Site icon Vistara News

IND VS AUS: ಹ್ಯಾಟ್ರಿಕ್​ ಗೋಲ್ಡನ್​ ಡಕ್​ ಮೂಲಕ ಅನಗತ್ಯ ದಾಖಲೆ ಬರೆದ ಸೂರ್ಯಕುಮಾರ್​ ಯಾದವ್​

IND VS AUS: Suryakumar Yadav created a record with a hat-trick golden duck

IND VS AUS: Suryakumar Yadav created a record with a hat-trick golden duck

ಚೆನ್ನೈ: ಟಿ20 ಕ್ರಿಕೆಟ್​ನ ನಂ.1 ಬ್ಯಾಟ್ಸ್​ಮನ್,​ ಟೀಮ್​ ಇಂಡಿಯಾದ ಬ್ಯಾಟರ್​ ಸೂರ್ಯಕುಮಾರ್​ ಯಾದವ್(suryakumar yadav)​ ಅವರು ಏಕದಿನ ಕ್ರಿಕೆಟ್​ನಲ್ಲಿ ಕೆಟ್ಟ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ(IND VS AUS) ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಹ್ಯಾಟ್ರಿಕ್​ ಗೋಲ್ಡನ್ ಡಕ್(Golden duck)​ ಆಗುವ ಮೂಲಕ ಮೊದಲ ಎಸೆತಗಗಳಲ್ಲೇ ಮೂರು ಬಾರಿ ವಿಕೆಟ್‌ ಕೈಚೆಲ್ಲಿದ ಮೊದಲ ಭಾರತೀಯ ಬ್ಯಾಟರ್‌ ಎಂಬ ಅನಗತ್ಯ ದಾಖಲೆ ಬರೆದಿದ್ದಾರೆ.

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌(sachin tendulkar) ಅವರು 1994ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಸತತ ಮೂರು ಬಾರಿ ಶೂನ್ಯ ಸುತ್ತಿದ್ದಾರೆ. ಆದರೆ ಅವರು ಎರಡನೇ ಎಸೆತಕ್ಕೆ ಔಟಾಗಿದ್ದರು. ಇದೀಗ ಸೂರ್ಯಕುಮಾರ್‌ ಯಾದವ್‌ ಮೂರೂ ಪಂದ್ಯಗಳಲ್ಲಿ ಎದುರಿಸಿದ ಮೊದಲ ಎಸೆತಗಳಲ್ಲೇ ವಿಕೆಟ್‌ ಒಪ್ಪಿಸಿ ಹ್ಯಾಟ್ರಿಕ್‌ ಗೋಲ್ಡನ್‌ ಡಕ್‌ ಆಗಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಸ್ಫೋಟಕ ಬ್ಯಾಟಿಂಗ್​ ಮೂಲಕ ಟೀಮ್​ ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಿಕೊಂಡಿದ್ದ ಸೂರ್ಯಕುಮಾರ್ ಯಾದವ್​​ ಏಕದಿನ ಕ್ರಿಕೆಟ್​ನಲ್ಲಿ ತಮ್ಮ ಬ್ಯಾಟಿಂಗ್​ ಛಾಪನ್ನು ತೋರಿಸುವಲ್ಲಿ ವಿಫಲರಾಗಿದ್ದಾರೆ. ಸದ್ಯ ಅವರು ಮುಂದಿನ ಸರಣಿಯಲ್ಲಿಯೂ ಇದೇ ಪ್ರದರ್ಶನ ತೋರಿದರೆ ಏಕದಿನ ತಂಡದಿಂದ ಹೊರಬೀಳುವ ಸಾಧ್ಯತೆ ಅಧಿಕವಾಗಿದೆ. ಮೊದಲೆಡರು ಪಂದ್ಯಗಳಲ್ಲಿ ಮಿಚೆಲ್​ ಸ್ಟಾರ್ಕ್​ಗೆ ವಿಕೆಟ್​ ಒಪ್ಪಿಸಿದ್ದ ಸೂರ್ಯಕುಮಾರ್​ ಅಂತಿಮ ಪಂದ್ಯದಲ್ಲಿ ಆ್ಯಸ್ಟನ್​ ಅಗರ್ ಅವರ ಎಸೆತದಲ್ಲಿ ವಿಕೆಟ್​ ಕೈಚೆಲ್ಲಿದರು. ​

ಇದನ್ನೂ ಓದಿ IND VS AUS: ಆಸೀಸ್​ ವಿರುದ್ಧ ಭಾರತಕ್ಕೆ ಸರಣಿ ಸೋಲಿನ ಆಘಾತ; 21 ರನ್ ಗೆಲುವು ಸಾಧಿಸಿದ ಸ್ಮಿತ್​ ಪಡೆ

21 ರನ್​ ಸೋಲು ಕಂಡ ಭಾರತ

ಅಂತಿಮ ಪಂದ್ಯದಲ್ಲಿ ಭಾರತ 21 ರನ್​ಗಳ ಸೋಲು ಕಂಡು ಸರಣಿ ಕಳೆದುಕೊಂಡಿದೆ. ಚೆನ್ನೈನ ಚೆಪಾಕ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಆಸ್ಟ್ರೇಲಿಯಾ 49 ಓವರ್​ಗಳಲ್ಲಿ 269 ರನ್​ಗೆ ಆಲೌಟ್​ ಆಯಿತು. ಗುರಿ ಬೆನ್ನಟ್ಟಿದ ಭಾರತ 49.1 ಓವರ್​ಗಳಲ್ಲಿ 248 ರನ್​ಗೆ ಸರ್ವಪತನ ಕಂಡು ಶರಣಾಯಿತು. ಆಸೀಸ್​ ಪರ ಆ್ಯಡಂ ಜಾಂಪ 4 ವಿಕೆಟ್​ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಮಿಚೆಲ್​ ಮಾರ್ಷ್​ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Exit mobile version