ಇಂದೋರ್: ಭಾರತ(IND VS AUS) ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್ ನಥಾನ್ ಲಿಯೋನ್(nathan lyon) ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ. ಏಷ್ಯಾದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಅತ್ಯಧಿಕ ವಿಕೆಟ್ ಪಡೆದ ಆಟಗಾರ ಎಂಬ ನೂತನ ಮೈಲುಗಲ್ಲನ್ನು ಸ್ಥಾಪಿಸಿದರು.
ರವೀಂದ್ರ ಜಡೇಜಾ ಅವರನ್ನು ಔಟ್ ಮಾಡುತ್ತಿದ್ದಂತೆ ನಥಾನ್ ಲಿಯೋನ್ ಅವರು ಏಷ್ಯಾದಲ್ಲಿ 128 ವಿಕೆಟ್ ಕಿತ್ತ ಸಾಧನೆ ಮಾಡಿದರು. ಈ ಮೂಲಕ ಏಷ್ಯಾದಲ್ಲಿ 127 ವಿಕೆಟ್‌ಗಳನ್ನು ಕಬಳಿಸಿರುವ ಸ್ಪಿನ್ ದಂತಕೆತೆ ದಿವಂಗತ ಶೇನ್ ವಾರ್ನ್(Shane Warne) ಅವರ ದಾಖಲೆಯನ್ನು ಮುರಿದರು. ಸದ್ಯ ನಥಾನ್ ಲಿಯೋನ್ ಖಾತೆಯಲ್ಲಿ 129 ಏಷ್ಯಾ ಟೆಸ್ಟ್ ವಿಕೆಟ್‌ಗಳು ಸೇರ್ಪಡೆಯಾಗಿವೆ. ದ್ವಿತೀಯ ಇನಿಂಗ್ಸ್ನಲ್ಲಿಯೂ ಅವರು ಬೌಲಿಂಗ್ ಜಾದು ಮುಂದುವರಿಸಿದರೆ ವಿಕೆಟ್ಗಳ ಸಂಖ್ಯೆ ಏರಿಕೆ ಕಾಣಬಹುದು.
ಇದನ್ನೂ ಓದಿ IND VS AUS: ಕಪಿಲ್ ದೇವ್ ದಾಖಲೆ ಸರಿಗಟ್ಟಿದ ರವೀಂದ್ರ ಜಡೇಜಾ
ಇನ್ನು ಈ ಸಾಧನೆ ಮಾಡಿದ ಪಟ್ಟಿಯಲ್ಲಿ ನ್ಯೂಜಿಲ್ಯಾಂಡ್ನ ಮಾಜಿ ಸ್ಪಿನ್ನರ್ ಡೇನಿಯಲ್ ವೆಟ್ಟೋರಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು 98 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಹೋಳ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತದ ಕುಸಿತಕ್ಕೆ ಕಾರಣವಾದ ನಥಾನ್ ಲಿಯೋನ್ 35 ರನ್‌ಗೆ ಪ್ರಮುಖ 3 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು.