ನಾಗ್ಪುರ: ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯವನ್ನು ಸೋತಿರುವ ಆಸ್ಟ್ರೇಲಿಯಾ ತಂಡ ಇದೀಗ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ಈ ಪಂದ್ಯಕ್ಕೆ ಮುಂಚಿತವಾಗಿ ಎಡಗೈ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ ಆಸ್ಟ್ರೇಲಿಯಾ ತಂಡ ಸೇರಿದ್ದಾರೆ.
ಮಗುವಿನ ಜನನದ ನಿರೀಕ್ಷೆಯಲ್ಲಿರುವ ಲೆಗ್‌ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್ ತಂಡ ತೊರೆದ ಕಾರಣ ಅವರ ಬದಲಿಗೆ ಸ್ಪಿನ್ನರ್ ಕುಹ್ನೆಮನ್ ತಂಡ ಸೇರಿದ್ದಾರೆ. ಈ ವಿಚಾರವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಖಚಿತಪಡಿಸಿದೆ. ಭಾರತ ಮತ್ತು ಆಸೀಸ್ ವಿರುದ್ಧದ ದ್ವಿತ್ತೀಯ ಟೆಸ್ಟ್ ಪಂದ್ಯ ಫೆಬ್ರವರಿ 17 ರಿಂದ ಆರಂಭವಾಗಲಿದೆ.
ಇದನ್ನೂ ಓದಿ Women’s T20 World Cup: ಇಂಡೋ-ಪಾಕ್ ಕದನಕ್ಕೆ ಕ್ಷಣಗಣನೆ ಆರಂಭ
ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಸ್ಪಿನ್ ಬೌಲಿಂಗ್ಗೆ ಹೆಚ್ಚಿನ ಮಹತ್ವ ನೀಡಿದರೆ ಮ್ಯಾಥ್ಯೂ ಕುಹ್ನೆಮನ್ ಅವರಿಗೆ ಅವಕಾಶ ಸಿಗಬಹುದು. ಆದರೆ ಈ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಏಕೆಂದರೆ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಈ ಪಂದ್ಯಕ್ಕೆ ತಂಡ ಸೇರಲಿದ್ದಾರೆ. ಜತೆಗೆ ಮಿಚೆಲ್ ಸ್ಟಾರ್ಕ್ ಕೂಡ ಆಡುವ ಸಾಧ್ಯತೆ ಇದೆ.