Site icon Vistara News

IND VS AUS: ಭಾರತ ವಿರುದ್ಧದ ನಾಲ್ಕನೇ ಟೆಸ್ಟ್​ ಪಂದ್ಯಕ್ಕೂ ಸ್ಟೀವನ್​ ಸ್ಮಿತ್​ ನಾಯಕ

IND VS AUS: Smith captains the fourth Test match against India

IND VS AUS: Smith captains the fourth Test match against India

ಅಹಮದಾಬಾದ್: ಭಾರತ(IND VS AUS) ವಿರುದ್ಧದ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯಕ್ಕೂ ನಾಯಕ ಪ್ಯಾಟ್ ಕಮಿನ್ಸ್(Pat Cummins) ಅವರು ಅಲಭ್ಯರಾಗುತ್ತಿದ್ದಾರೆ. ಹೀಗಾಗಿ ಮೂರನೇ ಪಂದ್ಯದಲ್ಲಿ ಆಸೀಸ್​ ನಾಯಕತ್ವ ವಹಿಸಿದ ಸ್ಟೀವನ್​ ಸ್ಮಿತ್(Steven Smith) ಅವರೇ ಅಂತಿಮ ಪಂದ್ಯಕ್ಕೂ ನಾಯಕರಾಗಿ ಮುಂದುವರಿದಿದ್ದಾರೆ.

ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿಯೂ ಸ್ಟೀವನ್​ ಸ್ಮಿತ್​ ನಾಯಕತ್ವ ವಹಿಸುವ ವಿಚಾರವನ್ನು ಕ್ರಿಕೆಟ್​ ಆಸ್ಟ್ರೇಲಿಯಾ ಖಚಿತ ಪಡಿಸಿದೆ. ಇಂದೋರ್​ನಲ್ಲಿ ನಡೆದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಸ್ಮಿತ್ ನಾಯಕತ್ವದಲ್ಲಿ​ ಆಸೀಸ್​ ತಂಡ ಒಂಬತ್ತು ವಿಕೆಟ್ ಗೆಲುವು ಸಾಧಿಸುವ ಜತೆಗೆ ಐಸಿಸಿ ಟೆಸ್ಟ್​ ಚಾಂಪಿಯನ್​​ಶಿಪ್ ಫೈನಲ್​ಗೂ ಪ್ರವೇಶ ಪಡೆದಿತ್ತು.

ಇದನ್ನೂ ಓದಿ IND VS AUS: ಹೇಗಿರಲಿದೆ ಅಂತಿಮ ಟೆಸ್ಟ್​ ಪಂದ್ಯದ ಪಿಚ್​; ಕ್ಯುರೇಟರ್‌ ನೀಡಿದ ಉತ್ತರ ಏನು?

ದ್ವಿತೀಯ ಟೆಸ್ಟ್ ಪಂದ್ಯದ ಬಳಿಕ ಪ್ಯಾಟ್ ಕಮಿನ್ಸ್ ಅವರು ತಾಯಿಯ ಅನಾರೋಗ್ಯ ನಿಮಿತ್ತ ತವರಿಗೆ ಮರಳಿದ್ದರು. ತಾಯಿಯ ಆರೈಕೆಗಾಗಿ ಮೂರನೇ ಟೆಸ್ಟ್​ ಪಂದ್ಯಕ್ಕೆ ಅಲಭ್ಯರಾಗಲಿದ್ದೇನೆ ಎಂದು ತಿಳಿಸಿದ್ದರು. ಇದೀಗ ಅಂತಿಮ ಟೆಸ್ಟ್​ ಪಂದ್ಯದಿಂದಲೂ ಹೊರಗುಳಿದಿದ್ದಾರೆ. ಸದ್ಯ ಕಮಿನ್ಸ್​ ಅವರು ಏಕದಿನ ಸರಣಿ ವೇಖೆಗೆ ತಂಡ ಸೇರಲಿದ್ದಾರಾ ಎಂಬ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Exit mobile version