Site icon Vistara News

IND vs AUS: ಇಂಗಾಲ ಹೊರಸೂಸುವಿಕೆ ತಗ್ಗಿಸಲು ಹೋಳ್ಕರ್ ಸ್ಟೇಡಿಯಂಗೆ ಸೋಲಾರ್ ಪ್ಯಾನೆಲ್ ಅಳವಡಿಕೆ

Madhya Pradesh Cricket Association they install close to 376 solar panels in Holkar Stadium, Indore

ಇಂದೋರ್​: ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ (MPCA) ಇಂಗಾಲ ಹೊರಸೂಸುವಿಕೆ ತಗ್ಗಿಸಲು(carbon emissions) ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ(IND vs AUS) ಏಕದಿನ ಪಂದ್ಯದ ವೇಳೆ ಇಂದೋರ್​ನ ಹೋಳ್ಕರ್ ಸ್ಟೇಡಿಯಂನ(Holkar Stadium) ಮೇಲ್ಛಾವಣಿಗೆ ಸೋಲಾರ್ ಪ್ಯಾನೆಲ್​ಗಳ ಅಳವಡಿಕೆಯ ಉದ್ಘಾಟನೆ ಮಾಡಲಾಯಿತು.

ಹೋಳ್ಕರ್ ಕ್ರೀಡಾಂಗಣದಲ್ಲಿ 370 ಸೌರ ಫಲಕಗಳನ್ನು ಅಳವಡಿಸುವ ಮೂಲಕ ಹಸಿರು ಭಾರತದ ಅಭಿಯಾನಕ್ಕೆ ಮಹತ್ವದ ಹೆಜ್ಜೆ ಇಟ್ಟಿದೆ. ಈ ಉಪಕ್ರಮದಿಂದಾಗಿ ಪ್ರತಿ ವರ್ಷ 277 ಟನ್ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುಲಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಸೌರಫಲಕ ಉದ್ಘಾಟನೆಯನ್ನು ಟೀಮ್​ ಇಂಡಿಯಾದ ಹಂಗಾಮಿ ನಾಯಕ ಕೆ.ಎಲ್​ ರಾಹುಲ್(KL Rahul)​ ಅವರು ಮಾಡಿದರು. ಈ ವೇಳೆ ಬಿಸಿಸಿಐ ಮತ್ತು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ IND vs AUS: ಅಯ್ಯರ್​ ಬ್ಯಾಟಿಂಗ್​ ಆವೇಶ ಕಂಡು ನಿಟ್ಟುಸಿರು ಬಿಟ್ಟ ಆಯ್ಕೆ ಸಮಿತಿ

ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಈ ಕಾರ್ಯಕ್ಕೆ ಬಿಸಿಸಿಐ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಸಿಸಿಐ, ಇಂಗಾಲ ಹೊರಸೂಸುವಿಕೆ ತಗ್ಗಿಸುವ ಮಹತ್ವದ ಕ್ರಮ ಕೈಗೊಂಡ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಈ ನಿರ್ಧಾರ ಎಲ್ಲರಿಗೂ ಮಾದರಿಯಾಗಿದೆ” ಎಂದು ಟ್ವೀಟ್ ಮಾಡಿದೆ.

ಪರಿಸರ ಉಳಿಸುವ ನಿಟ್ಟಿನಲ್ಲಿ ಬಿಸಿಸಿಐ ಈ ಬಾರಿಯ ಐಪಿಎಲ್​ನಲ್ಲಿ ಮಹತ್ವದ ಅಭಿಯಾನವನ್ನು ಕೈಗೊಂಡಿತ್ತು. ಐಪಿಎಲ್​ನ ಪ್ಲೇ ಆಫ್​ ಪಂದ್ಯಗಳ ವೇಳೆ ಆಗುವ ಪ್ರತಿ ಡಾಟ್​ ಬೌಲ್​ಗೂ 500 ಮರಗಳನ್ನು ನೆಡುವ ಕಾರ್ಯಕ್ರಮವನ್ನು ಕೈಗೊಂಡಿತ್ತು. ಅದರಂತೆ ಫೈನಲ್​ ಮುಗಿದ ಬಳಿಕ ಬಿಸಿಸಿಐ ಈ ಕಾರ್ಯವನ್ನು ಮಾಡಿತ್ತು. 2011 ರಿಂದ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆರ್​ಸಿಬಿ ತಮ್ಮ ‘ಗೋ ಗ್ರೀನ್’ ಅಭಿಯಾನದಲ್ಲಿ ತೊಡಗಿಕೊಂಡಿತ್ತು. ಇದೇ ಕಾರಣಕ್ಕೆ ಪ್ರತಿ ಆವೃತ್ತಿಯಲ್ಲಿಯೂ ಒಂದು ಪಂದ್ಯವನ್ನು ಹಸಿರು ಜೆರ್ಸಿಯಲ್ಲಿ ಆಡುತ್ತಿದೆ.

Exit mobile version