ಇಂದೋರ್: ಭಾರತ ಮತ್ತು ಆಸ್ಟ್ರೇಲಿಯಾ(IND VS AUS) ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಮಾರ್ಚ್ 1 ರಿಂದ ಇಂದೋರ್ನಲ್ಲಿ ಆರಂಭವಾಗಲಿದೆ. ಆದರೆ ಈ ಪಂದ್ಯದಲ್ಲಿ ರೋಹಿತ್ ಶರ್ಮಾ(rohit sharma) ಜತೆ ಭಾರತದ ಇನಿಂಗ್ಸ್ ಯಾರು ಆರಂಭಿಸಿಲಿದ್ದಾರೆ ಎಂಬ ಕುತೂಹಲ ಎಲ್ಲರನ್ನು ಕಾಡಲಾರಂಭಿಸಿದೆ.
3ನೇ ಟೆಸ್ಟ್ ಪಂದ್ಯಕ್ಕೆ ಇನ್ನು ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಇದೆ. ಇದಕ್ಕೂ ಮುನ್ನ ಟೀಮ್ ಮ್ಯಾನೇಜ್ಮೆಂಟ್ಗೆ ಸವಾಲೊಂದು ಎದುರಾಗಿದೆ. ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿ ಟೀಕೆಗೆ ಗುರಿಯಾಗಿದ್ದ ಕೆ.ಎಲ್.ರಾಹುಲ್(kl rahul) ಅವರನ್ನು ಆಡಿಸಬೇಕಾ ಅಥವಾ ಅವರ ಸ್ಥಾನಕ್ಕೆ ಶುಭಮನ್ ಗಿಲ್(shubman gill) ಅವರನ್ನು ಆಡಿಸಬೇಕಾ ಎಂಬ ಗೊಂದಲಕ್ಕೆ ಸಿಲುಕಿದೆ.
ಇದನ್ನೂ ಓದಿ IND VS AUS: ಮೂರನೇ ಟೆಸ್ಟ್ ಪಂದ್ಯ ಗೆಲ್ಲಲು ಪಣ ತೊಟ್ಟ ಆಸ್ಟ್ರೇಲಿಯಾ
ಕಳಪೆ ಬ್ಯಾಟಿಂಗ್ ನಡೆಸುತ್ತಿರುವ ರಾಹುಲ್ ಅವರನ್ನು ತಂಡದಿಂದ ಕೈ ಬಿಟ್ಟು ಶುಭಮನ್ ಗಿಲ್ಗೆ ಅವಕಾಶ ನೀಡಬೇಕೆಂಬುವುದು ಮಾಜಿ ಆಟಗಾರರ ಆಗ್ರಹವಾಗಿದೆ. ಆದರೆ ತಂಡದ ಕೋಚ್ ಮತ್ತು ನಾಯಕ, ರಾಹುಲ್ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಒಂದೊಮ್ಮೆ ರಾಹುಲ್ ಅವರನ್ನು ಮೂರನೇ ಟೆಸ್ಟ್ ಪಂದ್ಯದಲ್ಲಿಯೂ ಆಡಿಸಿ ಅವರು ಆಡದೇ ಹೋದರೆ ಮತ್ತೆ ಆಯ್ಕೆ ಸಮಿತಿಯ ವಿರುದ್ಧ ಟೀಕೆಗಳು ವ್ಯಕ್ತವಾಗಲಿದೆ. ಹಾಗಂತ ಸ್ಟಾರ್ ಆಟಗಾರ ರಾಹುಲ್ ಅವರನ್ನು ಏಕಾಏಕಿ ತಂಡದಿಂದ ಕೈಬಿಡುವ ಹಾಗಿಲ್ಲ. ಒಟ್ಟಾರೆ ಟೀಮ್ ಮ್ಯಾನೇಜ್ಮೆಂಟ್ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿದಂತಾಗಿದೆ.