Site icon Vistara News

IND vs AUS 3rd ODI: ರಾಜ್​ಕೋಟ್​ನ​ ಪಿಚ್​ ರಿಪೋರ್ಟ್​ ದಾಖಲೆಯೇ ವಿಚಿತ್ರ

Saurashtra Cricket Association Stadium Rajkot

ರಾಜ್​ಕೋಟ್​: ಪ್ರವಾಸಿ ಆಸ್ಟ್ರೇಲಿಯಾ ಮತ್ತು ಆತಿಥೇಯ ಭಾರತ ನಡುವಣ ಅಂತಿಮ ಏಕದಿನ ಪಂದ್ಯ ಬುಧವಾರ ರಾಜ್​ಕೋಟ್​​ನ(Rajkot) ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ(Saurashtra Cricket Association Stadium) ನಡೆಯಲಿದೆ. ಮೊದಲೆರಡು ಪಂದ್ಯಗಳಿಗೆ ವಿಶ್ರಾಂತಿ ಪಡೆದಿದ್ದ ಖಾಯಂ ನಾಯಕ ರೋಹಿತ್​ ಶರ್ಮ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕುಲ್​ದೀಪ್​ ಯಾದವ್​ ಮತ್ತು ಜಸ್​ಪ್ರೀತ್​ ಬುಮ್ರಾ ಅವರು ಈ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದಾರೆ. ಈಗಾಗಲೇ ಎಲ್ಲ ಆಟಗಾರರು ರಾಜ್​ಕೋಟ್​ ತಲುಪಿದ್ದಾರೆ. ಈ ಪಂದ್ಯದ ಪಿಚ್​ ರಿಪೋರ್ಟ್​, ಸಂಭಾವ್ಯ ತಂಡದ ಮಾಹಿತಿ ಇಂತಿದೆ.

ಪಿಚ್​ ರಿಪೋರ್ಟ್​

ರಾಜ್​ಕೋಟ್​​ನ ಪಿಚ್​ ಬ್ಯಾಟಿಂಗ್​ಗೆ ಹೇಳಿ ಮಾಡಿಸಿದಂತಿದೆ. ಹೋಳ್ಕರ್​ ಮೈದಾನದಂತೆ ಇಲ್ಲಿನ ಬೌಂಡರಿ ಲೈನ್​ಗಳು ಎರಡೂ ಬದಿಯಲ್ಲಿ ಚಿಕ್ಕದಾಗಿರುವುದರಿಂದ ರನ್​ ಮಳೆಯೇ ಹರಿಯುವ ನಿರೀಕ್ಷೆ ಇದೆ. ಹೀಗಾಗಿ ಬೌಲರ್​ಗಳು ಶಕ್ತಿ ಮೀರಿ ಪ್ರದರ್ಶನ ತೋರುವ ಅಗತ್ಯವಿದೆ. ಸ್ಪಿನ್​ ಬೌಲಿಂಗ್​ ಇಲ್ಲಿ ಕೊಂಚ ಪರಿಣಾಮಕಾರಿಯಾಗಿ ಗೋಚರಿಸುವ ಕಾರಣ ಉಭಯ ತಂಡಗಳು ಸ್ಪಿನ್​ಗೆ ಹೆಚ್ಚಿನ ಪಾಮುಖ್ಯತೆ ನೀಡಬಹುದು.

ಟಾಸ್​ ನಿರ್ಣಾಯಕ

ಈ ಸ್ಟೇಡಿಯಂನಲ್ಲಿ ಇದುವರೆಗೆ ಮೂರು ಏಕದಿನ ಪಂದ್ಯಗಳು ನಡೆದಿವೆ. ಮೂರು ಪಂದ್ಯಗಳಲ್ಲಿಯೂ ಮೊದಲು ಬ್ಯಾಟಿಂಗ್​ ನಡೆಸಿದ ತಂಡವೇ ಗೆದ್ದು ಬೀಗಿದೆ. ಈ ಮೈದಾನದಲ್ಲಿ ದಾಖಲಾದ ಗರಿಷ್ಠ ಮೊತ್ತ 340. ಆಸ್ಟ್ರೇಲಿಯಾ ವಿರುದ್ಧವೇ ಭಾರತ ಈ ಮೊತ್ತ ಪೇರಿಸಿತ್ತು. 2020ರಲ್ಲಿ ಈ ಪಂದ್ಯ ನಡೆದಿತ್ತು. ಪಂದ್ಯದಲ್ಲಿ ರಾಹುಲ್​ ಅಜೇಯ 80, ವಿರಾಟ್​ ಕೊಹ್ಲಿ 78, ರೋಹಿತ್​ ಶರ್ಮ 42 ರನ್​ ಬಾರಿಸಿ ಮಿಂಚಿದ್ದರು. ಭಾರತ ಈ ಪಂದ್ಯವನ್ನು 36 ರನ್​ಗಳಿಂದ ಗೆದ್ದು ಬೀಗಿತ್ತು. ಹೀಗಾಗಿ ಈ ಪಂದ್ಯದಲ್ಲಿ ಟಾಸ್​ ಗೆದ್ದ ತಂಡ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಳ್ಳಬಹುದು.

