Site icon Vistara News

IND VS AUS: 6 ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್​ ಆಡಲಿದ್ದಾರೆ ವಿರಾಟ್​ ಕೊಹ್ಲಿ

Do you know how much marks Virat Kohli got in iron pea maths?

#image_title

ನವದೆಹಲಿ: ಭಾರತ ಮತ್ತು ಆಸೀಸ್(IND VS AUS)​ ವಿರುದ್ಧದ ದ್ವಿತೀಯ ಟೆಸ್ಟ್​ ಫೆ.17ರಿಂದ ಆರಂಭವಾಗಲಿದೆ. ಈ ಪಂದ್ಯ ದೆಹಲಿಯ ಅರಣ್​ ಜೇಟ್ಲಿ ಕ್ರಿಕೆಟ್​ ಸ್ಡೇಡಿಯಂನಲ್ಲಿ ನಡೆಯಲಿದ್ದು ವಿರಾಟ್​ ಕೊಹ್ಲಿಗೆ(virat kohli) ಈ ಪಂದ್ಯ ವಿಶೇಷವಾಗಿದೆ.

ವಿರಾಟ್​ ಕೊಹ್ಲಿ ತಮ್ಮ ತವರಿನಂಗಳದಲ್ಲಿ ಬರೋಬ್ಬರಿ ಆರು ವರ್ಷಗಳ ಬಳಿಕ ಆಡುತ್ತಿರುವ ಟೆಸ್ಟ್​ ಪಂದ್ಯ ಇದಾಗಿದೆ. ಹೀಗಾಗಿ ಕೊಹ್ಲಿಗೆ ಈ ಪಂದ್ಯ ವಿಶೇಷವಾಗಿದೆ. ಸದ್ಯ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ಬ್ಯಾಟಿಂಗ್​ ಲಯ ಕಂಡುಕೊಳ್ಳಲಿದ್ದಾರಾ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ Virat Kohli: ಪಠಾಣ್‌ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್

ಕೊಹ್ಲಿ ಆಡಿರುವ 105 ಟೆಸ್ಟ್ ಗಳಲ್ಲಿ ತವರಿನಲ್ಲಿ ಆಡುತ್ತಿರುವ 4ನೇ ಪಂದ್ಯ ಇದಾಗಿದೆ. ತವರಿನ ಮೈದಾನದಲ್ಲಿ ಕೊಹ್ಲಿ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಇದರಲ್ಲಿ ಒಂದು ಪಂದ್ಯ ಬಾರ್ಡರ್​-ಗವಾಸ್ಕರ್​ ಪಂದ್ಯವಾಗಿದೆ. ಒಟ್ಟಾರೆ ಅವರು ತವರಿನ ಟೆಸ್ಟ್​ ಪಂದ್ಯಗಳಲ್ಲಿ 467 ರನ್ ಗಳಿಸಿದ್ದಾರೆ. ಇದರಲ್ಲಿ 2 ಅರ್ಧಶತಕ ಹಾಗೂ ಒಂದು ದ್ವಿಶತಕ ಸೇರಿದೆ.

Exit mobile version