ಸಿಡ್ನಿ: ಭಾರತ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ(IND vs AUS T20) ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡ 15 ಸದಸ್ಯರ ತಂಡವನ್ನು(Australia T20 squad) ಪ್ರಕಟಿಸಿದೆ. ಈ ತಂಡಕ್ಕೆ ಮಾಥ್ಯೂ ವೇಡ್(Matthew Wade) ಅವರು ನಾಯಕನಾಗಿದ್ದಾರೆ. ಡೇವಿಡ್ ವಾರ್ನರ್(David Warner) ಅವರು ವೈಯಕ್ತಿಕ ಕಾರಣದಿಂದಾಗಿ ಸರಣಿಯಿಂದ ಹಿಂದೆ ಸರಿದಿದ್ದಾರೆ.
ಭಾರತ ವಿರುದ್ಧದ ಟಿ20 ಸರಣಿ ನವೆಂಬರ್ 23ರಿಂದ ಆರಂಭವಾಗಲಿದೆ. ವಿಶ್ವಕಪ್ ಆಡಿದ ಬಹುತೇಕ ಆಟಗಾರರು ಈ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಫೈನಲ್ ಪಂದ್ಯದ ಶತಕ ವೀರ ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವನ್ ಸ್ಮಿತ್, ಆ್ಯಡಂ ಜಂಪಾ, ಮಾರ್ಕಸ್ ಸ್ಟೋಯಿನಿಸ್, ಜೋಶ್ ಇಂಗ್ಲಿಸ್ ವಿಶ್ವಕಪ್ ಆಡಿದ ಆಟಗಾರರಾಗಿದ್ದಾರೆ.
ಡೇವಿಡ್ ವಾರ್ನರ್ ಅವರು ಸ್ವ ನಿರ್ಧಾರದಿಂದಲೇ ಈ ಸರಣಿಯಿಂದ ಹೊರಗುಳಿದಿದ್ದಾರೆ. ವಿಶ್ವಕಪ್ನ ಎಲ್ಲ ಪಂದ್ಯಗಳನ್ನು ಆಡಿ ಬಳಲಿರುವ ಕಾರಣ ಅವರು ಕೊಂಚ ವಿಶ್ರಾಂತಿ ಪಡೆಯುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಪ್ಯಾಟ್ ಕಮಿನ್ಸ್ ಕೂಡ ಈ ಸರಣಿಯಿಂದ ಹೊರಗುಳಿದಿದ್ದಾರೆ.
ಆಸ್ಟ್ರೇಲಿಯಾ ತಂಡ
ಮ್ಯಾಥ್ಯೂ ವೇಡ್ (ನಾಯಕ), ಆರನ್ ಹಾರ್ಡಿ, ಜೇಸನ್ ಬೆಹ್ರೆನ್‌ಡಾರ್ಫ್, ಸೀನ್ ಅಬಾಟ್, ಟಿಮ್ ಡೇವಿಡ್, ನಥಾನ್ ಎಲ್ಲಿಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘ, ಮ್ಯಾಟ್ ಶಾರ್ಟ್, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಕೇನ್ ರಿಚರ್ಡ್ಸನ್, ಆ್ಯಡಂ ಝಂಪಾ.
ಭಾನುವಾರವಷ್ಟೇ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತವನ್ನು ಸೋಲಿಸಿ ಕಪ್ ಗದ್ದ ಜೋಶ್ನಲ್ಲಿರುವ ಆಸ್ಟ್ರೇಲಿಯಾ ಈ ಸರಣಿಯನ್ನೂ ಗೆಲ್ಲುವ ವಿಶ್ವಾಸದಲ್ಲಿದೆ. ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಸಂಪೂರ್ಣ ಯುವ ಆಟಗಾರರೇ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೆಲ್ಲ ವಿಶ್ವಚಾಂಪಿಯನ್ ಆಸೀಸ್ಗೆ ಸವಾಲೊಡ್ಡಿಯಾರೆ ಎನ್ನುವುದು ಸರಣಿಯ ಕುತೂಹಲವಾಗಿದೆ. ಮುಂಬರುವ ಟಿ20 ವಿಶ್ವಕಪ್ಗೂ ಮುನ್ನ ಯುವ ಪಡೆಯ ಸಾಮರ್ಥ್ಯ ಈ ಸರಣಿಯಿಂದ ನಿರ್ಧಾರವಾಗಲಿದೆ.
ಇದನ್ನೂ ಓದಿ ICC World Cup 2023 : ಆಸ್ಟ್ರೇಲಿಯಾದ ಆಟಗಾರರ ಪತ್ನಿಯರು, ಮಕ್ಕಳಿಗೆ ಕೊಲೆ ಬೆದರಿಕೆ!
ಭಾರತ ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ರಿಂಕು ಸಿಂಗ್, ಜಿತೇಶ್ ಶರ್ಮ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯಿ, ಆರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಆವೇಶ್ ಖಾನ್, ಮುಕೇಶ್ ಕುಮಾರ್.
ಟಿ20 ಸರಣಿಯ ವೇಳಾಪಟ್ಟಿ
ಮೊದಲ ಟಿ20 ಪಂದ್ಯ. ನ.23, ವಿಶಾಖಪಟ್ಟಣ. ಆರಂಭ, ಸಂಜೆ 7 ಗಂಟೆ.
ದ್ವಿತೀಯ ಟಿ20 ಪಂದ್ಯ. ನ.26, ತಿರುವನಂತಪುರಂ. ಆರಂಭ, ಸಂಜೆ 7 ಗಂಟೆ.
ಮೂರನೇ ಟಿ20, ನ.28,ಗುವಾಹಟಿ. ಆರಂಭ, ಸಂಜೆ 7 ಗಂಟೆ.
ನಾಲ್ಕನೇ ಟಿ20, ಡಿ.1, ರಾಯ್ಪುರ್. ಆರಂಭ, ಸಂಜೆ 7 ಗಂಟೆ.
ಐದನೇ ಟಿ20, ಡಿ.3, ಬೆಂಗಳೂರು. ಆರಂಭ, ಸಂಜೆ 7 ಗಂಟೆ