Site icon Vistara News

Ind vs Aus : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ವೇಳೆ ಸೃಷ್ಟಿಯಾಗಬಲ್ಲ ದಾಖಲೆಗಳ ವಿವರ ಇಲ್ಲಿದೆ

Team India

ಚೆನ್ನೈ: ಅಕ್ಟೋಬರ್ 8ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾವನ್ನು ಎದುರಿಸುವ ಮೂಲಕ ಆತಿಥೇಯ ಭಾರತ (ind vs aus) ತನ್ನ ಅಭಿಯಾನವನ್ನು ಪ್ರಾರಂಭಿಸಲು ಸಜ್ಜಾಗಿದೆ. ವಿಶ್ವಕಪ್ ಅಭ್ಯಾಸ ಪಂದ್ಯಗಳು ((ICC Word Cup 2023) ರದ್ದಾಗಿದ್ದ ಕಾರಣ ಭಾರತ ನೇರವಾಗಿ ಪ್ರಮುಖ ಸುತ್ತಿಗೆ ಪ್ರವೇಶ ಪಡೆದಂತಾಗಿದೆ. ಆದಾಗ್ಯೂ ಇತ್ತೀಚಿನ ಏಷ್ಯಾ ಕಪ್ 2023 ರ ಚಾಂಪಿಯನ್​ ಪಟ್ಟದಿಂದ ಸೃಷ್ಟಿಯಾಗಿರುವ ಆತ್ಮವಿಶ್ವಾಸದೊಂದಿಗೆ ತಂಡವು ಆಸ್ಟ್ರೇಲಿಯಾ ವಿರುದ್ಧದ ಕಣಕ್ಕೆ ಇಳಿಯಲಿದೆ.

ಟೂರ್ನಿಯ ಆರಂಭಕ್ಕೂ ಮುನ್ನ ಮೂರು ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ ಮೆನ್ ಇನ್ ಬ್ಲೂ ಮತ್ತು ಕಾಂಗರೂಗಳು ಪರಸ್ಪರ ಮುಖಾಮುಖಿಯಾಗಿದ್ದವು. ತವರಿನ ತಂಡವಾದ ಟೀಮ್ ಇಂಡಿಯಾ ಆರಂಭಿಕ ಎರಡು ಪಂದ್ಯಗಳನ್ನು ಗೆದ್ದುಕೊಂಡಿತು ಮತ್ತು ಕೊನೇ ಪಂದ್ಯದಲ್ಲಿ ಆಸೀಸ್ ಪುನರಾಗಮನ ಮಾಡಿತ್ತು.

ತಂಡದ ಸಂಯೋಜನೆಯ ಬಗ್ಗೆ ಮಾತನಾಡುವುದಾದರೆ, ಭಾರತದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಡೆಂಗ್ಯೂನಿಂದ ಬಳಲುತ್ತಿರುವುದರಿಂದ ಅವರ ಲಭ್ಯತೆ ಅನುಮಾನ. ನಾಲ್ಕನೇ ವಿಶ್ವಕಪ್ ಆಡಲಿರುವ ಸ್ಟಾರ್ ವಿರಾಟ್ ಕೊಹ್ಲಿ ಮೇಲೆ ಎಲ್ಲರ ನಿರೀಕ್ಷೆಯಿದೆ. ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ಕುಲದೀಪ್ ಯಾದವ್ ಈ ವಿಶ್ವಕಪ್​ನಲ್ಲಿ ಸ್ಥಿರ ಪ್ರದರ್ಶನ ನೀಡಬಹುದು ಎಂಬುದು ಅಭಿಮಾನಿಗಳ ಅಭಿಲಾಷೆ.

ಇದನ್ನೂ ಓದಿ : ind vs aus : ವಿಶ್ವ ಕಪ್​ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸುವುದೇ ಭಾರತ?

ಆಸೀಸ್ ಪರ, ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಗಾಯದ ಕಾರಣ ಸ್ಪರ್ಧೆಯ ಆರಂಭಿಕ ಹಂತದಿಂದ ಹೊರಗುಳಿಯಲಿದ್ದಾರೆ. ಮಿಚೆಲ್ ಮಾರ್ಷ್ ಆರಂಭಿಕರಾಗಿ ಡೇವಿಡ್ ವಾರ್ನರ್ ಅಗ್ರಸ್ಥಾನದಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್ವೆಲ್, ಮಿಚೆಲ್ ಸ್ಟಾರ್ಕ್ ಮತ್ತು ನಾಯಕ ಪ್ಯಾಟ್ ಕಮಿನ್ಸ್ ಅವರ ಮೇಲೆ ಕಾಂಗರೂಗಳು ಅವಲಂಬಿತರಾಗಿದ್ದಾರೆ. ಏತನ್ಮಧ್ಯೆ, ವಿಶ್ವಕಪ್ 2023 ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಸಂಖ್ಯೆ 5ರಲ್ಲಿ ಸೃಷ್ಟಿಯಾಗಬಹುದಾದ ಕೆಲವು ದಾಖಲೆಗಳು ಇಲ್ಲಿವೆ.

