ನವದೆಹಲಿ: ಆಸ್ಟ್ರೇಲಿಯಾ(IND VS AUS) ವಿರುದ್ಧದ ಬಾರ್ಡರ್-ಗವಾಸ್ಕರ್(border gavaskar trophy) ಟ್ರೋಫಿಯ ದ್ವಿತೀಯ ಪಂದ್ಯದಲ್ಲಿಯೂ ಕಳಪೆ ಪ್ರದರ್ಶನ ತೋರಿದ ಕೆ.ಎಲ್ ರಾಹುಲ್(KL Rahul) ಬಗ್ಗೆ ಭಾರಿ ಟೀಕೆಗಳು ಬರಲಾರಂಭಿಸಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಮತ್ತು ವೆಂಕಟೇಶ್ ಪ್ರಸಾದ್ ಅವರ ಮೀಮ್ಸ್‌ಗಳು ವೈರಲ್ ಆಗಿವೆ.
ರಾಹುಲ್ ಆಸೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದ ಬೆನ್ನಲ್ಲೇ, ರಾಹುಲ್ ಬ್ಯಾಟಿಂಗ್ ಫಾರ್ಮ್ ಬಗ್ಗೆ ಬಹಿರಂಗವಾಗಿಯೇ ವೆಂಕಟೇಶ್ ಪ್ರಸಾದ್ ಟೀಕೆ ಮಾಡಿದ್ದರು. ಇದೇ ವಿಚಾರವಾಗಿ ಸರಣಿ ಟ್ವೀಟ್ ಮೂಲಕ ರಾಹುಲ್‌ಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಿದ್ದೇಕೆ ಎಂದು ಪ್ರಶ್ನಿಸಿದ್ದರು.ಇದೀಗ ದ್ವಿತೀಯ ಪಂದ್ಯದಲ್ಲಿ ರಾಹುಲ್ ಕಳಪೆ ಪ್ರದರ್ಶನ ತೋರಿದ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್‌ಗಳು ಬರಲಾರಂಭಿಸಿದೆ.
ರಿಷಬ್ ಶೆಟ್ಟಿ ಅವರ ‘ಕಾಂತಾರ’ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಕಥಾನಾಯಕ ಶಿವನನ್ನು ಉರಿಯೋ ಕಟ್ಟಿಗೆಯಿಂದ ವಿಲನ್ಗಳು ಹೊಡೆದುರುಳಿಸುತ್ತಾರೆ. ಇದೇ ವೇಳೆ ದೈವವು ಶಿವನನ್ನು ಬಡಿದೆಬ್ಬಿಸುವ ಒಂದು ಸನ್ನಿವೇಶ ಎಲ್ಲರ ಮನಸ್ಸಿನಲ್ಲಿ ಅಚ್ಚಾಗಿವೆ. ಇದೇ ಮಾದರಿಯಲ್ಲಿ ಈಗ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ರಾಹುಲ್ ಅವರನ್ನು ವೆಂಕಟೇಶ್ ಪ್ರಸಾದ್ ಬಡಿದೆಬ್ಬಿಸಬೇಕಿದೆ ಎಂದು ನೆಟ್ಟಿಗರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ KL Rahul: ದ್ವಿತೀಯ ಟೆಸ್ಟ್ ಪಂದ್ಯದ ಬಳಿಕ ಕೆ.ಎಲ್ ರಾಹುಲ್ ಭವಿಷ್ಯ ನಿರ್ಧಾರ; ಸುನೀಲ್ ಗವಾಸ್ಕರ್
ಇನ್ನೊಂದೆಡೆ ಕೆಲ ದಿನಗಳ ಹಿಂದಷ್ಟೇ ವೆಂಕಟೇಶ್ ಪ್ರಸಾದ್, ಬೆಂಗಳೂರಿನ ರಾಜಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ಫೋಟೋ ಬಳಸಿ ನೆಟ್ಟಿಗರೊಬ್ಬರು ‘ಇದೀಗ ಬಂದ ಮಾಹಿತಿ ಪ್ರಕಾರ ರಾಹುಲ್ ಭವಿಷ್ಯವನ್ನು ಚರ್ಚಿಸಲು ವೆಂಕಟೇಶ್ ಪ್ರಸಾದ್, ಪ್ರಧಾನಮಂತ್ರಿ ಕಾರ್ಯಾಲಯವನ್ನು ತಲುಪಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.