ಅಹಮದಾಬಾದ್: ಕಳಪೆ ಬ್ಯಾಟಿಂಗ್‌ನಿಂದಾಗಿ ಆಸ್ಟ್ರೇಲಿಯಾ(IND VS AUS) ವಿರುದ್ಧದ ಟೆಸ್ಟ್ ಪಂದ್ಯದಿಂದ ಹೊರ ಬಿದ್ದಿರುವ ಕನ್ನಡಿಗ ಕೆ.ಎಲ್. ರಾಹುಲ್‌ಗೆ ಟೀಮ್ ಇಂಡಿಯಾದ ಬಾಗಿಲು ಬಹುತೇಕ ಮುಚ್ಚಿದೆ ಎಂಬ ಮಾತುಗಳು ಕೇಳಿ ಬರಲಾರಂಭಿಸಿದೆ.
ರಾಹುಲ್ ಬದಲು ತಂಡದಲ್ಲಿ ಅವಕಾಶ ಪಡೆದ ಶುಭಮನ್ ಗಿಲ್ ಅವರು ಅಹಮದಾಬಾದ್‌ನ ಟೆಸ್ಟ್‌ನಲ್ಲಿ ಭರ್ಜರಿ ಶತಕ ಸಿಡಿಸಿ ಮೆರೆದಾಡಿದರು. ಗಿಲ್ ಶತಕ ಬಾರಿಸುತ್ತಿದ್ದಂತೆ ರಾಹುಲ್ ಅವರಿಗೆ ಟೀಮ್ ಇಂಡಿಯಾದಲ್ಲಿ ಇನ್ನು ಅವಕಾಶ ಸಿಗುವುದು ಅನುಮಾನ ಎನ್ನಲಾಗಿದೆ. ಏಕೆಂದರೆ ಗಿಲ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನೊಂದೆಡೆ ಮಧ್ಯಮ ಕ್ರಮಾಂಕದಲ್ಲಿಯೂ ಎಲ್ಲ ಆಟಗಾರರು ಉತ್ತಮ ಬ್ಯಾಟಿಂಗ್ ನಡೆಸುತ್ತಿರುವ ಕಾರಣ ರಾಹುಲ್‌ಗೆ ಇಲ್ಲಿಯೂ ಅವಕಾಶ ನೀಡುವುದು ಕಷ್ಟಕರವಾಗಿದೆ.
ಏಕದಿನ ಸರಣಿ ಬಳಿಕ ರಾಹುಲ್ ಬಲಿಷ್ಯ ನಿರ್ಧಾರ
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ರಾಹುಲ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಏಕೆಂದರೆ ರಿಷಭ್ ಪಂತ್ ಬದಲು ರಾಹುಲ್‌ಗೆ ಕೀಪಿಂಗ್ ಹೊಣೆ ನೀಡುವ ಸಾಧ್ಯತೆ ಇದೆ. ಒಂದೊಮ್ಮೆ ರಾಹುಲ್ ಇಲ್ಲಿಯೂ ತಮ್ಮ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿದರೆ ಟೀಮ್ ಇಂಡಿಯಾದಲ್ಲಿ ರಾಹುಲ್ ಆಟ ಬಹುತೇಕ ಕೊನೆಗೊಳ್ಳಲಿದೆ. ಹೀಗಾಗಿ ರಾಗುಲ್‌ಗೆ ಆಸೀಸ್ ವಿರುದ್ಧದ ಏಕದಿ ಸರಣಿ ಅಗ್ನಿಪರೀಕ್ಷೆಯಾಗಿದೆ.