ಚೆನ್ನೈ: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ(rohit sharma) ಅವರ ಅತಿರೇಕದ ವರ್ತನೆಯ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚೆನ್ನೈಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾದ ಇನಿಂಗ್ಸ್ ವೇಳೆ ರೋಹಿತ್ ಅವರು ತಾಳ್ಮೆ ಕಳೆದುಕೊಂಡು ಅತಿರೇಕದ ವರ್ತನೆ ತೋರಿದ್ದಾರೆ. ತಂಡದ ಸಹ ಆಟಗಾರ ಕುಲ್ದೀಪ್ ಯಾದವ್(kuldeep yadav) ಅವರಿಗೆ ಮೈದಾನದಲ್ಲೇ ಜಾಡಿಸಿದ್ದಾರೆ. ಈ ವಿಡಿಯೊ ಇದೀಗ ಎಲ್ಲಡೆ ವೈರಲ್ ಆಗಿದೆ. ಜತೆಗೆ ರೋಹಿತ್ ಅವರ ಈ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾದ ಬ್ಯಾಟಿಂಗ್ ಇನಿಂಗ್ಸ್ನ 39ನೇ ಓವರ್ನಲ್ಲಿ ಕುಲ್ದೀಪ್ ಯಾದವ್ ಬೌಲಿಂಗ್ ಮಾಡುತ್ತಿದ್ದರು. ಓವರ್‌ನ ಅಂತಿಮ ಎಸೆತ ಆ್ಯಷ್ಟನ್ ಅಗರ್ ಅವರ ಪ್ಯಾಡ್ಗೆ ಬಡಿಯಿತು. ಈ ವೇಳೆ ಕುಲ್ದೀಪ್ ಎಲ್ಬಿಡಬ್ಲ್ಯುವಿಗೆ ಬಲವಾದ ಮನವಿ ಮಾಡಿದರು. ಆದರೆ ಅಂಪೈರ್ ಇದನ್ನು ನಾಟೌಟ್ ಎಂದು ಘೋಷಿಸಿದರು. ಕೆ.ಎಲ್ ರಾಹುಲ್ ಕೂಡ ಇದು ಔಟ್ ಇಲ್ಲ ಎಂದು ಹೇಳಿದರು. ಆದರೆ ತರ್ಕ ಬಿಡದ ಕುಲ್ದೀಪ್ ನಾಯಕ ರೋಹಿತ್ ಶರ್ಮಾ ಬಳಿ ಒತ್ತಾಯ ಮಾಡಿಸಿ ಡಿಆರ್ಎಸ್ ತೆಗೆದುಕೊಳ್ಳವಂತೆ ಮಾಡಿದರು.
ಇದನ್ನೂ ಓದಿ IND VS AUS: ಪಾಂಡ್ಯ ಬೌಲಿಂಗ್ ಕಮಾಲ್; ಭಾರತ ಗೆಲುವಿಗೆ 270 ರನ್ ಗುರಿ
ಡಿಆರ್ಎಸ್ ರಿವ್ಯೂ ವೇಳೆ ಚೆಂಡು ಆಫ್ ಸ್ಟಂಪ್ ಹೊರಗೆ ಪಿಚ್ ಆಗುತ್ತಿರುವುದು ಸ್ಪಷ್ಟವಾಗಿ ಗೋಚರಿಸಿತು. ಇದರಿಂದ ಭಾರತದ ಒಂದು ರಿವ್ಯೂವ್ ನಷ್ಟಗೊಂಡಿತು. ಇದೇ ಸಿಟ್ಟಿನಲ್ಲಿ ರೋಹಿತ್ ಅವರು ಕುಲ್ದೀಪ್ಗೆ ಬೈದಿದ್ದಾರೆ. ಸರಿಯಾಗಿ ನೋಡಿ ಆ ಬಳಿಕ ರಿವ್ಯೂ ಪಡೆಯುವಂತೆ ಸೂಚನೆ ನೀಡಬೇಕು ಎಂದು ಹೇಳಿದ್ದಾರೆ. ರೋಹಿತ್ ಅವರ ಈ ವರ್ತನೆಗೆ ಕೆಲ ನೆಟ್ಟಿಗರು ನಿಮ್ಮ ಅತಿರೇಕದ ವರ್ತನೆ ಅತಿಯಾಗುತ್ತಿದೆ ಎಂದು ಕಮೆಂಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.