Site icon Vistara News

IND VS AUS: ಅಭ್ಯಾಸ ಆರಂಭಿಸಿದ ಟೀಮ್​ ಇಂಡಿಯಾ

IND VS AUS: Team India started practice

IND VS AUS: Team India started practice

ಮುಂಬಯಿ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಮುಂಬಯಿಯ ವಾಂಖೆಡೆಯಲ್ಲಿ ನಡೆಯುವ ಮೊದಲ ಏಕದಿನ ಪಂದ್ಯಕ್ಕೆ ಭಾರತ ತಂಡದ ಕೆಲ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಟೀಮ್​ ಇಂಡಿಯಾ ಆಟಗಾರರು ಅಭ್ಯಾಸದಲ್ಲಿ ತೊಡಗಿದ ಫೋಟೊವನ್ನು ಬಿಸಿಸಿಐ(BCCI) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

​”ನಮಸ್ತೆ ಮುಂಬಯಿ., ಮೊದಲ ಏಕದಿನ ಪಂದ್ಯದಕ್ಕೆ ನಮ್ಮ ಆಟಗಾರರು ತ್ವರಿತ ಅಭ್ಯಾಸದಲ್ಲಿ ತೊಡಗಿದ್ದಾರೆ” ಎಂದು ಬರೆದು ಬಿಸಿಸಿಐ ಟೀಮ್​ ಇಂಡಿಯಾ ಆಟಗಾರರು ಅಭ್ಯಾಸ ನಡೆಸುತ್ತಿರುವ ಫೋಟೊವನ್ನು ಪ್ರಕಟಿಸಿದೆ.

ಶುಭಮನ್​ ಗಿಲ್​, ಇಶಾನ್​ ಕಿಶನ್, ಹಾರ್ದಿಕ್​ ಪಾಂಡ್ಯ, ಯಜುವೇಂದ್ರ ಚಹಲ್ ಸೇರಿದಂತೆ ಹಲವು ಆಟಗಾರರು ಮೊದಲ ದಿನ ಬ್ಯಾಟಿಂಗ್​ ಅಭ್ಯಾಸ ನಡೆಸಿದರು. ಆದರೆ ವಿರಾಟ್​ ಕೊಹ್ಲಿ, ರಾಹುಲ್​ ಗುರುವಾರ ತಂಡ ಸೇರಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ IND VS AUS: ಮೊದಲ ಏಕದಿನದಲ್ಲಿ ಶುಭಮನ್​ ಗಿಲ್​ ಜತೆಗಾರ ಯಾರು?

​ಆಸ್ಟ್ರೇಲಿಯಾ ಆಟಗಾರರು ಬುಧವಾರ(ಮಾರ್ಚ್​ 15) ಮುಂಬಯಿ ತಲುಪಿದ್ದರೂ ಅಭ್ಯಾಸ ನಡೆಸಲಿಲ್ಲ. ಒಂದು ದಿನದ ವಿಶ್ರಾಂತಿ ಪಡೆದು ಗುರುವಾರ ಬೆಳಗ್ಗೆ ಅಭ್ಯಾಸದಲ್ಲಿ ನಿರತರಾಗಲಿದ್ದಾರೆ ಎಂದು ತಂಡದ ಮೂಲಗಳು ಮಾಹಿತಿ ನೀಡಿದೆ.

Exit mobile version