Site icon Vistara News

IND VS AUS: ಗಾಯಾಳು ಶ್ರೇಯಸ್​ ಬದಲು ಸಂಜು ಸ್ಯಾಮ್ಸನ್​ಗೆ ಅವಕಾಶ!

IND VS AUS: Sanju Samson replaces injured Shreyas!

IND VS AUS: Sanju Samson replaces injured Shreyas!

ಮುಂಬಯಿ: ಆಸ್ಟ್ರೇಲಿಯಾ(IND VS AUS) ವಿರುದ್ಧದ ಅಂತಿಮ ಟೆಸ್ಟ್​ನಲ್ಲಿ ಬೆನ್ನು ನೋವಿಗೆ ತುತ್ತಾಗಿ ಪಂದ್ಯದಿಂದ ಹೊರಬಿದ್ದ ಶ್ರೇಯಸ್​ ಅಯ್ಯರ್(Shreyas Iyer)​ ಏಕದಿನ ಸರಣಿಗೂ ಅನುಮಾನ ಎನ್ನಲಾಗಿದೆ. ಇದೀಗ ಅಯ್ಯರ್​​ ಬದಲಿಗೆ ಕೇರಳದ ಸಂಜು ಸ್ಯಾಮ್ಸನ್(Sanju Samson)​ ಅವರನ್ನು ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಅಹಮದಾಬಾದ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡ ಶ್ರೇಯಸ್​ ಅಯ್ಯರ್​ ಈ ಪಂದ್ಯದಲ್ಲಿ ಬ್ಯಾಟಿಂಗ್​ ನಡೆಸಲಿಲ್ಲ. ಸದ್ಯ ಟೀಮ್​ ಇಂಡಿಯಾದ ವೈದ್ಯರ ನಿಗಾದಲ್ಲಿರುವ ಅಯ್ಯರ್ ತಂಡಕ್ಕೆ ಮರಳುವ ಯಾವುದೇ ಮಾಹಿತಿ ಇದುವರೆಗೆ ಬಂದಿಲ್ಲ. ಆದರೆ ಇದೀಗ ಅಯ್ಯರ್ ಬದಲಿಗೆ ಸಂಜು ಸ್ಯಾಮ್ಸನ್​ ಅವರಿಗೆ ಅವಕಾಶ ನೀಡಲಾಗುವುದು ಎಂದು ವರದಿಯಾಗಿದೆ.

ಇದನ್ನೂ ಓದಿ IND VS AUS: ಆಸೀಸ್​ ವಿರುದ್ಧದ ಏಕದಿನ ಸರಣಿಯಲ್ಲಿ ಕೆ.ಎಲ್​ ರಾಹುಲ್​ ಕೀಪರ್​!

ಸಂಜು ಸ್ಯಾಮ್ಸನ್​ ಅವರು ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದರು. ಆ ಬಳಿಕ ನಡೆದ ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿಯಲ್ಲಿಯೂ ಅವರು ಕಾಣಿಸಿಕೊಂಡಿರಲಿಲ್ಲ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅವರಿಗೆ ಅವಕಾಶ ಸಿಗಲಿದೆಯಾ ಎಂದು ಕಶದು ನೋಡಬೇಕಿದೆ. ಮಾಧ್ಯಮ ವರದಿಗಳ ಪ್ರಕಾರ ಗಾಯಗೊಂಡಿರುವ ಅಯ್ಯರ್ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

Exit mobile version