ಅಹಮದಾಬಾದ್: ಆಸ್ಟ್ರೇಲಿಯಾ(IND VS AUS) ವಿರುದ್ಧ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli) ಅಂಪೈರ್ ನಿತಿನ್ ಮೆನನ್(Nitin Menon) ಅವರನ್ನು ಕಾಲೆಳೆದಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಸ್ಟ್ರೇಲಿಯದ ಬ್ಯಾಟಿಂಗ್ ಇನಿಂಗ್ಸ್‌ನ 35ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಅಶ್ವಿನ್ ಎಸೆದ ಈ ಓವರ್ ಮೂರನೇ ಎಸೆತ ಆಸೀಸ್ ಆಟಗಾರ ಟ್ರಾವಿಸ್ ಹೆಡ್ ಪ್ಯಾಟ್ಗೆ ಚೆಂಡು ಬಡಿಯಿತು. ಇದೇ ವೇಳೆ ಟೀಮ್ ಇಂಡಿಯಾ ಆಟಗಾರರು ಎಲ್ಬಿಡಬ್ಲ್ಯುಗೆ ಮನವಿ ಮಾಡಿದರು. ಆದರೆ ಭಾರತದ ಮನವಿಯನ್ನು ತಿರಸ್ಕರಿಸಿದ್ದ ಅಂಪೈರ್ ನಿತಿನ್ ಮೆನನ್ ನಾಟೌಟ್ ನೀಡಿದರು.
ಇದನ್ನೂ ಓದಿ INDvsAUS : ಅನಾರೋಗ್ಯದ ನಡುವೆಯೂ ಶತಕದ ಸಾಧನೆ ಮಾಡಿದ ಪತಿಗೆ ಶಹಬ್ಬಾಸ್ ಎಂದ ಅನುಷ್ಕಾ ಶರ್ಮಾ
ನಿತಿನ್ ಮೆನನ್ ಔಟ್ ನೀಡದ ಕಾರಣ ರೋಹಿತ್ ಶರ್ಮಾ ಅಂಪೈರ್ ನಿರ್ಧಾರದ ವಿರುದ್ಧ ಡಿಆರ್ಎಸ್ ತೆಗೆದುಕೊಂಡಿತು. ರಿವ್ಯೂವ್ನಲ್ಲಿ ಹೆಡ್ ಔಟಾಗಿರುವುದು ಖಚಿತವಾಗಿತ್ತು. ಆದರೆ ಅಂಪೈರ್ ನಾಟೌಟ್ ನೀಡಿದ್ದರಿಂದಾಗಿ, ಅಂಪೈರ್ ಕಾಲ್ ಆಧಾರದ ಮೇಲೆ ಹೆಡ್ ಜೀವದಾನ ಪಡೆದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ನಿತಿನ್ ಮೆನನ್ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಒಂದೊಮ್ಮೆ ನಾನು ಬ್ಯಾಟಿಂಗ್ ಮಾಡುತ್ತಿದ್ದರೆ ನೀವು ಔಟ್ ನೀಡುತ್ತಿದ್ದೀರಿ ಎಂದು ಹೇಳಿದರು. ಕೊಹ್ಲಿ ಆಡಿದ ಈ ಮಾತುಗಳು ಸ್ಟಂಪ್ ಮೈಕ್ನಲ್ಲಿ ಸ್ಪಷ್ಟವಾಗಿ ರೆಕಾರ್ಡ್ ಆಗಿದ್ದು ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.