Site icon Vistara News

IND VS AUS: ಜಡೇಜಾ ಬೆರಳಿಗೆ ಹಚ್ಚಿಕೊಂಡಿದ್ದೇನು?; ಸ್ಪಷ್ಟೀಕರಣ ನೀಡಿದ ಬಿಸಿಸಿಐ

jadeja and siraj

#image_title

ನಾಗ್ಪುರ: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ(IND VS AUS) ವಿರುದ್ಧದ ಬಾರ್ಡರ್-ಗಾವಸ್ಕರ್(border gavaskar trophy) ಟ್ರೋಫಿಯಲ್ಲಿ ಎದ್ದಿದ್ದ ವಿವಾದವೊಂದಕ್ಕೆ ಬಿಸಿಸಿಐ ಸ್ಪಷ್ಟೀಕರಣ ನೀಡಿದೆ. ಗುರುವಾರ ನಡೆದ ಮೊದಲ ದಿನದಾಟದಲ್ಲಿ ಬೌಲರ್ ರವೀಂದ್ರ ಜಡೇಜಾಗೆ(ravindra jadeja) ಮೊಹಮ್ಮದ್​ ಸಿರಾಜ್(mohammed siraj) ಅವರು ಗುಟ್ಟಾಗಿ ಏನನ್ನೋ ನೀಡುತ್ತಿರುವ ಚಿತ್ರವನ್ನು ಪ್ರಕಟಿಸಿ ಆಸೀಸ್ ಮಾಧ್ಯಮಗಳು ಅಪರಾಧದಂತೆ ಚಿತ್ರಿಸಿ ಇದು ಮೋಸದಾಟ ಎಂದು ಗಂಭೀರ ಆರೋಪ ಮಾಡಿತ್ತು.

ಶುಕ್ರವಾರ ಈ ಪ್ರಕರಣದ ಕುರಿತು ಸ್ಪಷ್ಟನೆ ನೀಡಿರುವ ಬಿಸಿಸಿಐ, ಜಡೇಜಾ ಅವರು ಬೌಲಿಂಗ್​ಗೆ ಸಹಾಯಕವಾಗುವಂತಹ ಯಾವುದೇ ವಸ್ತುವನ್ನು ಬಳಸಿಲ್ಲ. ಜಡೇಜಾ ಬೆರಳಿನ ನೋವನ್ನು ಕಡಿಮೆ ಮಾಡುವ ಸಲುವಾಗಿ ಫಿಲ್ಡಿಂಗ್​ನಲ್ಲಿದ್ದ ಸಿರಾಜ್​ ನೋವು ನಿವಾರಕ ಮುಲಾಮೊಂದನ್ನು ತಂದು ಕೊಟ್ಟಿದ್ದಾರೆ ಇದನ್ನು ಜಡೇಜ ತಮ್ಮ ಬೆರಳಿಗೆ ಹಚ್ಚಿದ್ದಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್​ ಮಂಡಳಿ ಮತ್ತು ಆಸೀಸ್​ ಮಾಧ್ಯಮಕ್ಕೆ ಬಿಸಿಸಿಐ ಸ್ಪಷ್ಟೀಕರಣ ನೀಡಿದೆ.

ಇದರ ಜತೆಗೆ ವೀಡಿಯೊ ತುಣುಕೊಂದನ್ನು ಬಿಸಿಸಿ ಬಿಡುಗಡೆ ಮಾಡಿದ್ದು, ಜಡೇಜಾ ಅವರು ಸಿರಾಜ್ ಅವರ ಅಂಗೈಯ ಹಿಂಭಾಗದಿಂದ ತೆಗೆದುಕೊಂಡ ವಸ್ತುವನ್ನು ಬೆರಳಿಗೆ ಹಚ್ಚಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಯಾವುದೇ ಹಂತದಲ್ಲಿ ಜಡೇಜಾ ಚೆಂಡಿನ ಮೇಲೆ ಏನನ್ನೂ ಉಜ್ಜುವುದನ್ನು ಕಂಡು ಬಂದಿಲ್ಲ. ಆದ್ದರಿಂದ ಇದು ಬಾಲ್ ಟ್ಯಾಂಪರಿಂಗ್​​ ಪ್ರಯತ್ನವಲ್ಲ. ಯಾವುದೇ ಒಂದು ವರದಿಯನ್ನು ಪ್ರಕಟಿಸುವ ಮುನ್ನ ಆ ಘಟನೆಯ ಬಗ್ಗೆ ಸತ್ಯಾಸತ್ಯತೆ ಪರಿಶೀಲನೆ ನಡೆಸಬೇಕು ಎಂದು ಬಿಸಿಸಿಐ, ಆಸೀಸ್​ ಮಾಧ್ಯಗಳಿಗೆ ಎಚ್ಚರಿಸಿದೆ.

ಇದನ್ನೂ ಓದಿ Ravindra jadeja : ಬೌಲಿಂಗ್ ಮಾಡುವ ಮೊದಲು ಜಡೇಜಾ ಬೆರಳಿಗೆ ಹಚ್ಚಿಕೊಂಡಿದ್ದೇನು? ಚರ್ಚೆ ಶುರು

ಆಸ್ಟ್ರೇಲಿಯಾದ ಮಾಧ್ಯಮವೊಂದು ಜಡೇಜಾ ಅವರು ಚೆಂಡನ್ನು ಸ್ಪಿನ್​ ಮಾಡುವ ಬೆರಳಿಗೆ ಏನು ಹಚ್ಚಿಕೊಂಡು ಬೌಲಿಂಗ್​ ಮಾಡಿದ್ದಾರೆ. ಇದು ಮೋಸದಾಟ ಎಂಬರ್ಥದಲ್ಲಿ ವರದಿ ಮಾಡಿತ್ತು. ಇದೀಗ ಬಿಸಿಸಿಐ ಇದಕ್ಕೆ ಸಾಕ್ಷಿ ಸಮೇತ ತಕ್ಕ ಉತ್ತರ ನೀಡಿದೆ.

Exit mobile version