ನವದೆಹಲಿ: ಆಸ್ಟ್ರೇಲಿಯಾ(IND VS AUS) ವಿರುದ್ಧದ ಬಾರ್ಡರ್-ಗವಾಸ್ಕರ್(border gavaskar trophy) ಟೆಸ್ಟ್ ಸರಣಿಯ ದ್ವಿತೀಯ ಪಂದ್ಯವನ್ನಾಡಲು ವಿರಾಟ್ ಕೊಹ್ಲಿ(virat kohli) ಲಾಂಗ್ಡ್ರೈ ಮೂಲಕ ದೆಹಲಿಗೆ ಆಗಮಿಸಿ ಅಭ್ಯಾಸ ಆರಂಭಿಸಿದ್ದಾರೆ.
ವಿರಾಟ್ ಕೊಹ್ಲಿಯ ತವರು ದೆಹಲಿ ಆದ ಕಾರಣದಿಂದ ಅವರು ತಮ್ಮ ಮನೆಯಿಂದ ಕಾರಿನ ಮೂಲಕ ನೇರವಾಗಿ ಅರುಣ್ ಜೇಟ್ಲಿ ಮೈದಾನಕ್ಕೆ ಬಂದಿದ್ದಾರೆ. ಕೊಹ್ಲಿ ಅವರು ಕಾರಿನಲ್ಲಿ ಪ್ರಯಾಣಿಸಿದ ಫೋಟೊವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಡ್ರೈವಿಂಗ್ ಮಾಡುತ್ತಿರುವ ಫೋಟೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಾಕಿರುವ ಕೊಹ್ಲಿ “ಹಲವು ವರ್ಷಗಳ ಬಳಿಕ ತವರಿನಂಗಳದಲ್ಲಿ ಆಡಲು ಉತ್ಸುಕತೆಯಿಂದ ಪ್ರಯಾಣಿಸುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಇನ್ನೊಂದೆಡೆ ವಿರಾಟ್ ಕೊಹ್ಲಿ 6 ವರ್ಷಗಳ ಬಳಿಕ ತವರಿನಂಗಳದಲ್ಲಿ ಆಡುತ್ತಿರುವ ಪಂದ್ಯ ಇದಾಗಿದೆ.
ಇದನ್ನೂ ಓದಿ IND VS AUS: 6 ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್ ಆಡಲಿದ್ದಾರೆ ವಿರಾಟ್ ಕೊಹ್ಲಿ
ಕೊಹ್ಲಿ ಈ ವರೆಗೆ ತವರಿನಲ್ಲಿ ಒಟ್ಟು ಮೂರು ಪಂದ್ಯಗಳನ್ನು ಆಡಿದ್ದಾರೆ. ಒಟ್ಟಾರೆ 105 ಟೆಸ್ಟ್ ಗಳಲ್ಲಿ ತವರಿನಲ್ಲಿ ಆಡುತ್ತಿರುವ 4ನೇ ಪಂದ್ಯ ಇದಾಗಿದೆ. ತವರಿನ ಮೈದಾನದಲ್ಲಿ ಕೊಹ್ಲಿ ಮೂರು ಟೆಸ್ಟ್ ಪಂದ್ಯಗಳಿಂದ 467 ರನ್ ಗಳಿಸಿದ್ದಾರೆ. ಇದರಲ್ಲಿ 2 ಅರ್ಧಶತಕ ಹಾಗೂ ಒಂದು ದ್ವಿಶತಕ ಸೇರಿದೆ. 2017ರಲ್ಲಿ ಕೊಹ್ಲಿ ತವರಿನ ಮೈದಾನದಲ್ಲಿ ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು.