ಇಂದೋರ್: ಆರಂಭದಲ್ಲಿ ಶ್ರೇಯಸ್ ಅಯ್ಯರ್(105) ಮತ್ತು ಶುಭಮನ್ ಗಿಲ್(104) ಅವರ ಆಕರ್ಷಕ ಶತಕ, ಆ ಬಳಿಕ ನಾಯಕ ಕೆ.ಎಲ್ ರಾಹುಲ್(52) ಹಾಗೂ ಸೂರ್ಯಕುಮಾರ್ ಯಾದವ್(72*) ಅವರ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ ಆಸೀಸ್ ವಿರುದ್ಧ ದ್ವಿತೀಯ ಏಕದಿನ(IND vs AUS 2nd ODI) ಪಂದ್ಯದಲ್ಲಿ ಬೃಹತ್ ಮೊತ್ತ ದಾಖಲಿಸಿದೆ.
ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದದಲ್ಲಿ ಭಾರತ 99 ರನ್ಗಳ ಗೆಲುವು ಸಾಧಿಸಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ.
ನಾಟಕೀಯ ಕುಸಿತ ಕಂಡ ಆಸೀಸ್ 8 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿದೆ.
ಪಂದ್ಯಕ್ಕೆ ಮಳೆ ಅಡಚಣೆಯಾದ ಕಾರಣ ಡಕ್ವರ್ತ್ ನಿಯಮದ ಅನುಸಾರ ಆಸೀಸ್ ತಂಡಕ್ಕೆ 33 ಓವರ್ನಲ್ಲಿ 317 ರನ್ ಗುರಿ ನೀಡಲಾಗಿದೆ.
ಮಳೆಯಿಂದ ಪಂದ್ಯ ಸ್ಥಗಿತ. ಆಸ್ಟ್ರೇಲಿಯಾ 9 ಓವರ್ಗೆ 56/2
ಇಂದೋರ್ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 399 ರನ್ ಪೇರಿಸಿ ಸವಾಲೊಡ್ಡಿದೆ. ಆಸ್ಟ್ರೇಲಿಯಾ ಗೆಲುವಿಗೆ ಭರ್ತಿ 400 ರನ್ ಬಾರಿಸಬೇಕಿದೆ.