Site icon Vistara News

IND VS AUS: ಒಂದೇ ಇನಿಂಗ್ಸ್​ನಲ್ಲಿ 2 ದಾಖಲೆ ಬರೆದ ರೋಹಿತ್​ ಶರ್ಮಾ; ಏನದು?

IND VS AUS: Rohit Sharma records 2 in a single innings; what is

IND VS AUS: Rohit Sharma records 2 in a single innings; what is

ಅಹಮದಾಬಾದ್‌: ಆಸ್ಟ್ರೇಲಿಯಾ(IND VS AUS) ವಿರುದ್ಧ ನಡೆಯುತ್ತಿರುವ ಬಾರ್ಡರ್​-ಗವಾಸ್ಕರ್​ ಟೆಸ್ಟ್​ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮಾ(Rohit Sharma) ಒಂದೇ ಇನಿಂಗ್ಸ್​ನಲ್ಲಿ ಎರಡು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ಮೂರನೇ ದಿನದಾಟದಲ್ಲಿ ರೋಹಿತ್​ ಶರ್ಮಾ 35 ರನ್​ ಗಳಿಸಿ ಮ್ಯಾಥ್ಯೂ ಕುಹ್ನೆಮನ್​ಗೆ ವಿಕೆಟ್​ ಒಪ್ಪಿಸಿದರು. ಆದರೆ ರೋಹಿತ್​ 35 ರನ್‌ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 17 ಸಾವಿರ ರನ್‌ಗಳನ್ನು ಪೂರ್ಣಗೊಳಿಸಿದರು.

ರೋಹಿತ್​ ಶರ್ಮಾ ಈ ಸಾಧನೆಯೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 17 ಸಾವಿರ ರನ್‌ ಪೂರ್ಣಗೊಳಿಸಿರುವ ಸಚಿನ್‌ ತೆಂಡೂಲ್ಕರ್‌, ವಿರಾಟ್‌ ಕೊಹ್ಲಿ ಅವರನ್ನೊಳಗೊಂಡಿರುವ ಎಲೈಟ್‌ ಲಿಸ್ಟ್‌ಗೆ ಸೇರ್ಪಡೆಗೊಂಡರು. ಜತೆಗೆ ಈ ಸಾಧನೆ ಮಾಡಿದ ಭಾರತದ ಏಳನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡರು.

ಇದನ್ನೂ ಓದಿ IND VS AUS: ಶುಭಮನ್​ ಗಿಲ್​ ಶತಕ; ಬೃಹತ್ ಮೊತ್ತದತ್ತ ಭಾರತ

ಮೊಹಮ್ಮದ್‌ ಅಜರುದ್ದೀನ್‌ ದಾಖಲೆ ಮುರಿದ ರೋಹಿತ್​

17 ಸಾವಿರ ರನ್​ ಪೂರ್ತಿಗೊಳಿಸಿದ ದಾಖಲೆ ಜತೆಗೆ ರೋಹಿತ್​ ಶರ್ಮಾ ಮತ್ತೊಂದು ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದಿದ್ದಾರೆ. ತವರಿನಲ್ಲಿ ಅತಿ ವೇಗವಾಗಿ 2 ಸಾವಿರ ಟೆಸ್ಟ್ ರನ್ ಗಳಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಈ ಸಾಧನೆಯೊಂದಿಗೆ ಮೊಹಮ್ಮದ್‌ ಅಜರುದ್ದೀನ್‌ ಅವರನ್ನು ಹಿಂದಿಕ್ಕಿದ್ದಾರೆ.

Exit mobile version