ಅಹಮದಾಬಾದ್: ಇಂದೋರ್ ಟೆಸ್ಟ್ ಪಂದ್ಯದ ಸೋಲಿಗೆ ಆಟಗಾರರ ಅತಿಯಾದ ಆತ್ಮವಿಶ್ವಾಸವೇ ಕಾರಣ ಎಂದು ಹೇಳಿದ್ದ ರವಿಶಾಸ್ತ್ರಿ(Ravi Shastri) ಅವರ ಹೇಳಿಕೆಗೆ ಇದೀಗ ರೋಹಿತ್ ಶರ್ಮಾ(Rohit Sharma) ಇದೊಂದು ಅಸಂಬದ್ಧ ಹೇಳಿಕೆಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಗುರುವಾರ(ಮಾರ್ಚ್ 9) ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದೆ. ಪಂದ್ಯಕ್ಕೂ ಮುನ್ನ ಮಾತನಾಡಿದ ನಾಯಕ ರೋಹಿತ್ ಶರ್ಮಾ ರವಿಶಾಸ್ತ್ರಿ ಅವರದ್ದು ‘ಅಸಂಬದ್ಧ’ ಹೇಳಿಕೆ ಎಂದಿದ್ದಾರೆ.
ಇದನ್ನೂ ಓದಿ IND VS AUS: ಕ್ರಿಕೆಟ್ ಕಾಮೆಂಟರಿ ಮಾಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ!
“ರವಿಶಾಸ್ತ್ರಿಗೆ ನಮ್ಮ ಮನಸ್ಥಿತಿ ಬಗ್ಗೆ ಚೆನ್ನಾಗಿ ತಿಳಿದಿದೆ. ನಾವು ಅತಿಯಾದ ಆತ್ಮವಿಶ್ವಾಸ ಹೊಂದಿದ್ದೇವೆ ಎಂದು ಅವರು ಭಾವಿಸಿದರೆ ಅದು ಮೂರ್ಕತನ. ಏಕೆಂದರೆ ಸತತ ಪಂದ್ಯಗಳನ್ನು ಗೆದ್ದ ಬಳಿಕ ಮುಂದಿನ ಪಂದ್ಯದಲ್ಲಿ ಸೋತರೆ ಸಾಮಾನ್ಯವಾಗಿ ಜನ ಈ ಸೋಲಿಗೆ ತಂಡದ ಅತಿಯಾದ ಆತ್ಮವಿಶ್ವಾಸವೇ ಕಾರಣ ಎಂದು ಹೇಳುತ್ತಾರೆ. ಇದೇ ಮನಸ್ಥಿತಿಯಲ್ಲಿ ರವಿಶಾಸ್ತ್ರಿ ಕೂಡ ಈ ಹೇಳಿಕೆ ನೀಡಿದ್ದಾರೆ. ನನ್ನ ಪ್ರಕಾರ ಇದೊಂದು ಸಂಪೂರ್ಣ ಅಸಂಬದ್ಧ ಹೇಳಿಕೆ” ಎಂದು ಅಭಿಪ್ರಾಯಪಟ್ಟರು.