ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ(IND VS AUS) ವಿರುದ್ಧದ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್(border gavaskar trophy) ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ. ಉಭಯ ತಂಡಗಳ ಮೊದಲ ಪಂದ್ಯ ಫೆಬ್ರವರಿ 9ರಿಂದ ನಾಗ್ಪುರದಲ್ಲಿ ಆರಂಭವಾಗಲಿದೆ. ಆದರೆ ಪ್ರವಾಸಿ ಆಸೀಸ್ ತಂಡ ದೊಡ್ಡ ಆಘಾತ ಎದುರಾಗಿದೆ.
ಈಗಾಗಲೇ ಆಸ್ಟ್ರೇಲಿಯಾ ತಂಡ ಗಾಯದ ಸಮಸ್ಯೆಯಿಂದ ಹಲವು ಸ್ಟಾರ್ ಆಟಗಾರರ ಸೇವೆಯನ್ನು ಕಳೆದುಕೊಂಡಿದ್ದು, ಇದೀಗ ತಂಡದ ಪ್ರಮುಖ ಆಲ್ರೌಂಡರ್ ಕ್ಯಾಮರೂನ್ ಗ್ರೀನ್(cameron green) ಅವರು ಇನ್ನೂ ಗುಣಮುಖರಾಗಿಲ್ಲ. ಹೀಗಾಗಿ ಅವರು ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವ ಸಾಧ್ಯತೆಯಿಲ್ಲ ಎಂದು ಉಪನಾಯಕ ಸ್ಟೀವನ್ ಸ್ಮಿತ್ ಹೇಳಿದ್ದಾರೆ. ಇದರಿಂದ ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
“ಕ್ಯಾಮರೂನ್ ಗ್ರೀನ್ ಅವರು ಇದುವರೆಗೆ ನೆಟ್ಸ್ನಲ್ಲಿ ಅಭ್ಯಾಸ ನಡೆಸಿಲ್ಲ. ಜತೆಗೆ ಅವರು ಪೂರ್ಣ ಪ್ರಮಾಣದಲ್ಲಿ ಫಿಟ್ನೆಸ್ ಹೊಂದಿಲ್ಲ ಹೀಗಾಗಿ ಮೊದಲ ಟೆಸ್ಟ್ ಆಡುವ ಸಾಧ್ಯತೆ ತುಂಬಾ ಕಡಿಮೆ” ಎಂದು ಸ್ವೀವನ್ ಸ್ಮಿತ್ ಮಂಗಳವಾರ(ಫೆ.7) ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇದನ್ನೂ ಓದಿ IND VS AUS: ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಭಾರತಕ್ಕೆ ಪಂತ್ ಅವರ ಕೊರಗು ಕಾಡಲಿದೆ: ಚಾಪೆಲ್
ಜೋಶ್ ಹ್ಯಾಜಲ್ವುಡ್, ಮಿಚೆಲ್ ಸ್ಟಾರ್ಕ್ ಅವರ ಸೇವೆ ಕಳೆದುಕೊಂಡಿರುವುದು ತಂಡಕ್ಕೆ ಹಿನ್ನಡೆಯಾಗಿದೆ. ಈ ಮಧ್ಯೆ ಗ್ರೀನ್ ಅವರ ಅಲಭ್ಯತೆ ಮತ್ತಷ್ಟು ದೊಡ್ಡ ಹೊಡೆತ ಬಿದ್ದಿದೆ. ಆದರೆ ಲ್ಯಾನ್ಸ್ ಮೋರಿಸ್ ಮತ್ತು ಸ್ಕಾಟ್ ಬೋಲ್ಯಾಂಡ್ ಅವರಂತಹ ಆಟಗಾರರು ಈ ನಷ್ಟವನ್ನು ತುಂಬಬಹುದು ಎಂಬ ನಿರೀಕ್ಷೆ ಇದೆ ಎಂದು ಸ್ಮಿತ್ ಹೇಳಿದರು.