾಖಲೆ


ವಿರಾಟ್​ ಕೊಹ್ಲಿ ದ್ವಿತೀಯ ಟಿ20 ಪಂದ್ಯದಲ್ಲಿ ಕೇವಲ 35 ರನ್​ ಗಳಿಸಿದರೆ ಟಿ20 ಕ್ರಿಕೆಟ್​ನಲ್ಲಿ 12 ಸಾವಿರ ರನ್​ಗಳನ್ನು ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಹಾಗೂ ವಿಶ್ವದ 4ನೇ ಬ್ಯಾಟರ್​ ಎನಿಸಿಕೊಳ್ಳಲಿದ್ದಾರೆ. ಸದ್ಯ ಕೊಹ್ಲಿ 11965* ರನ್​ ಗಳಿಸಿದ್ದಾರೆ. ಇದರಲ್ಲಿ 4008 ರನ್​ ಅಂತಾರಾಷ್ಟ್ರೀಯ ಟಿ20ಯಲ್ಲಿ ದಾಖಲಾಗಿದೆ. ಉಳಿದ ರನ್​ ಐಪಿಎಲ್​ನಲ್ಲಿ ಗಳಿಸಿದ್ದಾಗಿದೆ.

50+ ಸ್ಕೋರ್ ದಾಖಲೆ


ಆಫ್ಘನ್​ ಎದುರು ಕೊಹ್ಲಿ ಅರ್ಧಶತಕ ಬಾರಿಸಿದರೆ ಟಿ20 ಕ್ರಿಕೆಟ್​ನಲ್ಲಿ ಟಿ20 ಕ್ರಿಕೆಟ್​ನಲ್ಲಿ 100 ಬಾರಿ 50+ ಸ್ಕೋರ್​ಗಳಿಸಿದ ವಿಶ್ವದ ಮೂರನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ದಾಖಲೆ ವೆಸ್ಟ್​ ಇಂಡೀಸ್​ ತಂಡದ ಮಾಜಿ ಆಟಗಾರ, ಯುನಿವರ್ಸ್​ ಬಾಸ್​ ಖ್ಯಾತಿಯ ಕ್ರಿಸ್​ ಗೇಲ್​ ಹೆಸರಿನಲ್ಲಿದೆ. ಗೇಲ್​ 110 ಬಾರಿ ಈ ಸಾಧನೆ ಮಾಡಿದ್ದಾರೆ. ಗೇಲ್​ ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​ ಕಾಣಿಸಿಕೊಂಡಿದ್ದಾರೆ. ವಾರ್ನರ್​ 107 ಬಾರಿ 50+ ಸ್ಕೋರ್​ಗಳಿದ್ದಾರೆ.

ಇದನ್ನೂ ಓದಿ Rohit Sharma: ಟಾಸ್​ ವೇಳೆಯೇ ಹೊಸ ಇತಿಹಾಸ ಬರೆಯಲಿದ್ದಾರೆ ಹಿಟ್​ಮ್ಯಾನ್​ ರೋಹಿತ್; ಏನದು?


9 ಸಾವಿರ ಎಸೆತಗಳ ದಾಖಲೆ


ಎಸೆತಗಳನ್ನು ಎದುರಿಸುವ ಮೂಲಕವೂ ದಾಖಲೆ ಬರೆಯಲಿದ್ದಾರೆ ವಿರಾಟ್ ಕೊಹ್ಲಿ. ಇಂದೋರ್​ನಲ್ಲಿ ನಡೆಯುವ ದ್ವಿತೀಯ ಟಿ20 ಪಂದ್ಯದಲ್ಲಿ ಕೊಹ್ಲಿ 28 ಎಸೆತಗಳನ್ನು ಎದುರಿಸಿದರೆ ಟಿ20ಯಲ್ಲಿ 9 ಸಾವಿರ ಎಸೆತಗಳನ್ನು ಎದುರಿಸಿದ ವಿಶ್ವದ 3ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. 14 ತಿಂಗಳ ಬಳಿಕ ಟಿ20 ಆಡುವ ಕೊಹ್ಲಿಗೆ ಮೂರು ದಾಖಲೆ ನಿರ್ಮಿಸುವ ಅವಕಾಶವಿದೆ.


ಭರ್ಜರಿ ಅಭ್ಯಾಸ ನಡೆಸಿದ ಕೊಹ್ಲಿ


14 ತಿಂಗಳ ಬಳಿಕ ಭಾರತ ಪರ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಲಿರುವ ಕೊಹ್ಲಿ ತಮ್ಮ ಪ್ರಚಂಡ ಬ್ಯಾಟಿಂಗ್​ ಫಾರ್ಮ್​ ತೋರಿಸಲು ನೆಟ್ಸ್​ನಲ್ಲಿ ಭರ್ಜರಿ ಬ್ಯಾಟಿಂಗ್​ ಅಭ್ಯಾಸ ನಡೆಸಿದ್ದಾರೆ. ಅದರಲ್ಲೂ ಸಿಕ್ಸರ್​ ಹೊಡೆತಗಳನ್ನೇ ಹೆಚ್ಚಾಗಿ ಅಭ್ಯಾಸ ನಡೆಸಿದ್ದಾರೆ. ರೋಹಿತ್​ ಶರ್ಮ ಜತೆ ನೆಟ್ಸ್​ನಲ್ಲಿ ಅಭ್ಯಾಸ ನಡೆಸಿದ್ದನ್ನು ನೋಡುವಾಗ ಕೊಹ್ಲಿ ಆರಂಭಿಕನಾಗಿ ಆಡುವ ಸಾಧ್ಯತೆ ಅಧಿಕವಾಗಿದೆ. ಕೊಹ್ಲಿ ಆಗಮನದಿಂದ ಸ್ಥಾನ ಬಿಡುವವರು ಯಾರು ಎಂಬುದು ಸದ್ಯದ ಪ್ರಶ್ನೆ.

Exit mobile version