Site icon Vistara News

IND VS AUS: ಬೆಂಗಳೂರಿನ ಅಲೂರಿನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ತರಬೇತಿ

IND VS AUS

#image_title

ಬೆಂಗಳೂರು: ಭಾರತ(IND VS AUS) ವಿರುದ್ಧದ 4 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿಗೂ ಮುನ್ನ ಆಸ್ಟ್ರೇಲಿಯಾ ತಂಡ ಬೆಂಗಳೂರಿಗೆ ಆಗಮಿಸಿ ಕೆಎಸ್​ಸಿಎ ಕ್ರಿಕೆಟ್ ಮೈದಾನದಲ್ಲಿ ತರಬೇತಿ ಪಡೆಯಲಿದೆ.

ಆಲೂರಿನಲ್ಲಿರುವ ಕೆಎಸ್​ಸಿಎ ಕ್ರಿಕೆಟ್ ಮೈದಾನದಲ್ಲಿ ಪ್ರವಾಸಿ ತಂಡಕ್ಕಾಗಿ ನಾಲ್ಕು ದಿನಗಳ ಶಿಬಿರವು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್​ಸಿಎ) ಉಸ್ತುವಾರಿಯಲ್ಲಿ ನಡೆಯಲಿದೆ. ಇಲ್ಲಿ ಅಭ್ಯಾಸ ನಡೆಸುವ ವೇಳೆ ಆಸೀಸ್​ ತಂಡಕ್ಕೆ ಎಲ್ಲ ಸೌಲಭ್ಯಗಳನ್ನು ಒದಗಿಸುವುದಾಗಿ ರಾಜ್ಯ ಕ್ರಿಕೆಟ್ ಅಸೋಸಿಯೇಶನ್​ನ ಅಧಿಕಾರಿಯಬ್ಬರು ಹೇಳಿದ್ದಾರೆ.

ಇದನ್ನೂ ಓದಿ IND VS NZ: ಯಾರಿಗೆ ಒಲಿಯಲಿದೆ ಟಿ20 ಕಿರೀಟ?

ಆಸ್ಟ್ರೇಲಿಯಾ ತಂಡ ನಾಲ್ಕು ದಿನಗಳ ಶಿಬಿರದಲ್ಲಿ ಸ್ಪಿನ್​ ಅಭ್ಯಾಸಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಿದೆ. ಈ ಮೂಲಕ ಟೀಮ್​ ಇಂಡಿಯಾದ ಸ್ಪಿನ್​ ದಾಳಿಯನ್ನು ಸಮರ್ಥವಾಗಿ ಎದುರಿಸಲು ಪೂರ್ವ ತಯಾರಿ ನಡೆಸಲಿದೆ. ವಿದರ್ಭ ಕ್ರಿಕೆಟ್ ಸಂಸ್ಥೆ ಮೊದಲ ಟೆಸ್ಟ್​ ಪಂದ್ಯಕ್ಕೆ ಆತಿಥ್ಯ ವಹಿಸಿಕೊಂಡಿದೆ. ವೇಗಿ ಪ್ಯಾಟ್ ಕಮ್ಮಿನ್ಸ್ ಸಾರಥ್ಯದ ಆಸೀಸ್​ ತಂಡ ನಾಗ್ಪುರ ತಲುಪುವ ಮೊದಲು ಬೆಂಗಳೂರಿನಲ್ಲಿ ತರಬೇತಿ ಪಡೆಯಲಿದೆ ಎಂದು ಖಚಿತಪಡಿಸಿದೆ. ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯ ಫೆಬ್ರವರಿ 9ಕ್ಕೆ ಆರಂಭವಾಗಲಿದೆ.

Exit mobile version