ಇಂದೋರ್: ಆಸ್ಟ್ರೇಲಿಯಾ(IND VS AUS) ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ(ravindra jadeja) ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಈ ಮೂಲಕ ಕಪಿಲ್ ದೇವ್(kapil dev) ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.
ಇಂದೋರ್ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಅವರ ವಿಕೆಟ್ ಪಡೆಯುವ ಮೂಲಕ ರವೀಂದ್ರ ಜಡೇಜಾ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 500 ವಿಕೆಟ್ಗಳನ್ನು ಪೂರೈಸಿದರು. ಇದೇ ವೇಳೆ ಅವರು ಭಾರತ ಪರ 500 ವಿಕೆಟ್ ಹಾಗೂ 5 ಸಾವಿರ ರನ್ ಕಲೆಹಾಕಿದ 2ನೇ ಆಟಗಾರ ಎಂಬ ವಿಶೇಷ ದಾಖಲೆಯನ್ನು ಬರೆದರು. ಇದಕ್ಕೂ ಮುನ್ನ ಈ ದಾಖಲೆ ಕಪಿಲ್ ದೇವ್ ಅವರ ಹೆಸರಿನಲ್ಲಿತ್ತು.
ಸದ್ಯ ಜಡೇಜಾ ಟೀಮ್ ಇಂಡಿಯಾ ಪರ ಒಟ್ಟು 298 ಪಂದ್ಯಗಳನ್ನು (ಏಕದಿನ, ಟೆಸ್ಟ್, ಟಿ20) ಆಡಿ, 5527 ರನ್ ಕಲೆಹಾಕಿದ್ದಾರೆ. ಜತೆಗೆ 500* ವಿಕೆಟ್ ಕಬಳಿಸಿ ಕಪಿಲ್ ಹೆಸರಿನಲ್ಲಿದ್ದ 5000 ರನ್ ಹಾಗೂ 500 ವಿಕೆಟ್ ಪಡೆದ ದಾಖಲೆಯನ್ನು ಸರಿಗಟ್ಟಿದ್ದಾರೆ.
ಇದನ್ನೂ ಓದಿ IND VS AUS: ಹಲವು ಜೀವದಾನ ಪಡೆದರೂ ಸದುಪಯೋಗ ಪಡಿಸಿಕೊಳ್ಳದ ಭಾರತೀಯ ಆಟಗಾರರ ವಿರುದ್ಧ ನೆಟ್ಟಿಗರ ಆಕ್ರೋಶ
ಭಾರತದ ಮೊದಲ ಇನಿಂಗ್ಸ್ನ 109 ರನ್ ಬೆನ್ನಟ್ಟುತ್ತಿರುವ ಆಸ್ಟ್ರೇಲಿಯಾ ಒಂದು ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿ ಬ್ಯಾಟಿಂಗ್ ನಡೆಸುತ್ತಿದೆ.