ಇದನ್ನೂ ಓದಿ IND vs AUS: ಆಸೀಸ್​ ವಿರುದ್ಧದ ಅಂತಿಮ ಪಂದ್ಯಕ್ಕೆ ಶುಭಮನ್​ ಗಿಲ್,ಶಾರ್ದೂಲ್ ಅಲಭ್ಯ

ಮುಖಾಮುಖಿ

ಆಸೀಸ್​ ಮತ್ತು ಭಾರತ ಇದುವರೆಗೆ ಏಕದಿನ ಮಾದರಿಯಲ್ಲಿ 148 ಬಾರಿ ಮುಖಾಮುಖಿಯಾಗಿವೆ. ಭಾರತ 56 ಪಂದ್ಯ ಗೆದ್ದರೆ, ಆಸೀಸ್​ 82 ಪಂದ್ಯಗಳಲ್ಲಿ ಜಯಿಸಿದೆ. ಇದರಲ್ಲಿ ಭಾರತಕ್ಕೆ ಎರಡು ಗೆಲುವು ದಕ್ಕಿದ್ದು ಈ ಸರಣಿಯಲ್ಲಿ. ಈಗಾಗಕೇ ಸರಣಿ ಗೆದ್ದಿರುವ ಭಾರತ ಈ ಪಂದ್ಯದಲ್ಲಿಯೂ ಗೆದ್ದು ಆಸೀಸ್​ಗೆ ವೈಟ್​ವಾಶ್​ ಮುಖಭಂಗ ಮಾಡಿ ವಿಶ್ವಕಪ್​ಗೆ ಭರ್ಜರಿ ತಯಾರಿ ನಡೆಸುವ ಯೋಜನೆಯಲ್ಲಿದೆ.

ಹವಾಮಾನ ವರದಿ

ಇಂದೋರ್​ ಪಂದ್ಯಕ್ಕೆ ಮಳೆ ಅಡ್ಡಿಪಡಿ ಡಕ್​ವರ್ತ್​ ನಿಯಮವನ್ನು ಜಾರಿಗೆ ತರಲಾಗಿತ್ತು. ಆದರೆ ಈ ಪಂದ್ಯಕ್ಕೆ ಮಳೆಯ ಯಾವುದೇ ಕಾಟ ಇರದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಕ್ರಿಕೆಟ್​ ಅಭಿಮಾನಿಗಳು ಸಂಪೂರ್ಣವಾಗಿ ಈ ಪಂದ್ಯವನ್ನು ಕಣ್ತುಂಬಿಕೊಳ್ಳಬಹುದು. ಸಣ್ಣ ಪ್ರಮಾಣದ ಮೋಡ ಕವಿದ ವಾತಾವರಣ ಕಂಡುಬಂದರೂ ಮಳೆ ಮಾತ್ರ ಇರದು.

ಸಂಭಾವ್ಯ ತಂಡಗಳು

ಭಾರತ: ರೋಹಿತ್​ ಶರ್ಮ, ಶ್ರೇಯಸ್​ ಅಯ್ಯರ್​, ಕೆ.ಎಲ್ ರಾಹುಲ್​, ವಿರಾಟ್​ ಕೊಹ್ಲಿ, ಹಾರ್ದಿಕ್​ ಪಾಂಡ್ಯ, ಇಶಾನ್​ ಕಿಶನ್​, ಆರ್​.ಅಶ್ವಿನ್​, ಕುಲ್​ದೀಪ್​ ಯಾದವ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್​, ಪ್ರಸಿದ್ಧ್​ ಕೃಷ್ಣ.

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲಬುಶೇನ್, ಕ್ಯಾಮೆರಾನ್ ಗ್ರೀನ್, ಜೋಶ್ ಇಂಗ್ಲಿಸ್ (ವಿಕೆಟ್​ ಕೀಪರ್​), ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ಶಾರ್ಟ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಸೀನ್ ಅಬಾಟ್, ಆಡಮ್ ಝಂಪಾ

Exit mobile version