ಚೆನ್ನೈ: ಭಾರತ(IND vs AUS) ಕ್ರಿಕೆಟ್ ತಂಡವು ಇಂದು ಚೆನ್ನೈನಲ್ಲಿ ವಿಶ್ವಕಪ್(icc world cup 2023) 2023ರ ತನ್ನ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ವಿಶ್ವಕಪ್‌ಗೂ ಮುನ್ನ ಇತ್ತೀಚೆಗೆ ತವರಿನಲ್ಲಿ ಆಸೀಸ್ ತಂಡವನ್ನು ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 2-1 ರಿಂದ ಮಣಿಸಿತ್ತು. ಈ ಗೆಲುವಿನ ಆತ್ಮವಿಶ್ವಾಸದಿಂದಲೇ ಭಾರತ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಪಂದ್ಯದ ಪ್ಲೇಯಿಂಗ್ ಇಲೆವೆನ್ ಈ ರೀತಿ ಇರುವ ಸಾಧ್ಯತೆ ಇದೆ.
ರೋಹಿತ್-ಇಶಾನ್ ಇನಿಂಗ್ಸ್ ಆರಂಭ
ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಶುಭಮನ್ ಗಿಲ್ ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಹೀಗಾಗಿ ಇವರ ಸ್ಥಾನದ್ಲಿ ಇಶಾನ್ ಕಿಶನ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಇಶಾನ್ ಕಿಶನ್ ಆಡುವುದರಿಂದ ಬಲಗೈ ಮತ್ತು ಎಡಗೈ ಕಾಂಬಿನೇಶನ್ ಕೂಡ ಲಭಿಸಲಿದೆ. ಇದೇ ಯೋಜನೆಯಲ್ಲಿ ಇಶಾನ್ ಆಡುವುದು ಖಚಿತ. ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಶ್ರೇಯಶ್ ಅಯ್ಯರ್ ಆಡಲಿದ್ದಾರೆ.
ರಾಹುಲ್ ಕೀಪಿಂಗ್
ಪ್ರಚಂಡ ಫಾರ್ಮ್ನಲ್ಲಿರುವ ಕನ್ನಡಿಗ ಕೆ.ಎಲ್ ರಾಹುಲ್ ಕೀಪಿಂಗ್ ಹೊಣೆ ಹೊರಲಿದ್ದಾರೆ. ಅವರು 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಸಾಧ್ಯತೆ ಅಧಿಕ. ನಾಲ್ಕನೇ ಕ್ರಮಾಂಕದಲ್ಲಿ ಅಯ್ಯರ್ ಅವರು ಆಡಲಿದ್ದಾರೆ. 6ನೇ ಕ್ರಮಾಂಕದಲ್ಲಿ ಉಪನಾಯಕ ಹಾರ್ದಿಕ್ ಪಾಂಡ್ಯ ಮತ್ತು 7ನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಆಡಲಿದ್ದಾರೆ.
ಅಶ್ವಿನ್ಗೆ ಅವಕಾಶ
ಕೊನೆಯ ಕ್ಷಣದಲ್ಲಿ ಅಕ್ಷರ್ ಪಟೇಲ್ ಗಾಯಗೊಂಡು ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಕಾರಣ ತಂಡದಲ್ಲಿ ಅವಕಾಶ ಪಡೆದ ಆರ್.ಅಶ್ವಿನ್ ಈ ಪಂದ್ಯದಲ್ಲಿ ಆಡುವುದು ಖಚಿತ ಎನ್ನಲಾಗಿದೆ. ಅಶ್ವಿನ್ಗೆ ಚೆನ್ನೈ ತವರಾದ ಕಾರಣ ಮತ್ತು ಇದು ಸ್ಪಿನ್ ಪಿಚ್ ಆದ ಕಾರಣ ಅವರು ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಲ್ಲದೆ ಅಶ್ವಿನ್ ಈ ಮೈದಾನದಲ್ಲಿ ಉತ್ತಮ ದಾಖಲೆಯನ್ನು ಕೂಡ ಹೊಂದಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ತ್ರಿವಳಿ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಕಣಕ್ಕಿಳಿಯಲಿದ್ದಾರೆ. ಆಲ್ ರೌಂಡರ್ ಶಾರ್ದೂಲ್ಗೆ ಅವಕಾಶ ಅನುಮಾನ ಅಲ್ಲದೆ ಅಶ್ವಿನ್ ಆಡುವುದರಿಂದ ಕುಲ್ದೀಪ್ ಕೂಡ ಈ ಪಂದ್ಯದಲ್ಲಿ ಬೆಂಚ್ ಕಾಯಬೇಕಾದಿತು.
Which captain comes out on top today? 🤔#CWC23 pic.twitter.com/kDg0qYDweg
— ICC Cricket World Cup (@cricketworldcup) October 8, 2023
ಇದನ್ನೂ ಓದಿ IND vs AUS: ಭಾರತ-ಆಸೀಸ್ ಪಂದ್ಯಕ್ಕೆ ಕ್ಷಣಗಣನೆ; ಮಳೆ ಕಾಟ ಇದೆಯೇ?; ಇಲ್ಲಿದೆ ಹವಾಮಾನ ವರದಿ
ಭಾರತ ಪ್ಲೇಯಿಂಗ್ ಇಲೆವೆನ್
ರೋಹಿತ್ ಶರ್ಮ, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ.
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಟೀವನ್ ಸ್ಮಿತ್, ಅಲೆಕ್ಸ್ ಕ್ಯಾರಿ,ಕ್ಯಾಮರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಮಾರ್ನಸ್ ಲಬುಶೇನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇವಿಡ್ ವಾರ್ನರ್, ಆ್ಯಡಂ ಜಾಂಪ, ಮಿಚೆಲ್ ಸ್ಟಾರ್ಕ್.