ನವದೆಹಲಿ: ಸತತ ಕಳಪೆ ಬ್ಯಾಟಿಂಗ್ನಿಂದ ಟೀಕೆಗೆ ಗುರಿಯಾಗಿದ್ದ ಟೀಮ್ ಇಂಡಿಯಾದ ಉಪನಾಯಕ ಕೆ.ಎಲ್ ರಾಹುಲ್(kl rahul) ಆಸ್ಟ್ರೇಲಿಯಾ(IND VS AUS) ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಫೀಲ್ಡಿಂಗ್ ನಡೆಸುವ ಮೂಲಕ ಗಮನಸೆಳೆದಿದ್ದಾರೆ.
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಜಡೇಜಾ ಎಸೆದ 46 ನೇ ಓವರ್‌ನಲ್ಲಿ ಉಸ್ಮಾನ್ ಖವಾಜ ಅವರು ರಿವರ್ಸ್ ಸ್ವೀಪ್ ಮಾಡುವ ಮೂಲಕ ಬೌಂಡರಿ ಬಾರಿಸಿದರು. ಇದರ ಬೆನ್ನಲ್ಲೇ ಮುಂದಿನ ಎಸೆತದಲ್ಲಿಯೂ ಅವರು ಇದೇ ಹೊಡೆತದ ಮೂಲಕ ಬೌಂಡರಿ ಬಾರಿಸಲು ಮುಂದಾದರು. ಆದರೆ ಇಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದ ಕೆ.ಎಲ್ ರಾಹುಲ್ ಚಿರತೆಯಂತೆ ಜಿಗಿದು ಒಂದೈ ಕೈಯಲ್ಲಿ ಕ್ಯಾಚ್ ಪಡೆದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತಮವಾಗಿ ಆಡುತ್ತಿದ್ದ ಖವಾಜಾ 81 ರನ್ಗೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು. ರಾಹುಲ್ ಹಿಡಿದ ಈ ಕ್ಯಾಚ್ನ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು” ಅಬ್ಬಾ..ಎಂತಹ ಅದ್ಭುತ ಕ್ಯಾಚ್’ ಎಂದು ಬರೆದುಕೊಂಡಿದೆ.
ಇದನ್ನೂ ಓದಿ IND VS AUS: ಟೆಸ್ಟ್ ಕ್ರಿಕೆಟ್ನಲ್ಲಿ ನೂತನ ದಾಖಲೆ ಬರೆದ ಆರ್. ಅಶ್ವಿನ್
ಈ ವಿಕೆಟ್ ಪಡೆಯುತ್ತಿದ್ದಂತೆ ರವೀಂದ್ರ ಜಡೇಜಾ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ವೇಗವಾಗಿ 2,500 ರನ್ ಮತ್ತು 250 ವಿಕೆಟ್ ಕಿತ್ತ ಸಾಧನೆ ಮಾಡಿದರು.