ಮುಂಬಯಿ: ಆಸ್ಟ್ರೇಲಿಯಾ(IND VS AUS) ವಿರುದ್ಧ ಸಾಗುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಅವರು ಹಿಡಿದ ಕ್ಯಾಚ್ನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಹುಲ್ ಕ್ಯಾಚ್ ಹಿಡಿದ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಮುಂಬಯಿಯ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ತನ್ನ ಆಯ್ಕೆಗೆ ತಕ್ಕಂತೆ ಉತ್ತಮ ಪ್ರದರ್ಶನ ತೋರಿದೆ. ಎದುರಾಳಿ ಆಸ್ಟ್ರೇಲಿಯಾವನ್ನು 188 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ಸು ಸಾಧಿಸಿದೆ. ಗೆಲುವಿಗೆ 189 ರನ್ ಬಾರಿಸಬೇಕಿದೆ.
ಇದನ್ನೂ ಓದಿ INDvsAUS : ಭಾರತದ ಮಾರಕ ಬೌಲಿಂಗ್ಗೆ ಕುಸಿದ ಆಸ್ಟ್ರೇಲಿಯಾ, 188 ರನ್ಗಳಿಗೆ ಆಲ್ಔಟ್
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಆರಂಭಿಕ ಆಘಾತ ಕಂಡಿತು. ಈ ವೇಳೆ ತಂಡಕ್ಕೆ ಆಸರೆಯಾದ ನಾಯಕ ಸ್ಟೀವನ್ ಸ್ಮಿತ್ ಭಾರತದ ಬೌಲರ್ಗಳನ್ನು ಕಾಡಲಾರಂಭಿಸಿದರು. ಆದರೆ 22 ರನ್ ಗಳಿಸಿದ ವೇಳೆ ಪಾಂಡ್ಯ ಅವರು ಎಸತದ ಚೆಂಡು ಸ್ಮಿತ್ ಅವರ ಬ್ಯಾಟ್ಗೆ ಸವರಿ ಹಿಂದೆ ಸಾಗಿತು. ಕೀಪಿಂಗ್ ನಡೆಸುತ್ತಿದ್ದ ರಾಹುಲ್ ಚಿರತೆ ವೇಗದಲ್ಲಿ ಜಿಗಿದು ಈ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು. ಈ ವಿಡಿಯೊವನ್ನು ಬಿಸಿಸಿಐ ಟ್ವಿಟರ್ನಲ್ಲಿ ಹಂಚಿಕೊಂಡು “ಎಡ್ಜ್ ಆ್ಯಂಡ್ ಟೇಕನ್” ಎಂದು ಬರೆದುಕೊಂಡಿದೆ.
ರಾಹುಲ್ ಅವರ ಈ ಕ್ಯಾಚ್ ಕಂಡ ನೆಟ್ಟಿಗರು ಧೋನಿ ಅವರ ಕ್ಯಾಚ್ಗೆ ಹೋಲಿಕೆ ಮಾಡಿದ್ದಾರೆ. ಧೋನಿ ಅವರು 2019ರಲ್ಲಿ ನಡೆದ ಏಕದಿನ ವಿಶ್ವ ಕಪ್ ಟೂರ್ನಿಯಲ್ಲಿ ಇದೇ ರೀತಿ ಕ್ಯಾಚ್ ಪಡೆದಿದ್ದರು. ಆದರೆ ಧೋನಿ ಒಂದೇ ಕೈ ಯಲ್ಲಿ ಕ್ಯಾಚ್ ಪಡೆದು ಮಿಂಚಿದ್ದರು.