ಕೇಪ್ಟೌನ್: ಕಳಪೆ ಬ್ಯಾಟಿಂಗ್ನಿಂದ ಭಾರಿ ಟೀಕೆ ಎದುರಿಸುತ್ತಿರುವ ಟೀಮ್ ಇಂಡಿಯಾ ಕ್ರಿಕೆಟಿಗ ಕೆ.ಎಲ್.ರಾಹುಲ್(kl rahul) ಅವರಿಗೆ ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಇಯಾನ್ ಬಿಷಪ್(Ian Bishop) ಬೆಂಬಲ ಸೂಚಿಸಿದ್ದಾರೆ.
ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಇಯಾನ್ ಬಿಷಪ್, ಏರಿಳಿತಗಳು ಪ್ರತಿಯೊಬ್ಬ ಕ್ರಿಕೆಟಿಗನ ಜೀವನದ ಭಾಗ ಎಂದು ನಾನು ಭಾವಿಸುತ್ತೇನೆ. ನಾನು ಆಟಗಾರನಾಗಿ ಇಂತಹ ನೋವು ಅನುಭವಿಸಿದ್ದೇನೆ. ದೇಶದಲ್ಲಿ ಜನಸಂಖ್ಯೆ ದೊಡ್ಡದಿದ್ದಷ್ಟೂ ಟೀಕೆಗಳು ಹೆಚ್ಚಾಗಿರುತ್ತವೆ. ಕ್ರಿಕೆಟ್ ದೃಷ್ಟಿಯಿಂದ ನೋಡಿದಾಗಿ ಈ ಚರ್ಚೆ ಸರಿ ಎಂದು ನೀವು ಭಾವಿಸುತ್ತೀರಿ. ಆದರೆ ಆ ದಿನದ ಕೊನೆಯಲ್ಲಿ ಆತನೊಬ್ಬ ಮನುಷ್ಯ ಅಷ್ಟೆ ಎಂಬುದನ್ನು ಮರೆಯಬಾರದು ಎಂದು ಹೇಳುವ ಮೂಲಕ ರಾಹುಲ್ ಪರ ಬ್ಯಾಟ್ ಬೀಸಿದ್ದಾರೆ.
ರಾಹುಲ್ ಬ್ಯಾಟಿಂಗ್ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಆಕಾಶ್ ಚೋಪ್ರಾ ಮತ್ತು ವೆಂಕಟೇಶ್ ಪ್ರಸಾದ್ ನೀಡುತ್ತಿರುವ ಹೇಳಿಕೆಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಆದರೆ ಆತನ ಬಗ್ಗೆ ಸತತ ಟೀಕೆಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜತೆಗೆ ಆತ್ಮವಿಶ್ವಾಸವನ್ನು ಕುಸಿಯುವಂತೆ ಮಾಡುತ್ತದೆ. ಹೀಗಾಗಿ ಆತನಿಗೆ ಉಸಿರಾಡಲು ಅವಕಾಶ ನೀಡಬೇಕು ಎಂದು ಹೇಳುವ ಮೂಲಕ ವೆಂಕಟೇಶ್ ಪ್ರಸಾದ್ ಮತ್ತು ಆಕಾಶ್ ಚೋಪ್ರಾಗೆ ಪರೋಕ್ಷವಾಗಿ ಬಿಷಪ್ ಕುಟುಕಿದ್ದಾರೆ.
ಇದನ್ನೂ ಓದಿ IND VS AUS: ಮೂರನೇ ಟೆಸ್ಟ್ನಲ್ಲಿ ರೋಹಿತ್ ಶರ್ಮಾ ಜತೆಗಾರ ಯಾರು?; ಇಕ್ಕಟ್ಟಿನ ಸ್ಥಿತಿಯಲ್ಲಿ ಆಯ್ಕೆ ಸಮಿತಿ
ರಾಹುಲ್ ಶ್ರೇಷ್ಠ ಆಟಗಾರ. ಅವರು ಶೀಘ್ರದಲ್ಲೇ ಫಾರ್ಮ್ ಕಂಡುಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಬಿಷಪ್ ಅಭಿಪ್ರಾಯಪಟ್ಟಿದ್ದಾರೆ.