Site icon Vistara News

IND VS AUS: ಕಳಪೆ ಪ್ರದರ್ಶನ ತೋರುವ ಆಟಗಾರರಿಗೆ ಉದ್ದನೆಯ ಹಗ್ಗ ನೀಡಿ; ಶಶಿ ತರೂರ್​

IND VS AUS: Give poor performers a long rope; Shashi Tharoor

IND VS AUS: Give poor performers a long rope; Shashi Tharoor

ನವದೆಹಲಿ: ಕಳಪೆ ಬ್ಯಾಟಿಂಗ್​ ನಡೆಸುತ್ತಿರುವ ಆಟಗಾರರಿಗೆ ಪದೇಪದೆ ಅವಕಾಶ ನೀಡುತ್ತಿರುವ ಬಿಸಿಸಿಐ(BCCI) ವಿರುದ್ಧ ​ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್(Shashi Tharoor)​ ಕಿಡಿಕಾರಿದ್ದಾರೆ.

ಸತತ ಬ್ಯಾಟಿಂಗ್​ ವೈಫಲ್ಯ ಕಾಣುತ್ತಿರುವ ರಾಹುಲ್​ ಬದಲಿಗೆ ಶುಭಮನ್​ ಗಿಲ್​ ಅವರಿಗೆ ತಂಡದಲ್ಲಿ ಅವಕಾಶ ನೀಡಿ ಎಂದು ಮಾಡಿದ್ದ ಟ್ವೀಟ್ ಒಂದನ್ನು ರೀಟ್ವೀಟ್ ಮಾಡಿರುವ ಶಶಿ ತರೂರ್,​ ‘ನಿವು ಸಂಜು ಸ್ಯಾಮ್ಸನ್​ ಬಗ್ಗೆ ಏನು ಹೇಳುತ್ತೀರಾ..? ಏಕದಿನ ಪಂದ್ಯಗಳಲ್ಲಿ 76 ಸರಾಸರಿ ರನ್​​ ಹೊಂದಿರುವ ಅವರನ್ನು ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಗಳಿಗೆ ಹೊರಗಿಡಲಾಗಿದೆ. ತಂಡದಲ್ಲಿ ಉತ್ತಮ ಪ್ರದರ್ಶನ ನೀಡದವರಿಗೆ ಉದ್ದನೆಯ ಹಗ್ಗ ನೀಡುವುದು ಒಳಿತು ಎಂದು ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರುತ್ತಿರುವ ರಾಹುಲ್​ಗೂ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ.

ಯಾವುದೇ ಆಟಗಾರ ಉತ್ತಮ ಪ್ರದರ್ಶನ ತೋರುತ್ತಿದ್ದರೆ ಅವರಿಗೆ ತಂಡದಲ್ಲಿ ಸರಿಯಾದ ಅವಕಾಶ ನೀಡಬೇಕು. ಕೇವಲ ಸರಣಿಗೆ ಆಯ್ಕೆ ಮಾಡಿ ಅವರನ್ನು ಬೆಂಚ್​ಗೆ ಸೀಮಿತ ಮಾಡುವ ಮೂಲಕ ಅವರ ಕ್ರಿಕೆಟ್​ ಭವಿಷ್ಯವನ್ನು ಹಾಳು ಮಾಡಬಾರದು ಎಂದು ಶಸಿ ತರೂರ್​ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ IND VS AUS: ಭಾರತ ವಿರುದ್ಧದ ಏಕದಿನ ಸರಣಿಗೆ ಆಸೀಸ್​ ತಂಡ ಪ್ರಕಟ; ತಂಡಕ್ಕೆ ಮರಳಿದ ಮ್ಯಾಕ್ಸ್​ವೆಲ್​

ಸಂಜು ಸ್ಯಾಮ್ಸನ್​ ಅವರಿಗೆ ಟೀಮ್​ ಇಂಡಿಯಾದಲ್ಲಿ ಅವಕಾಶ ನೀಡದೇ ಇರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಹಲವು ಬಾರಿ ನೆಟ್ಟಿಗರು ಬಿಸಿಸಿಐ ಮತ್ತು ಆಯ್ಕೆ ಸಮಿತಿ ವಿರುದ್ಧ ಸರಣಿ ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಶಶಿ ತರೂರ್ ಕೂಡ ಸಂಜು ಬೆನ್ನಿಗೆ ನಿಂತಿದ್ದಾರೆ.

Exit mobile version