ಮೆಲ್ಬೋರ್ನ್: ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್(IND VS AUS) ಅವರು ಮತ್ತೆ ಗಾಯಗೊಂಡಿದ್ದು ಭಾರತ ವಿರುದ್ಧದ ಏಕದಿನ ಸರಣಿಗೆ ಅನುಮಾನ ಎಂದು ವರದಿಯಾಗಿದೆ.
ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯದಲ್ಲಿ ವಿಕ್ಟೋರಿಯಾ ತಂಡದ ಪರ ಆಡುತ್ತಿದ್ದ ವೇಳೆ ಮ್ಯಾಕ್ಸ್‌ವೆಲ್(glenn maxwell) ಕೈ ಬೆರಳಿಗೆ ಗಾಯವಾಗಿದೆ. ಬಳಿಕ ಅವರು ಪಂದ್ಯದಿಂದ ಹೊರಗುಳಿಯಬೇಕಾಯಿತು. ಸದ್ಯ ಮ್ಯಾಕ್ಸ್‌ವೆಲ್ ಅವರನ್ನು ತಂಡದ ವೈದ್ಯಕೀಯ ಪರೀಕ್ಷೆ ಒಳಪಡಿಸಿ ಸ್ಕ್ಯಾನಿಂಗ್ ಮಾಡಲಾಗಿದೆ. ಆದರೆ ಯಾವುದೇ ಮೂಳೆ ಮುರಿತದ ಬಗ್ಗೆ ವರದಿಯಿಲ್ಲ. ಆದರೂ ಮ್ಯಾಕ್ಸ್‌ವೆಲ್ ಅವರಿಗೆ ಬ್ಯಾಟಿಂಗ್ ಮಾಡಲು ಅನುಮತಿ ನೀಡಿಲ್ಲ. ಹೀಗಾಗಿ ಅವರು ಭಾರತ ವಿರುದ್ಧದ ಸರಣಿಗೆ ಅನುಮಾನ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ IND VS AUS: ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದ ಡೇವಿಡ್ ವಾರ್ನರ್
ಕೆಲ ತಿಂಗಳುಗಳ ಹಿಂದೆ ಗೆಳೆಯನ ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಮ್ಯಾಕ್ಸ್‌ವೆಲ್ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದರು. ಇದರಿಂದ ಬಿಗ್ ಬ್ಯಾಶ್ ಕೂಟದಿಂದ ಮ್ಯಾಕ್ಸ್‌ವೆಲ್ ಹೊರಬಿದ್ದಿದ್ದರು. ಇದೀಗ ಭಾರತ ವಿರುದ್ಧದ ಏಕದಿನ ಸರಣಿಯ ಮೂಲಕ ಮತ್ತೆ ಕ್ರಿಕೆಟ್ಗೆ ಮರಳಲು ಯತ್ನಿಸುತ್ತಿದ್ದ ವೇಳೆ ಅವರಿಗೆ ಮತ್ತೆ ಗಾಯದ ಸಮಸ್ಯೆ ಕಾಡಿದೆ. ಇನ್ನೊಂದೆಡೆ ಡೇವಿಡ್ ವಾರ್ನರ್, ಕೆಮರೂನ್ ಗ್ರೀನ್ ಸೇರಿ ಹಲವು ಆಸೀಸ್ ಆಟಗಾರರು ಗಾಯದಿಂದ ಬಳಲುತ್ತಿದ್ದಾರೆ. ಇದೀಗ ಮ್ಯಾಕ್ಸ್‌ವೆಲ್ ಕೂಡ ಗಾಯಕ್ಕೆ ಈಡಾಗಿರುವುದು ಆಸೀಸ್ಗೆ ಮತ್ತಷ್ಟು ಚಿಂತೆಗೀಡು ಮಾಡಿದೆ.