Site icon Vistara News

IND vs AUS: ಈ ಬಾರಿಯ ಭಾರತ- ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ವಿಶೇಷತೆ ಏನು?

IND vs AUS Test series 2024-25

ಇದೇ ವರ್ಷಾಂತ್ಯದಲ್ಲಿ ನಡೆಯುವ ಬಹು ನಿರೀಕ್ಷಿತ ಭಾರತ ಮತ್ತು ಆಸ್ಟ್ರೇಲಿಯಾ(IND vs AUS) ನಡುವಿನ ಟೆಸ್ಟ್ ಸರಣಿಯ(IND vs AUS Test series 2024-25) ವೇಳಾಪಟ್ಟಿ(IND vs AUS Test series schedule) ಈಗಾಗಲೇ ಬಿಡುಗಡೆ. ಈ ಬಾರಿ ಬಾರ್ಡರ್– ಗಾವಸ್ಕರ್ ಟೆಸ್ಟ್(border gavaskar trophy) ಸರಣಿಯಲ್ಲಿ ಐದು ಪಂದ್ಯಗಳು ನಡೆಯಲಿದೆ. 32 ವರ್ಷಗಳ ಬಳಿಕ ಇತ್ತಂಡಗಳ ನಡುವೆ ನಡೆಯುವ 5 ಪಂದ್ಯಗಳ ಟೆಸ್ಟ್​ ಸರಣಿ ಇದಾಗಿದೆ. 1991-92ರ ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ 5 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಿತ್ತು. ಅಂದು ಆಸ್ಟ್ರೇಲಿಯಾ 4-0 ಅಂತರದ ಗೆಲುವು ಸಾಧಿಸಿತ್ತು.

5 ಪಂದ್ಯಗಳ ಈ ಟೆಸ್ಟ್​ ಸರಣಿ ನವೆಂಬರ್ 22ರಿಂದ ಜನವರಿ(2025) 7ರವರೆಗೆ ನಡೆಯಲಿದೆ. ಪರ್ತ್, ಅಡಿಲೇಡ್, ಬ್ರಿಸ್ಬೇನ್, ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ಈ ಪಂದ್ಯಗಳು ನಡೆಯಲಿದೆ. ಅಡಿಲೇಡ್ ಪಂದ್ಯ ಪಿಂಕ್ ಬಾಲ್ ಟೆಸ್ಟ್ ಆಗಿದೆ. ಪುರುಷರ ಕ್ರಿಕೆಟ್ ತಂಡದ ಜತೆಗೆ ಇದೇ ಸಮಯದಲ್ಲೇ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಏಕದಿನ ಸರಣಿ ಕೂಡ ನಡೆಯಲಿದೆ.

ಇದನ್ನೂ ಓದಿ IPL 2024: ಸೋಲಿನ ಬೆನ್ನಲ್ಲೇ ಗುಜರಾತ್ ತಂಡದ ನಾಯಕನಿಗೆ ಬಿತ್ತು 12 ಲಕ್ಷ ರೂ. ದಂಡ

ಭಾರತವು ಇತ್ತೀಚಿನ ಕೆಲ ವರ್ಷಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ಟೆಸ್ಟ್‌ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಲೇ ಬಂದಿದೆ. ಕಳೆದ 4 ಸರಣಿಗಳಲ್ಲಿ ಭಾರತವೇ ಗೆದ್ದು ಬಂದಿದೆ. 2016-17ರಲ್ಲಿ 2-1 (ತವರಿನ ಸರಣಿ), 2018-19ರಲ್ಲಿ 2-1 (ಆಸ್ಟ್ರೇಲಿಯದಲ್ಲಿ), 2020- 21ರಲ್ಲಿ 2-1 (ಆಸ್ಟ್ರೇಲಿಯದಲ್ಲಿ) ಹಾಗೂ 2022-23ರಲ್ಲಿ 2-1 (ತವರಿನ ಸರಣಿ) ಅಂತರದಿಂದ ಭಾರತ ಜಯ ಸಾಧಿಸಿತ್ತು. ಆದಾಗ್ಯೂ, 2023ರಲ್ಲಿ ಲಂಡನ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಪ್ಯಾಟ್ ಕಮಿನ್ಸ್ ತಂಡವು ಭಾರತವನ್ನು ಸೋಲಿಸಿತ್ತು.

5 ಟೆಸ್ಟ್​ ಪಂದ್ಯ ವೇಳಾಪಟ್ಟಿ

ಮೊದಲ ಟೆಸ್ಟ್: ನವೆಂಬರ್ 22-26, ಪರ್ತ್

ಎರಡನೇ ಟೆಸ್ಟ್: ಡಿಸೆಂಬರ್ 6-10, ಅಡಿಲೇಡ್ (ಪಿಂಕ್​ ಬಾಲ್​ ಟೆಸ್ಟ್​)

ಮೂರನೇ ಟೆಸ್ಟ್: ಡಿಸೆಂಬರ್ 14-18, ಬ್ರಿಸ್ಬೇನ್

ನಾಲ್ಕನೇ ಟೆಸ್ಟ್: ಡಿಸೆಂಬರ್ 26-30, ಮೆಲ್ಬೋರ್ನ್

ಐದನೇ ಟೆಸ್ಟ್: ಜನವರಿ 3-7, ಸಿಡ್ನಿ

ಮಹಿಳಾ ಏಕದಿನ ಸರಣಿಯ ವೇಳಾಪಟ್ಟಿ

ಮೊದಲ ಏಕದಿನ: ಡಿಸೆಂಬರ್ 5, ಬ್ರಿಸ್ಬೇನ್

ಎರಡನೇ ಏಕದಿನ: ಡಿಸೆಂಬರ್ 8, ಬ್ರಿಸ್ಬೇನ್

ಮೂರನೇ ಏಕದಿನ: ಡಿಸೆಂಬರ್ 11, ಪರ್ತ್

Exit mobile version