ಚೆನ್ನೈ: ಭಾರತ ಮತ್ತು ಆಸ್ಟ್ರೇಲಿಯಾ(IND VS AUS) ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ನಾಯಿಯೊಂದು ಮೈದಾನಕ್ಕೆ ನುಗ್ಗಿದ ಘಟನೆ ನಡೆದಿದೆ. ನಾಯಿಯನ್ನು ಹಿಡಿಯಲೆತ್ನಿಸಿದ ರವೀಂದ್ರ ಜಡೇಜಾ(ravindra jadeja) ಅವರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟಿಂಗ್ ಇನಿಂಗ್ಸ್ನ 43ನೇ ಓವರ್’ನಲ್ಲಿ ನಾಯಿಯೊಂದು ಆಟದ ಮೈದಾನಕ್ಕೆ ನುಗ್ಗಿದೆ. ಇದನ್ನು ಓಡಿಸಲೆಂದೆ ಸ್ವಲ್ಪ ಸಮಯದವರೆಗೆ ಆಟವನ್ನು ನಿಲ್ಲಿಸಬೇಕಾಯಿತು. ಭದ್ರತಾ ಸಿಬ್ಬಂದಿಗಳು ನಾಯಿಯನ್ನು ಹಿಡಿಯಲು ಮೈದಾನ ತುಂಬಾ ಓಡಾಡಿದ್ದಾರೆ. ಈ ಸಂದರ್ಭದಲ್ಲಿ ರವೀಂದ್ರ ಜಡೇಜಾ ಕೂಡ ನಾಯಿ ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ನಾಯಿ ತಪ್ಪಿಸಿಕೊಂಡು ಓಡಿದೆ.
ಇದೇ ವೇಳೆ ಕಾಮೆಂಟರಿ ಮಾಡುತ್ತಿರುವ ಸುನಿಲ್ ಗವಾಸ್ಕರ್ ಅವರು ಈ ನಾಯಿ ತನ್ನನ್ನು ಹಿಂಬಾಲಿಸುವ ಮೈದಾನದ ಸಿಬ್ಬಂದಿಯ ಫಿಟ್ನೆಸ್ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದೆ ಎಂದು ಹಾಸ್ಯ ಮಾಡಿದ್ದಾರೆ. ಭಾರತದ ಬ್ಯಾಟಿಂಗ್ ಇನಿಂಗ್ಸ್ ವೇಳೆಯೂ ಇಂತಹದ್ದೇ ಘಟನೆ ಮರುಕಳಿಸಿತು. ಆದರೆ ಇಲ್ಲಿ ಗಿಡುವೊಂದು ಮೈದಾನದಲ್ಲಿ ಹಾರುತ್ತಿದ್ದ ಕೀಟವೊಂದನ್ನು ಭೇಟೆಯಾಡಿದೆ. ಆದರೆ ಪಂದ್ಯಕ್ಕೆ ಯಾವುದೇ ಅಡ್ಡಿಯಾಗಿಲ್ಲ.
ಇದನ್ನೂ ಓದಿ IND VS AUS: ಆಸೀಸ್ ವಿರುದ್ಧ ಭಾರತಕ್ಕೆ ಸರಣಿ ಸೋಲಿನ ಆಘಾತ; 21 ರನ್ ಗೆಲುವು ಸಾಧಿಸಿದ ಸ್ಮಿತ್ ಪಡೆ
ಇದನ್ನೂ ಓದಿ IND VS AUS: ಸರಣಿ ಸೋಲಿಗೆ ನಾಯಕ ರೋಹಿತ್ ಶರ್ಮಾ ನೀಡಿದ ಕಾರಣವೇನು?
ಚೆನ್ನೈಯ ಚೆಪಾಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ 49 ಓವರ್ಗಳಲ್ಲಿ 269 ರನ್ಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಭಾರತ ಉತ್ತಮ ಆರಂಭದ ಹೊರತಾಗಿಯೂ 49.1 ಓವರ್ಗಳಲ್ಲಿ 248 ರನ್ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲನುಭವಿಸಿತು. ಈ ಮೂಲಕ ಭಾರತ ಕಳೆದ ನಾಲ್ಕು ವರ್ಷಗಳ ಬಳಿಕ ತವರಿನಲ್ಲಿ ದ್ವಿಪಕ್ಷೀಯ ಏಕದಿನ ಸರಣಿ ಸೋಲಿಗೆ ತುತ್ತಾಯಿತು. ಕೊನೆಯ ಬಾರಿ ಭಾರತ ತಂಡ 2019ರಲ್ಲಿ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು.