ನಾಗ್ಪುರ: ಪ್ರವಾಸಿ ಆಸ್ಟ್ರೇಲಿಯಾ(IND VS AUS) ವಿರುದ್ಧದ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್(border gavaskar trophy) ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ರವೀಂದ್ರ ಜಡೇಜಾ(ravindra jadeja) 5 ವಿಕೆಟ್ ಕಿತ್ತು ಗಮನ ಸೆಳೆದಿದ್ದಾರೆ. ಇದೇ ವೇಳೆ ಸ್ವೀವನ್ ಸ್ಮಿತ್(stevan smith) ಅವರನ್ನು ಕ್ಲೀನ್ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬರೋಬ್ಬರಿ 6 ತಿಂಗಳುಗಳ ಬಳಿಕ ರಾಷ್ಟ್ರೀಯ ತಂಡಕ್ಕೆ ಮರಳಿರುವ ರವೀಂದ್ರ ಜಡೇಜಾ (Ravindra Jadeja) ತಮ್ಮ ಸ್ಪಿನ್ ಮೋಡಿಯಿಂದ ಕಾಂಗರೂ ತಂಡದ ಪ್ರಮುಖ 5 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ರಿಕೆಟ್ನಿಂದ ದೂರ ಉಳಿದು ತಿಂಗಳುಗಳೇ ಕಳೆದಿದ್ದರೂ ತನ್ನ ಹಳೆಯ ಶೈಲಿಯಲ್ಲಿಯೇ ಬೌಲಿಂಗ್ ಆರಂಭಿಸಿದ ಜಡೇಜಾ ಆಸೀಸ್ ಬೌಲರ್ಗಳನ್ನು ಕಾಡಿದರು.
ಒಂದೆಡೆ ವಿಕೆಟ್ ಬೀಳುತ್ತಿದ್ದರು ಸ್ಟೀವನ್ ಸ್ಮಿತ್ ಅವರು ಡಿಫೆನ್ಸ್ ಮೂಲಕ ಭಾರತದ ಬೌಲರ್ಗಳನ್ನು ಕಾಡಲಾರಂಭಿಸಿದರು. ಇದೇ ವೇಳೆ ರವೀಂದ್ರ ಜಡೇಜಾ ಅವರು ಸ್ಮಿತ್ ಅವರನ್ನು ಬೌಲ್ಡ್ ಮಾಡಿದರು. ಜಡ್ಡು ಅವರ ಈ ಬೌಲಿಂಗ್ ಕಂಡು ಸ್ಮಿತ್ ಒಂದು ಕ್ಷಣ ಬೆರಗಾಗಿದ್ದಾರೆ. ಜಡೇಜ ಅವರ ಮೊದಲೆರಡು ಎಸೆತವನ್ನು ಡಿಫೆನ್ಸ್ ಮೂಲಕ ತಡೆದ ಸ್ಮಿತ್ ನಿಮ್ಮ ಎಸೆತವನ್ನು ಸಮರ್ಥವಾಗಿ ಎದುರಿಸಬಲ್ಲೆ ಎನ್ನುವ ರೀತಿಯಲ್ಲಿ ಥಂಬ್ಸ್ ಅಪ್ ಮಾಡಿದರು. ಆದರೆ ಮುಂದಿನ ಎಸೆತದಲ್ಲಿ ಜಡೇಜಾ ಬೌಲ್ಡ್ ಮಾಡಿದರು. ಬ್ಯಾಟ್ ಮಧ್ಯೆ ಕೂದಲೆಳೆ ಅಂತರದಲ್ಲಿ ಸಾಗಿದ ಚೆಂಡು ವಿಕೆಟ್ಗೆ ಬಡಿಯಿತು. ಈ ವಿಡಿಯೊ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ IND VS AUS: ಟೆಸ್ಟ್: ಜಡೇಜಾ, ಅಶ್ವಿನ್ ಸ್ಪಿನ್ ಮೋಡಿಗೆ ಕುಸಿದ ಆಸ್ಟ್ರೇಲಿಯಾ
ರವೀಂದ್ರ ಜಡೇಜಾ ಈ ಪಂದ್ಯದಲ್ಲಿ 22 ಓವರ್ ಎಸೆದು 8 ಮೇಡನ್ ಸಹಿತ 47 ರನ್ ವೆಚ್ಚದಲ್ಲಿ 5 ವಿಕೆಟ್ ಕಿತ್ತರು. ಜಡ್ಡು ದಾಳಿಗೆ ನಲುಗಿದ ಆಸ್ಟ್ರೇಲಿಯಾ 177 ರನ್ಗೆ ಆಲೌಟ್ ಆಗಿದೆ. ಗುರಿ ಬೆನ್ನಟ್ಟುತ್ತಿರುವ ಭಾರತ ವಿಕೆಟ್ ನಷ್ಟವಿಲ್ಲದೆ 59 ರನ್ ಗಳಿಸಿ ಬ್ಯಾಟಿಂಗ್ ನಡೆಸುತ್ತಿದೆ.