ಇಂದೋರ್: ಈಗಾಗಲೇ ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಸೋತಿರುವ ಆಸ್ಟ್ರೇಲಿಯಾ(IND VS AUS) ತಂಡ ಭಾರತ ವಿರುದ್ಧ ಮೂರನೇ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದೆ. ಈ ಪಂದ್ಯದಲ್ಲಿ ಭಾರತ ತಂಡದ ಸವಾಲನ್ನು ಸಮರ್ಥವಾಗಿ ಎದುರಿಸಲು ಸಿದ್ಧರಿದ್ದೇವೆ ಎಂದು ಹಂಗಾಮಿ ನಾಯಕ ಸ್ಟೀವನ್ ಸ್ಮಿತ್(steven smith) ಹೇಳಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯ ಮಾರ್ಚ್ 1 ಬುಧವಾರದಿಂದ ಇಂದೋರ್‌ನಲ್ಲಿ ಆರಂಭವಾಗಲಿದೆ. ಇದಕ್ಕೂ ಮುನ್ನ ಮಂಗಳವಾರ(ಫೆ.28) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಟೀವನ್ ಸ್ಮಿತ್, ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಲು ನಾನು ಉತ್ಸುಕನಾಗಿದ್ದೇನೆ. ಇಲ್ಲಿನ ಪರಿಸ್ಥಿತಿಗಳು ನನಗೆ ಚೆನ್ನಾಗಿ ತಿಳಿದಿದೆ ಎಂದು ಹೇಳಿದರು.
“ನಾನು ಭಾರತದಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ ಆಡಿದ್ದೇನೆ. ಇದು ನನ್ನ ಎರಡನೇ ಮನೆ ಇದ್ದಂತೆ. ಈಗಾಗಲೇ ನಾವು ಎರಡು ಪಂದ್ಯಗಳನ್ನು ಸೋತಿದ್ದೇವೆ. ಆದರೆ ಇದರ ಬಗ್ಗೆ ಯೋಚಿಸದೆ ಮುಂದಿನ ಪಂದ್ಯದ ಕಡೆಗೆ ಸಂಪೂರ್ಣ ಗಮನಹರಿಸಿದ್ದು ಈ ಪಂದದಲ್ಲಿ ಭಾರತದ ಸವಾಲನ್ನು ಮೀರಿಸಲು ಸಿದ್ಧರಿದ್ದೇವೆ” ಎಂದು ಸ್ಮಿತ್ ಹೇಳಿದರು.
ಇದೇ ವೇಳೆ ಅವರು ಇಂದೋರ್ ಟೆಸ್ಟ್‌ಗೆ ಆಡುವ ಬಳವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಕಮಿನ್ಸ್ ಮತ್ತು ವಾರ್ನರ್ ಬದಲು ಕ್ಯಾಮರೂನ್ ಗ್ರೀನ್ ಮತ್ತು ಮಿಚೆಲ್ ಸ್ಟಾರ್ಕ್ ಅವರನ್ನು ತಂಡಕ್ಕೆ ಸೇರಿಸುವ ಚರ್ಚೆಗಳು ನಡೆದಿದ್ದರೂ ಅವರ ಫಿಟ್‌ನೆಸ್ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.