Site icon Vistara News

IND VS AUS: ಇಂದೋರ್​ ಪಿಚ್​ಗೆ ಕಳಪೆ ​ ರೇಟಿಂಗ್ಸ್​ ಕೊಟ್ಟ ಐಸಿಸಿ​

BCCI to file review petition against poor pitch rating

ಇಂದೋರ್​: ಪ್ರವಾಸಿ ಆಸ್ಟ್ರೇಲಿಯಾ(IND VS AUS) ಹಾಗೂ ಭಾರತ ತಂಡಗಳ ನಡುವೆ ಇಂದೋರ್​ನಲ್ಲಿ ನಡೆದ ಮೂರನೇ ಟೆಸ್ಟ್​ ಪಂದ್ಯ ಕೇವಲ ಎರಡೂವರೆ ದಿನಕ್ಕೆ ಮುಕ್ತಾಯ ಕಂಡಿದೆ. ಇದೀಗ ಇಂದೋರ್​ ಪಿಚ್​ಗೆ(Indore pitch) ಐಸಿಸಿ(ICC) ಕಳಪೆ ರೇಟಿಂಗ್ಸ್​ ಕೊಟ್ಟಿದೆ.

ಇಂದೋರ್​ನ ಪಿಚ್ ತುಂಬಾ ಡ್ರೈ ಆಗಿತ್ತು. ಇದು ಸ್ಪರ್ಧಾತ್ಮಕ ಪಿಚ್​ ಆಗಿರಲಿಲ್ಲ. ಬ್ಯಾಟಿಂಗ್​ ಮತ್ತು ಬೌಲಿಂಗ್​ಗೆ ಇದು ಸೂಕ್ತವಾದ ಪಿಚ್​ ಆಗಿರಲಿಲ್ಲ. ಆದರೂ ಇಲ್ಲಿ ಸ್ಪಿನ್​ ಉತ್ತಮ ರೀತಿಯಲ್ಲಿ ಯಶಸ್ಸು ಕಂಡಿದೆ. ಒಟ್ಟಾರೆಯಾಗಿ ಹೇಳುದಾದರೆ ಇದೊಂದು ತೀರಾ ಕಳಪೆ ಪಿಚ್ ಆಗಿತ್ತು ಎಂದು ಘೋಷಿಸಿದ ಐಸಿಸಿ ಕಳಪೆ ರೇಟಿಂಗ್ಸ್​ ಕೊಟ್ಟಿದೆ.

ಇದಕ್ಕೂ ಮುನ್ನ ನಾಗ್ಪುರ ಮತ್ತು ದೆಹಲಿಯಲ್ಲಿ ನಡೆದ ಟೆಸ್ಟ್​ ಪಂದ್ಯದ ಪಿಚ್​ಗೆ ಐಸಿಸಿ ಸಾಧಾರಣ ಪಿಚ್​ ಎಂಬ ರೇಟಿಂಗ್ಸ್​ ನೀಡಿತ್ತು.

ಇದನ್ನೂ ಓದಿ INDvsAUS : ಡಿಆರ್​ಎಸ್​ ನಿಯಮದ ಲೋಪವನ್ನೇ ಬಳಸಿಕೊಂಡ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್​​! ವ್ಯಾಪಕ ಟೀಕೆ

ಝೋಮ್ಯಾಟೋದಿಂದಲೂ ಟ್ರೋಲ್​

ಇಂದೋರ್​ ಪಿಚ್​ ಬಗ್ಗೆ ಝೋಮ್ಯಾಟೋ ಕೂಡ ಟ್ರೋಲ್​ ಮಾಡಿದೆ. ʻಈ ಪಿಚ್‌ನಲ್ಲಿ ಜಿಲೇಬಿಯಲ್ಲಿರುವುದಕ್ಕಿಂತಲೂ ಹೆಚ್ಚು ಸುತ್ತುಗಳಿದ್ದವುʼ ಎಂದು ಟ್ವೀಟ್‌ ಮಾಡಿದೆ. ಈ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಇಂದೋರ್​ನಲ್ಲಿ ನಡೆದ ಈ ಟೆಸ್ಟ್​ ಪಂದ್ಯದಲ್ಲಿ ಭಾರತ 9 ವಿಕೆಟ್​ಗಳ ಅಂತರದಿಂದ ಸೋಲು ಕಂಡಿತು.

Exit mobile version