ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್(IND VS AUS) ಟೆಸ್ಟ್ ಸರಣಿಯ ದ್ವಿತೀಯ ಟೆಸ್ಟ್ನ ಮೊದಲ ದಿನದಾಟಕ್ಕೆ ಭಾರತ ವಿಕೆಟ್ ನಷ್ಟವಿಲ್ಲದೆ 21 ರನ್ಗಳಿಸಿದೆ. ಆದರೆ ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾದ ಆಟಗಾರರಾದ ಡೇವಿಡ್ ವಾರ್ನರ್(david warner) ಮತ್ತು ಉಸ್ಮಾನ್ ಖವಾಜಾ(usman khawaja) ಅವರು ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್(Mohammed Siraj) ಬೌನ್ಸರ್ ದಾಳಿಗೆ ತಿಣುಕಾಡಿದ ವಿಡಿಯೊ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ(ಫೆ.17) ಆರಂಭವಾದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡಕ್ಕೆ ಮೊಹಮ್ಮದ್ ಸಿರಾಜ್ ಘಾತಕ ಬೌಲಿಂಗ್ ಮೂಲಕ ಕಾಡಿದರು. ಸತತ ಬೌನ್ಸರ್ ಎಸೆತಗಳನ್ನು ಎಸೆಯುವ ಮೂಲಕ ವಾರ್ನರ್ ಮತ್ತು ಖವಾಜಾಗೆ ಆಘಾತವಾಗುಂತೆ ಮಾಡಿದರು. ಇದರಲ್ಲಿ ಹಲವು ಬಾರಿ ವಾರ್ನರ್ಗೆ ಚೆಂಡು ಬಡಿದಿದೆ. ಸಿರಾಜ್ ವೇಗಕ್ಕೆ ಬೆಚ್ಚಿ ಬಿದ್ದ ಉಭಯ ಆಟಗಾರರು ಬ್ಯಾಟಿಂಗ್ ನಡೆಸಲು ವಿಫಲರಾದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ IND VS AUS: ಚಿರತೆ ವೇಗದಲ್ಲಿ ಜಿಗಿದು ಅದ್ಭುತ ಕ್ಯಾಚ್ ಹಿಡಿದ ಕೆ. ಎಲ್. ರಾಹುಲ್; ವಿಡಿಯೊ ವೈರಲ್
ಮೊದಲ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 263 ರನ್ಗಳಿಸಿ ಆಲೌಟ್ ಆಯಿತು. ಆಸೀಸ್ ಪರ ಉಸ್ಮಾನ್ ಖವಾಜಾ(81) ಪೀಟರ್ ಹ್ಯಾಂಡ್ಸ್ ಕಾಂಬ್ ಅಜೇಯ 72 ರನ್ ಬಾರಿಸಿ ಮಿಂಚಿದರು. ಭಾರತ ಪರ ಮೊಹಮ್ಮದ್ ಶಮಿ 4, ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಲಾ ಮೂರು ವಿಕೆಟ್ ಕಿತ್ತರು.