ಭಾರತ ಮತ್ತು ಆಸ್ಟ್ರೇಲಿಯಾ ಏಕದಿನ ಪಂದ್ಯಗಳಲ್ಲಿ 149 ಬಾರಿ ಮುಖಾಮುಖಿಯಾಗಿದ್ದು, ಭಾರತ ತಂಡ 56 ಬಾರಿ ಗೆದ್ದಿದ್ದರೆ, ಆಸೀಸ್ 83 ಬಾರಿ ಗೆದ್ದಿದೆ. ಹತ್ತು ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ.

8- ಏಕದಿನ ಕ್ರಿಕೆಟ್ನಲ್ಲಿ 300 ಸಿಕ್ಸರ್​ಗಳ ಗಡಿ ದಾಟಲು ರೋಹಿತ್ ಶರ್ಮಾಗೆ (292) ಎಂಟು ಸಿಕ್ಸರ್​ಗಳ ಅಗತ್ಯವಿದೆ.

3- ಕ್ರಿಸ್ ಗೇಲ್ (553) ಅವರನ್ನು ಹಿಂದಿಕ್ಕಲು ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹೆಚ್ಚು ಸಿಕ್ಸರ್​ಗಳ ಬಾರಿಸಿದ ಬ್ಯಾಟರ್​ ಆಗಲು ರೋಹಿತ್ (551) ಮೂರು ಸಿಕ್ಸರ್​ಗಳ ಅಗತ್ಯವಿದೆ.

    83 – ಶುಬ್ಮನ್ ಗಿಲ್ (1917) 50 ಓವರ್​ಗಳ ಸ್ವರೂಪದಲ್ಲಿ 2000 ರನ್​ಗಳ ಮೈಲಿಗಲ್ಲನ್ನು ತಲುಪಲು 83 ರನ್​ಗಳ ಅಗತ್ಯವಿದೆ.

    1- ಸ್ಟೀವನ್ ಸ್ಮಿತ್ (49) ಏಕದಿನ ಮಾದರಿಯಲ್ಲಿ 50 ಸಿಕ್ಸರ್​ಗಳನ್ನು ತಲುಪಲು ಒಂದು ದೊಡ್ಡ ಹಿಟ್ ಅಗತ್ಯವಿದೆ.

    114 – ಇಶಾನ್ ಕಿಶನ್ ಅವರಿಗೆ (886) ಏಕದಿನ ಪಂದ್ಯಗಳಲ್ಲಿ 1000 ರನ್​ಗಳ ಮೈಲಿಗಲ್ಲನ್ನು ತಲುಪಲು 114 ರನ್​ಗಳ ಅಗತ್ಯವಿದೆ.

    7- ಗ್ಲೆನ್ ಮ್ಯಾಕ್ಸ್ವೆಲ್ (5993) ಎಲ್ಲಾ ಸ್ವರೂಪದ ಕ್ರಿಕೆಟ್​​ನಲ್ಲಿ 6000 ರನ್ ಪೂರೈಸಲು ಏಳು ರನ್​ಗಳ ಅಗತ್ಯವಿದೆ.

    5- ಮಾರ್ಕಸ್ ಸ್ಟೊಯಿನಿಸ್ (45) ಏಕದಿನ ಕ್ರಿಕೆಟ್​​ನಲ್ಲಿ 50 ಸಿಕ್ಸರ್​ಗಳನ್ನು ತಲುಪಲು 5 ದೊಡ್ಡ ಹಿಟ್​ಗಳ ಅಗತ್ಯವಿದೆ.

    150 – ಭಾರತ ಮತ್ತು ಆಸ್ಟ್ರೇಲಿಯಾ ತಮ್ಮ 150 ನೇ ಏಕದಿನ ಪಂದ್ಯವನ್ನು ಆಡಲಿವೆ.

    5- ರವೀಂದ್ರ ಜಡೇಜಾ (95) ಅವರಿಗೆ ತವರಿನಲ್ಲಿ ಏಕದಿನ ಪಂದ್ಯಗಳಲ್ಲಿ 100 ವಿಕೆಟ್ ಪಡೆಯಲು ಐದು ವಿಕೆಟ್ ಅಗತ್ಯವಿದೆ.

    10- ಇಶಾನ್ (90) ಏಕದಿನ ಕ್ರಿಕೆಟ್​ನಲ್ಲಿ 100 ಬೌಂಡರಿಗಳನ್ನು ಪೂರೈಸಲು ಹತ್ತು ಫೋರ್​ಗಳ ದೂರದಲ್ಲಿದ್ದಾರೆ.

    Exit mobile version