Site icon Vistara News

IND VS AUS: ನೆಟ್ಸ್​ನಲ್ಲಿ ಜತೆಯಾಗಿ ಬ್ಯಾಟಿಂಗ್​ ಅಭ್ಯಾಸ ನಡೆಸಿದ ರಾಹುಲ್​-ಗಿಲ್​

IND VS AUS: Rahul-Gil practiced batting together in the nets

IND VS AUS: Rahul-Gil practiced batting together in the nets

ಇಂದೋರ್​: ಭಾರತ ಮತ್ತು ಆಸ್ಟ್ರೇಲಿಯಾ(IND VS AUS) ವಿರುದ್ಧದ ಮೂರನೇ ಟೆಸ್ಟ್​ ಪಂದ್ಯ ಬುಧವಾರ(ಮಾರ್ಚ್​ 1) ದಿಂದ ಇಂದೋರ್​ನಲ್ಲಿ ಆರಂಭವಾಗಲಿದೆ. ಕಳಪೆ ಬ್ಯಾಟಿಂಗ್​ನಿಂದ ಟೀಕೆಗೆ ಗುರಿಯಾಗಿದ್ದ ಕೆ.ಎಲ್​ ರಾಹುಲ್(kl Rahul) ಅವರಿಗೆ ಈ ಪಂದ್ಯದಲ್ಲಿ ಅವಕಾಶ ಸಿಗಲಿದೆಯಾ ಎಂಬ ಚರ್ಚೆಗಳು ಕಳೆದ ಕೆಲದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ನಡೆದಿದೆ.

ಈಗಾಗಲೇ ಮಾಜಿ ಕ್ರಿಕೆಟ್​ ಆಟಗಾರರು ರಾಹುಲ್​ ಅವರನ್ನು ಮೂರನೇ ಪಂದ್ಯದಿಂದ ಕೈ ಬಿಟ್ಟು ಅವರ ಬದಲಿಗೆ ಯುವ ಆಟಗಾರ ಶುಭ​ಮನ್​ ಗಿಲ್​(Shubman Gill) ಅವರಿಗೆ ಸ್ಥಾನ ನೀಡುವಂತೆ ಒತ್ತಾಯಿದ್ದಾರೆ. ಇದೀಗ ಈ ಚರ್ಚೆಯ ಮಧ್ಯೆ ಶುಭಮನ್​ ಗಿಲ್​ ಮತ್ತು ರಾಹುಲ್​ ಜತೆಯಾಗಿ ಬ್ಯಾಟಿಂಗ್​ ಅಭ್ಯಾಸ ನಡೆಸಿದ್ದಾರೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ IND VS AUS: ಇಂದೋರ್​ನಲ್ಲಿ ಟೀಮ್​ ಇಂಡಿಯಾ ಆಟಗಾರರ ಟೆಸ್ಟ್​ ಸಾಧನೆ ಹೇಗಿದೆ?

ಕೆ.ಎಲ್‌. ರಾಹುಲ್‌ ಮತ್ತು ಶುಭಮನ್‌ ಗಿಲ್‌ ಅವರಿಗೆ ಜತೆಯಾಗಿ ಕೋಚ್‌ ರಾಹುಲ್‌ ದ್ರಾವಿಡ್‌ ಬ್ಯಾಟಿಂಗ್​ ಮಾರ್ಗದರ್ಶನ ನೀಡಿದ್ದಾರೆ. ಇಬ್ಬರೂ ಸುಮಾರು ಅರ್ಧ ಗಂಟೆ ಕಾಲ ಒಟ್ಟೊಟ್ಟಿಗೇ ಬ್ಯಾಟಿಂಗ್‌ ಅಭ್ಯಾಸ ನಡೆಸಿದರು. ರಾಹುಲ್‌ ಮತ್ತು ಗಿಲ್‌ ಅಕ್ಕಪಕ್ಕದ ನೆಟ್ಸ್​ನಲ್ಲಿ ಏಕಕಾಲಕ್ಕೆ ಬ್ಯಾಟಿಂಗ್‌ ಅಭ್ಯಾಸ ನಡೆಸಿದರು. ಉಭಯ ಆಟಗಾರರು ಅಭ್ಯಾಸ ನಡೆಸಿದ್ದನ್ನು ನಾಯಕ ರೋಹಿತ್​ ಶರ್ಮಾ ಕೂಡ ವಿಕ್ಷಿಸಿಸಿದ್ದಾರೆ.

ರಾಹುಲ್‌ ಮೊದಲು ವೇಗದ ಎಸೆತಗಳನ್ನು ಎದುರಿಸಿ ಬಳಿಕ ಸ್ಪಿನ್‌ ಎಸೆತಕ್ಕೆ ಬ್ಯಾಟ್​ ಬೀಸಿದರು. ಒಟ್ಟಾರೆ ಮೂರನೇ ಪಂದ್ಯದಲ್ಲಿ ಯಾರು ಅವಕಾಶ ಪಡೆಯಲಿದ್ದಾರೆ ಎಂಬ ಕುತೂಹಲಕ್ಕೆ ಬುಧವಾರ(ಮಾ.1) ತೆರೆ ಬೇಳಲಿದೆ.

Exit mobile version