Site icon Vistara News

IND VS AUS: ಇಂದೋರ್​ ತಲುಪಿದ ಟೀಮ್​ ಇಂಡಿಯಾ ಆಟಗಾರರು

ICC under the influence of BCCI canceled the poor rating of Indore pitch

ಇಂದೋರ್​: ಆಸ್ಪ್ರೇ​ಲಿಯಾ ವಿರು​ದ್ಧದ ದ್ವಿತೀಯ ಟೆಸ್ಟ್​ ಪಂದ್ಯ ಗೆಲುವಿನ ಬಳಿಕ ಬಿಡುವು ಪಡೆದಿದ್ದ ಟೀಮ್​ ಇಂಡಿಯಾ ಆಟಗಾರರು ಮೂರನೇ ಟೆಸ್ಟ್​ ಪಂದ್ಯವನ್ನಾಡಲು ಇಂದೋರ್​ ತಲುಪಿದ್ದಾರೆ. ಉಭಯ ತಂಡಗಳ ಈ ಟೆಸ್ಟ್​ ಪಂದ್ಯ ಮಾರ್ಚ್​ 1 ರಿಂದ ಆರಂಭವಾಗಲಿದೆ.

ದೆಹಲಿಯ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಪಂದ್ಯ ಮೂರೇ ದಿನಕ್ಕೆ ಕೊನೆಗೊಂಡ ಕಾರಣ ಆಟಗಾರರು ತಮ್ಮ ಮನೆಗಳಿಗೆ ತೆರಳಿ ಕುಟುಂಬದವರೊಂದಿಗೆ ಕಾಲಕಳೆದಿದ್ದರು. ಇದೀಗ ಮೂರನೇ ಪಂದ್ಯವನ್ನಾಡುವ ಸಲುವಾಗಿ ಮತ್ತೆ ತಂಡ ಸೇರಿದ್ದಾರೆ.

ಟೀಮ್​ ಇಂಡಿಯಾ ಆಟಗಾರರು ಇಂದೋರ್​ ತಲುಪಿರುವ ಫೋಟೊವನ್ನು ಸೂರ್ಯಕುಮಾರ್​ ಯಾದವ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೆಲ ಆಟಗಾರರು ಶನಿವಾರವೇ ಇಂದೋರ್​ ತಲುಪಿದ್ದು ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ಇನ್ನೂ ಕೆಲ ಆಟಗಾರರು ಭಾನುವಾರ (ಫೆಬ್ರವರಿ 26) ತಂಡ ಸೇರಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ IND VS AUS: ಇಂದೋರ್​ನಲ್ಲಿ ಟೀಮ್​ ಇಂಡಿಯಾ ಆಟಗಾರರ ಟೆಸ್ಟ್​ ಸಾಧನೆ ಹೇಗಿದೆ?

ದ್ವಿತೀಯ ಪಂದ್ಯ ಸೋತ ಬಳಿಕ ದೆಹ​ಲಿ​ಯಲ್ಲೇ ಅಭ್ಯಾಸ ನಡೆ​ಸು​ತ್ತಿದ್ದ ಆಸ್ಟ್ರೇಲಿಯಾ ಆಟಗಾರರು ಕೂಡ ಭಾನು​ವಾರ(ಫೆ.26) ಇಂದೋ​ರ್‌ಗೆ ಆಗ​ಮಿ​ಸುವ ನಿರೀ​ಕ್ಷೆ​ಯಿದೆ.

Exit mobile version