Site icon Vistara News

IND VS AUS: ನೂರನೇ ಟೆಸ್ಟ್​ ಪಂದ್ಯವನ್ನಾಡಿದ ಪೂಜಾರಗೆ ವಿಶೇಷ ಗೌರವ ನೀಡಿದ ಬಿಸಿಸಿಐ

Cheteshwar Pujara

#image_title

ನವದೆಹಲಿ: ಟೀಮ್​ ಇಂಡಿಯಾದ(IND VS AUS) ಟೆಸ್ಟ್‌ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ(Cheteshwar Pujara) ತಮ್ಮ ಕ್ರಿಕೆಟ್‌ ವೃತ್ತಿಜೀವನದ 100ನೇ ಟೆಸ್ಟ್‌ ಪಂದ್ಯವನ್ನಾಡುತ್ತಿದ್ದಾರೆ. ಈ ಪಂದ್ಯಕ್ಕೂ ಮುನ್ನ ಅವರಿಗೆ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟ್​ ದಿಗ್ಗಜ ಸುನೀಲ್​ ಗವಾಸ್ಕರ್(sunil gavaskar)​ ಅವರು ವಿಶೇಷ ಕ್ಯಾಪ್ ನೀಡುವ ಮೂಲಕ ಗೌರವಿಸಿದರು.

35 ವರ್ಷದ ಸೌರಾಷ್ಟ್ರ ಮೂಲದ ಪೂಜಾರ ಅವರು 100 ಟೆಸ್ಟ್‌ ಪಂದ್ಯವನ್ನಾಡಿದ ಭಾರತೀಯ ಆಟಗಾರರ ಪೈಕಿ 13ನೇ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಕೆಲ ದಿನಗಳ ಹಿಂದೆ ತಮ್ಮ ವೃತ್ತಿಜೀವನದ ನೂರನೇ ಟೆಸ್ಟ್​ ಪಂದ್ಯವನ್ನಾಡುವ ಸಂತಸದಲ್ಲಿ ಪೂಜಾರ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು.

ಚೇತೇಶ್ವರ್ ಪೂಜಾರ ಅವರಿಗೆ ವಿಶೇಷ ಕ್ಯಾಪ್ ನೀಡಿ ಗೌರವಿಸಿದ ಬಳಿಕ ಮಾತನಾಡಿದ ಸುನಿಲ್ ಗವಾಸ್ಕರ್, ನಾವೆಲ್ಲ ಚಿಕ್ಕವರಿದ್ದಾಗ, ರಸ್ತೆಯ ಗಲ್ಲಿಗಳಲ್ಲಿ ಕ್ರಿಕೆಟ್ ಆಡಿ ಬೆಳೆದವರು ಆ ಸಂದರ್ಭದಲ್ಲಿ ನಾವು ಮುಂದೊಂದು ದಿನ ಟೀಮ್​ ಇಂಡಿಯಾ ಪರ ಆಡಬೇಕೆಂದು ಕನಸು ಕಂಡವರು. ಈ ಕನಸು ನನಸಾಗಿದೆ. ಭಾರತ ತಂಡದ ಪರ ಆಡುವ ಅವಕಅಶ ಸಿಕ್ಕಿದ್ದು ನಮ್ಮೆಲ್ಲರ ಭಾಗ್ಯ. ಇದೊಂದು ರೀತಿಯ ಅವಿಸ್ಮರಣೀಯ ಕ್ಷಣ. ನೂರನೇ ಪಂದ್ಯದಲ್ಲಿ ವಿಶೇಷ ದಾಖಲೆ ಬರೆಯುವಂತಾಗಲಿ ಎಂದು ಹಾರೈಸಿದರು.

“ನೀವು ಸಾಕಷ್ಟು ಪೆಟ್ಟು ತಿಂದಿದ್ದೀರ ಹಾಗೆಯೇ ನಿಮ್ಮ ವಿಕೆಟ್ ಪಡೆಯಲು ಬೌಲರ್‌ಗಳು ಸಾಕಷ್ಟು ಪರದಾಡುವಂತೆ ಮಾಡಿದ್ದೀರ. ನೀವು ಗಳಿಸುವ ಪ್ರತಿಯೊಂದು ರನ್‌ ಕೂಡ ಭಾರತ ತಂಡದ ಪಾಲಿಗೆ ದೊಡ್ಡ ಕೊಡುಗೆ. ದೇಶಕ್ಕಾಗಿ ಆಡುವ ಕನಸು ಕಾಣುವ ಪ್ರತಿಯೊಬ್ಬ ಯುವ ಪ್ರತಿಭೆಗಳಿಗೆ ನೀವು ರೋಲ್ ಮಾಡೆಲ್. 100 ಟೆಸ್ಟ್‌ ಮ್ಯಾಚ್‌ ಕ್ಲಬ್‌ಗೆ ನಿಮಗೆ ಆತ್ಮೀಯ ಸ್ವಾಗತ” ಎಂದು ಗವಾಸ್ಕರ್​ ಹಾರೈಸಿದರು.

ಇದನ್ನೂ ಓದಿ IND VS AUS: ಜೇಟ್ಲಿ ಮೈದಾನದ ಬಳಿ ವಿರಾಟ್​ ಕೊಹ್ಲಿ ನೋಡಲು ಮುಗಿಬಿದ್ದ ಅಭಿಮಾನಿಗಳು

ಈ ಪಂದ್ಯದಲ್ಲಿ ಪೂಜಾರ ಅವರು ಮೈದಾನಕ್ಕಿಳಿಯುವ ಮುನ್ನ ಟೀಮ್​ ಇಂಡಿಯಾ ಆಟಗಾರರು ವಿಶೇಷವಾಗಿ ಚಪ್ಪಾಳೆಯ ಮೂಲಕ ಗೌರವ ಸೂಚಿಸಿ ಅವರನ್ನು ಮೈದಾನಕ್ಕೆ ಬರ ಮಾಡಿಕೊಂಡರು.

Exit mobile version