ಅಹಮದಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ(IND VS AUS) ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಗುರುವಾರದಿಂದ(ಮಾರ್ಚ್ 9) ಆರಂಭವಾಗಲಿದೆ. ಆದರೆ ಪಂದ್ಯಕ್ಕಿಂತ ಇಲ್ಲಿನ ಪಿಚ್ಗಳ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ. ಇದಕ್ಕೆ ರಾಹುಲ್ ದ್ರಾವಿಡ್(rahul dravid) ತಕ್ಕ ಉತ್ತರವೊಂದನ್ನು ನೀಡಿದ್ದಾರೆ.
ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್, ಎಲ್ಲ ಪಿಚ್ಗಳು ಆಟಗಾರರಿಗೆ ಸವಾನಿಂದಲೇ ಕೂಡಿರುತ್ತದೆ. ಸ್ಪಿನ್‌ಸ್ನೇಹಿ ಮತ್ತು ವೇಗಿಗಳಿಗೆ ನೆರವಾಗುವ ಪಿಚ್ಗಳು ಎಂದೆಲ್ಲಾ ಚರ್ಚೆ ನಡೆದಿದ್ದವು, ಪಿಚ್ ಹೇಗಿದ್ದರೇನು?, ಅದರಲ್ಲಿ ಆಡಿ ಗೆಲ್ಲುವುದೇ ನಮ್ಮ ಗುರಿಯಾಗಿರಬೇಕು ಎಂದು ಅವರು ಹೇಳಿದರು.
“ಪಿಚ್ಗಳು ಯಾವ ರೀತಿ ಇದ್ದರೇನು? ಆಟಗಾರರರು ತಮ್ಮ ಆಟದತ್ತ ಗಮನ ಹರಿಸಬೇಕು. ಸ್ಪಿನ್, ವೇಗದ ಸ್ನೇಹಿ ಪಿಚ್ ಹೀಗೆ ಮಾತನಾಡುತ್ತಾ ಕುಳಿತರೆ ಸಾಲದು. ಪೀಲ್ಡ್ಗೆ ಇಳಿದ ಮೇಲೆ ಆಡಲೇಬೇಕು. ಇದು ಸಾಧ್ಯವಾಗದಿದ್ದರೆ, ಆಟಗಾರ ವೈಫಲ್ಯವೇ ಹೊರತು ಪಿಚ್ನ ಸಮಸ್ಯೆಯಲ್ಲ” ಎಂದು ದ್ರಾವಿಡ್ ಪಿಚ್ ಬಗ್ಗೆ ಟೀಕೆ ಮಾಡುವವರಿಗೆ ಪರೋಕ್ಷವಾಗಿ ಚಾಟಿ ಬೀಸಿದರು.
ಇದನ್ನೂ ಓದಿ IND VS AUS: ಅಹಮದಾಬಾದ್ ಕ್ರೀಡಾಂಗಣದಲ್ಲಿ ರಕ್ಷಣಾ ಪಡೆಗಳ ತಪಾಸಣೆ ಆರಂಭ
ಪಿಚ್ ಯಾವುದೇ ರೀತಿ ಇದ್ದರೂ ಅದು ಉಭಯ ತಂಡಗಳಿಗೆ ನೆರವು ನೀಡುತ್ತದೆ. ಪ್ರತಿ ಪಿಚ್ ಆಟಗಾರರಿಗೆ ಸವಾಲು ಒಡ್ಡುತ್ತದೆ. ಅದು ಕೆಲವೊಮ್ಮೆ ಬೌಲರ್‌ಗಳಿಗೆ ಮತ್ತು ಬ್ಯಾಟರ್‌ಗಳಿಗೆ ನೆರವು ನೀಡಬಹುದು ಅಥವಾ ಸವಾಲಾಗಬಹುದು. ನಾವು ನಮ್ಮ ಪ್ರದರ್ಶನದ ಮೇಲೆ ಮಾತ್ರ ಗಮನವಿಡಬೇಕು. ಭಾರತ ಕೂಡ ವಿದೇಶಗಳಿಗೆ ಪ್ರವಾಸ ಕೈಗೊಂಡಾಗ ಕಠಿಣ ಪಿಚ್ಗಳಲ್ಲಿ ಕ್ರಿಕೆಟ್ ಆಡಿದೆ. ಇದರಲ್ಲಿ ಕೆಲ ಪಂದ್ಯಗಳನ್ನು ಸೋತಿದ್ದೇವೆ ಕೆಲ ಪಂದ್ಯಗಳಲ್ಲಿ ಗೆಲುವು ಕಂಡಿದ್ದೇವೆ. ಸೋಲು ಗೆಲುವು ಕ್ರೀಡೆಯ ಒಂದು ಭಾಗ, ಸೋತ ತಕ್ಷಣ ಪಿಚ್ ಕಳಪೆ ಎಂದು ದೂರುವುದು ಸರಿಯಲ್ಲ ಎಂದು ದ್ರಾವಿಡ್ ಹೇಳಿದರು.