ನವದೆಹಲಿ: ಬಹು ಕಾಲದ ಬಳಿಕ ತವರಿನ ಅಂಗಳದಲ್ಲಿ ಟೆಸ್ಟ್(IND VS AUS) ಆಡುವ ಉತ್ಸಾಹದಲ್ಲಿರುವ ವಿರಾಟ್ ಕೊಹ್ಲಿ(virat kohli) ಅವರನ್ನು ನೋಡಲು ಅಭಿಮಾನಿಗಳು ಪಂದ್ಯ ಆರಂಭಕ್ಕೂ ಮನ್ನವೇ ಮುಗಿ ಬಿದ್ದಿದ್ದಾರೆ.
2017ರ ಬಳಿಕ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ ಇದಾಗಿದೆ. ಹೀಗಾಗಿ ರಾಜಧಾನಿಯ ಕ್ರಿಕೆಟ್ ಪ್ರೇಮಿಗಳೆಲ್ಲ ತೀವ್ರ ಆಸಕ್ತಿ ತಾಳಿದ್ದಾರೆ. ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಜತೆಗೆ ವಿರಾಟ್ ಕೊಹ್ಲಿಯ ಆಟವನ್ನು ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯ ಶುಕ್ರವಾರ(ಫೆ.17) ಆರಂಭವಾಗಲಿದೆ.
ಇನ್ನೊಂದೆಡೆ ಕೊಹ್ಲಿ ತಮ್ಮ ತವರಿನಂಗಳದಲ್ಲಿ ಬರೋಬ್ಬರಿ ಆರು ವರ್ಷಗಳ ಬಳಿಕ ಆಡುತ್ತಿರುವ ಟೆಸ್ಟ್ ಪಂದ್ಯವೂ ಇದಾಗಿದೆ. ಈ ಪಂದ್ಯಕ್ಕಾಗಿಯೇ ವಿರಾಟ್ ಕೊಹ್ಲಿ ಎಲ್ಲ ಸಹ ಆಟಗಾರರಿಗಿಂತ ಹೆಚ್ಚುವರಿ ಅಭ್ಯಾಸ ನಡೆಸಿದ್ದು ತವರಿನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಲು ಎದುರು ನೋಡುತ್ತಿದ್ದಾರೆ. ಗುರುವಾರ ವಿರಾಟ್ ಕೊಹ್ಲಿ ಅಭ್ಯಾಸ ನಡೆಸುತ್ತಿರುವುದನ್ನು ನೋಡಲು ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಜೇಟ್ಲಿ ಕ್ರೀಡಾಂಗಣಕ್ಕೆ ಬಂದಿದ್ದಾರೆ.
ಇದನ್ನೂ ಓದಿ IND VS AUS: ಹೆಚ್ಚುವರಿ ಬ್ಯಾಟಿಂಗ್ ಅಭ್ಯಾಸ ನಡೆಸಿದ ವಿರಾಟ್ ಕೊಹ್ಲಿ
ಕೊಹ್ಲಿ ಅಭ್ಯಾಸ ನಡೆಸಿ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಿದ್ದಾರೆ. ಜತೆಗೆ ತವರಿನ ಪಂದ್ಯದಲ್ಲಿ ಶತಕ ಬಾರಿಸುವಂತೆ ಹಾರೈಸಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.