ಅಹಮದಾಬಾದ್: ಆಸ್ಟ್ರೇಲಿಯಾ(IND VS AUS) ವಿರುದ್ಧ ಸೋಮವಾರ(ಮಾರ್ಚ್ 13) ಮುಕ್ತಾಯ ಕಂಡ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಲ್‌ರೌಂಡರ್ ಅಕ್ಷರ್ ಪಟೇಲ್(Axar Patel) ನೂತನ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಆಸ್ಟ್ರೇಲಿಯಾದ ದ್ವಿತೀಯ ಇನಿಂಗ್ಸ್ ವೇಳೆ ಟ್ರಾವಿಡ್ ಹೆಡ್(Travis Head) ಅವರ ವಿಕೆಟ್ ಪಡೆಯುವ ಮೂಲಕ ಅಕ್ಷರ್ ಪಟೇಲ್ ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕಡಿಮೆ ಎಸೆತಗಳಲ್ಲಿ 50 ವಿಕೆಟ್ ಪೂರೈಸಿದ ಸಾಧನೆ ಮಾಡಿದರು. ಅಕ್ಷರ್ ಪಟೇಲ್ ಕೇವಲ 2205 ಎಸೆತಗಳಲ್ಲಿ 50 ಟೆಸ್ಟ್ ವಿಕೆಟ್ ಪೂರೈಸಿದ್ದಾರೆ. ಜತೆಗೆ ಈ ಸಾಧನೆ ಮಾಡಿದ ವಿಶ್ವದ 5ನೇ ಆಲ್‌ರೌಂಡರ್ ಎಂಬ ಖ್ಯಾತಿಗೂ ಅಕ್ಷರ್ ಪಾತ್ರರಾದರು.
ಇದನ್ನೂ ಓದಿ IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯ
ಈ ಸಾಧನೆಯ ಜತೆಗೆ 12 ಟೆಸ್ಟ್‌ಗಳಲ್ಲಿ 50 ವಿಕೆಟ್ ಮತ್ತು 500 ರನ್ ಗಡಿ ದಾಟಿದ ಎರಡನೇ ಭಾರತೀಯ ಎಂಬ ದಾಖಲೆಯನ್ನೂ ಅಕ್ಷರ್ ತಮ್ಮ ಹೆಸರಿಗೆ ಬರೆದಿದ್ದಾರೆ. ಅಕ್ಷರ್ಗೂ ಮೊದಲು ಈ ಸಾಧನೆಯನ್ನು ಆರ್. ಅಶ್ವಿನ್ ಮಾಡಿದ್ದರು. ಇನ್ನು ಈ ಪಂದ್ಯದಲ್ಲಿ ಅಕ್ಷರ್ ಪಟೇಲ್ 79 ರನ್ ಮತ್ತು 2 ವಿಕೆಟ್ ಉರುಳಿಸಿದರು.