ಇಂದೋರ್: ಆಸ್ಟ್ರೇಲಿಯಾ(IND VS AUS) ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಆಟಗಾರರು ಕಳಪೆ ಬ್ಯಾಟಿಂಗ್ ನಡೆಸಿ ಮೊದಲ ಇನಿಂಗ್ಸ್ನಲ್ಲಿ 109 ರನ್ಗೆ ಸರ್ವಪತನ ಕಂಡಿದೆ. ಗುರಿ ಬೆನ್ನಟ್ಟಿದ ಆಸೀಸ್ ಮೊದಲ ದಿನದಾಟಕ್ಕೆ 4 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದೆ.
ಸದ್ಯ 47 ರನ್ಗಳ ಹಿನ್ನಡೆಯೊಂದಿಗೆ ಭಾರತ ಸಂಕಷ್ಟಕ್ಕೆ ಸಿಲುಕಿದೆ. ಆದರೆ ವಿರಾಟ್ ಕೊಹ್ಲಿ(Kohli dance) ಮಾತ್ರ ಏನೂ ಆಗದವರಂತೆ ಬಿಂದಾಸ್ ಆಗಿ ಮೈದಾನದಲ್ಲಿ ತಮ್ಮ ಪಾಡಿಗೆ ತಾವು ನೃತ್ಯ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರವೀಂದ್ರ ಜಡೇಜಾ ಅವರ ಎಸೆತವೊಂದು ಬ್ಯಾಟಿಂಗ್ ನಡೆಸುತ್ತಿದ್ದ ಉಸ್ಮಾನ್ ಖವಾಜಾ ಅವರ ಪ್ಯಾಡ್ಗೆ ಬಡಿಯಿತು. ಇದೇ ವೇಳೆ ಜಡೇಜಾ ಎಲ್ಬಿಡಬ್ಲ್ಯು ಎಂದು ಮನವಿ ಮಾಡಿದರು. ಆದರೆ ಅಂಪೈರ್ ಇದನ್ನು ನಾಟೌಟ್ ಎಂದು ತೀರ್ಪು ನೀಡಿದರು. ಆದರೆ ನಾಯಕನ ಬಳಿ ಇದು ಔಟ್ ಎಂದು ಪಟ್ಟು ಹಿಡಿದ ಜಡೇಜಾ ರಿವ್ಯೂ ಪಡೆಯಲು ಸೂಚಿಸಿದರು. ಆದರೆ ರಿವ್ಯೂವ್ನಲ್ಲಿ ನಾಟೌಟ್ ಎಂದು ಕಂಡು ಬಂತು. ಈ ಸಂದರ್ಭ ಸ್ಪಿಪ್ನಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ನೃತ್ಯ ಮಾಡಿದ್ದಾರೆ.
ಇದನ್ನೂ ಓದಿ IND VS AUS: ಮೂರನೇ ಟೆಸ್ಟ್ನಲ್ಲಿ ಹಿಡಿತ ಸಾಧಿಸಿದ ಆಸ್ಟ್ರೇಲಿಯಾ; ಸದ್ಯ 47 ರನ್ಗಳ ಮುನ್ನಡೆ
ಕೊಹ್ಲಿ ನೃತ್ಯ ಮಾಡುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಕೆಲ ನೆಟ್ಟಿಗರು ಭಾರತ ತಂಡ ಬ್ಯಾಟಿಂಗ್ ವೈಫಲ್ಯ ಕಂಡರೂ ಕೊಹ್ಲಿ ಮಾತ್ರ ಪಂದ್ಯ ವೀಕ್ಷಣೆಗೆ ಬಂದ ಪ್ರೇಕ್ಷಕರಿಗೆ ಡ್ಯಾನ್ಸ್ ಮೂಲಕ ಮನರಂಜನೆ ನೀಡುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಇದೇ ಜೋಶ್ ಬ್ಯಾಟಿಂಗ್ನಲ್ಲಿ ಪ್ರದರ್ಶಿಸಿದ್ದರೆ ತಂಡ ಉತ್ತಮ ಮೊತ್ತ ಕಲೆಹಾಕುತ್ತಿತ್ತು ಎಂದು ಹೇಳಿದ್ದಾರೆ.