Site icon Vistara News

IND VS BAN | ಬರೋಬ್ಬರಿ 8 ವರ್ಷಗಳ ಬಳಿಕ ಏಕದಿನ ಕ್ರಿಕೆಟ್​ನಲ್ಲಿ ಇನಿಂಗ್ಸ್‌ ಆರಂಭಿಸಿದ ಕೊಹ್ಲಿ!

virat kohli

ಢಾಕಾ: ಬಾಂಗ್ಲಾದೇಶ ವಿರುದ್ಧದ ಎರಡನೇ ಏಕ ದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಬರೋಬ್ಬರಿ 8 ವರ್ಷಗಳ ಬಳಿಕ ಆರಂಭಿಕನಾಗಿ ಕಣಕ್ಕಿಳಿದ ವಿಶೇಷ ಸಾಧನೆ ಮಾಡಿದ್ದಾರೆ.

ರೋಹಿತ್​ ಶರ್ಮಾ ಫೀಲ್ಡಿಂಗ್​ ನಡೆಸುವ ವೇಳೆ ಹೆಬ್ಬೆರಳಿನ ಗಾಯಕ್ಕೆ ಸಿಲುಕಿ ಪಂದ್ಯಕ್ಕೆ ಅಲಭ್ಯರಾದರು. ಇದರಿಂದ ಶಿಖರ್​ ಧವನ್​ ಜತೆ ವಿರಾಟ್​ ಕೊಹ್ಲಿ ಭಾರತದ ಇನಿಂಗ್ಸ್ ಆರಂಭಿಸಿದರು. ಆದರೆ ಕೊಹ್ಲಿ ​ಕೇವಲ 5 ರನ್​ಗೆ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದರು.

ಟಿ20 ಕ್ರಿಕೆಟ್​ನಲ್ಲಿ ಆಗಾಗ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಕೊಹ್ಲಿ, ಏಕ ದಿನ ಕ್ರಿಕೆಟ್​ನಲ್ಲಿ ಹೆಚ್ಚಾಗಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸುವ ಅವರು ಈ ಪಂದ್ಯದಲ್ಲಿ 8 ವರ್ಷದ ಬಳಿಕ ಆರಂಭಿಕ ಆಟಗಾರನಾಗಿ ಕಣಕ್ಕಿಳಿದರು. ಇದಕ್ಕೂ ಮುನ್ನ ಕೊಹ್ಲಿ ಏಕ ದಿನ ಕ್ರಿಕೆಟ್​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ 2014ರಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ಅವರು 3 ರನ್​ಗಳಿಸಿ ಔಟಾಗಿದ್ದರು.

ಇದನ್ನೂ ಓದಿ | INDvsBAN | ಭಾರತಕ್ಕೆ ಗಾಯದ ಬರೆ; ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಮೂವರು ಆಟಗಾರರು ಔಟ್‌!

Exit mobile version