Site icon Vistara News

Ind vs Aus: ಭಾರತಕ್ಕೆ 99 ರನ್​ ಗೆಲುವು; ಸರಣಿ ವಶಪಡಿಸಿಕೊಂಡ ರಾಹುಲ್​ ಪಡೆ

KL Rahul And Pat Cummins

Ind vs Aus: Australia Won The Toss And Elected Bowl First

ಇಂದೋರ್​: ಆರಂಭದಲ್ಲಿ ಶ್ರೇಯಸ್​ ಅಯ್ಯರ್(105)​ ಮತ್ತು ಶುಭಮನ್​ ಗಿಲ್(104)​ ಅವರ ಆಕರ್ಷಕ ಶತಕ, ಆ ಬಳಿಕ ನಾಯಕ ಕೆ.ಎಲ್​ ರಾಹುಲ್(52) ಹಾಗೂ ಸೂರ್ಯಕುಮಾರ್​ ಯಾದವ್​(72*)​ ಅವರ ಅರ್ಧಶತಕದ ನೆರವಿನಿಂದ ಟೀಮ್​ ಇಂಡಿಯಾ ಆಸೀಸ್​ ವಿರುದ್ಧ ದ್ವಿತೀಯ ಏಕದಿನ(IND vs AUS 2nd ODI) ಪಂದ್ಯದಲ್ಲಿ ಬೃಹತ್​ ಮೊತ್ತ ದಾಖಲಿಸಿದೆ.

Abhilash B C

ಉತ್ತಮ ಆರಂಭ ಒದಗಿಸಿದ ಋತುರಾಜ್​ ಗಾಯಕ್ವಾಡ್​ ಮತ್ತು ಶುಭಮನ್​ ಗಿಲ್​

Abhilash B C

ಉಭಯ ತಂಡಗಳು

ಭಾರತ: ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮುಕೇಶ್‌ ಕುಮಾರ್, ಮೊಹಮ್ಮದ್ ಶಮಿ, ಪ್ರಸಿದ್ಧ್‌ ಕೃಷ್ಣ.

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್ (ನಾಯಕ), ಮಾರ್ನಸ್ ಲಬುಶೇನ್, ಕ್ಯಾಮೆರಾನ್ ಗ್ರೀನ್, ಜೋಶ್ ಇಂಗ್ಲಿಸ್ (ವಿಕೆಟ್​ ಕೀಪರ್​), ಜೋಶ್‌ ಹೇಜಲ್‌ವುಡ್, ಮ್ಯಾಥ್ಯೂ ಶಾರ್ಟ್, ಸ್ಪೆನ್ಸರ್‌ ಜಾನ್ಸನ್, ಸೀನ್ ಅಬಾಟ್, ಆಡಮ್ ಝಂಪಾ

Abhilash B C

‌ಶ್ರೇಯಸ್‌ ಅಯ್ಯರ್‌ಗೆ ಮತ್ತೊಂದು ಸ್ಥಾನ

ಬೆನ್ನು ನೋವಿನಿಂದ ಚೇತರಿಕೆ ಕಂಡು ಭಾರತ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದ ಶ್ರೇಯಸ್​ ಅಯ್ಯರ್​ಗೆ ಏಷ್ಯಾಕಪ್​ನಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲೇ ಅವರು ಗಾಯಗೊಂಡು ಬಳಿಕದ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಆಸೀಸ್​ ವಿರುದ್ಧದ ಸರಣಿಯಲ್ಲಿ ಅವಕಾಶ ಪಡೆದರೂ ಕಳಪೆ ಫೀಲ್ಡಿಂಗ್​ ಮತ್ತು ಬ್ಯಾಟಿಂಗ್​ ನಡೆಸಿ ಸಂಪೂರ್ಣ ವಿಫಲರಾದರು. ಒಂದೊಮ್ಮೆ ದ್ವಿತೀಯ ಪಂದ್ಯದಲ್ಲಿಯೂ ಅವರು ಇದೇ ಪ್ರದರ್ಶನವನ್ನು ತೋರ್ಪಡಿಸಿದರೆ ವಿಶ್ವಕಪ್​ ತಂಡದ ಆಡುವ ಬಳಗದಿಂದ ಹೊರಗುಳಿಯುವುದು ಖಚಿತ. ಈ ನಿಟ್ಟಿನಲ್ಲಿ ಸಿಕ್ಕ ಅವಕಾಶವನ್ನು ಅವರು ಸರಿಯಾಗಿ ಬಳಸಿಕೊಳ್ಳಬೇಕಿದೆ.​ ಜತೆಗೆ ಶಾರ್ದೂಲ್​ ಠಾಕೂರ್​ ಕೂಡ ತಮ್ಮ ಎಸೆತಗಳಿಗೆ ಸಾಣೆ ಹಿಡಿಯಬೇಕಿದೆ.

Abhilash B C

ಜಸ್‌ಪ್ರೀತ್‌ ಬುಮ್ರಾ ಅಲಭ್ಯ

ಎರಡನೇ ಪಂದ್ಯಕ್ಕೆ ಜಸ್‌ಪ್ರೀತ್‌ ಬುಮ್ರಾ ಅವರು ಅಲಭ್ಯರಾಗಿದ್ದಾರೆ. ಅವರು ಕುಟುಂಬಸ್ಥರನ್ನು ಭೇಟಿಯಾಗಲು ಎರಡನೇ ಪಂದ್ಯಕ್ಕೆ ಅಲಭ್ಯರಾಗದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಅವರು ಮೂರನೇ ಪಂದ್ಯಕ್ಕೆ ಆಗಮಿಸಲಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಬುಮ್ರಾ ಬದಲಿಗೆ ಮತ್ತೊಬ್ಬ ವೇಗಿ, ಕನ್ನಡಿಗ ಪ್ರಸಿದ್ಧ್‌ ಕೃಷ್ಣ ತಂಡವನ್ನು ಸೇರಿದ್ದಾರೆ.

Exit mobile version