ಢಾಕಾ: ಮೊದಲ ಏಕ ದಿನ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ ಬಾಂಗ್ಲಾದೇಶ ತಂಡ ಭಾರತ ವಿರುದ್ಧ 2ನೇ ಏಕದಿನ ಪಂದ್ಯವನ್ನಾಡಲು ಕಣಕ್ಕಿಳಿದಿದೆ. ಅದರಂತೆ ಈ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಲಿಟನ್ ದಾಸ್ ಮೊದಲು ಬ್ಯಾಟಿಂಗ್ ನಡೆಸುವ ನಿರ್ಧಾರ ಕೈಗೊಂಡಿದ್ದಾರೆ. ಎದುರಾಳಿ ಭಾರತ ಬೌಲಿಂಗ್ ಆಹ್ವಾನ ಪಡೆದಿದೆ.
ಭಾರತ ಈ ಪಂದ್ಯಕ್ಕೆ ಎರಡು ಬದಲಾವಣೆ ಮಾಡಿದೆ. ಕುಲ್ದೀಪ್ ಸೇನ್ ಮತ್ತು ಶಾಬಾಜ್ ಅಹ್ಮದ್ ಬದಲು ವೇಗಿ ಉಮ್ರಾನ್ ಮಲಿಕ್ ಮತ್ತು ಅಕ್ಷರ್ ಪಟೇಲ್ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳಲಾಗಿದೆ.
ಪಿಚ್ ರಿಪೋರ್ಟ್
ಢಾಕಾದ ಶೇರ್ ಬಾಂಗ್ಲಾ ಮೈದಾನದ ಪಿಚ್ ಹೆಚ್ಚಾಗಿ ಸ್ಪಿನ್ ಬೌಲರ್ಗಳಿಗೆ ನೆರವು ನೀಡಲಿದೆ. ಇದಕ್ಕೆ ಮೊದಲ ಪಂದ್ಯವೇ ಸಾಕ್ಷಿ. ಉಭಯ ತಂಡಗಳ ಸ್ಪಿನ್ನರ್‌ಗಳೇ ಇಲ್ಲಿ ಹೆಚ್ಚು ವಿಕೆಟ್ ಉರುಳಿಸಿದ್ದರು. ಈ ಪಂದ್ಯದಲ್ಲಿಯೂ ಸ್ಪಿನ್ನರ್‌ಗಳೇ ಮೇಲುಗೈ ಸಾಧಿಸುವ ನಿರೀಕ್ಷೆ ಇದೆ. ಆದ್ದರಿಂದ ಇತ್ತಂಡಗಳು ಹೆಚ್ಚಾಗಿ ಸ್ಪಿನ್ ಅಸ್ತ್ರವನ್ನು ಬಳಸಬಹುದು.
ತಂಡಗಳು
ಭಾರತ
ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅಕ್ಷರ್ ಪಟೇಲ್.
ಬಾಂಗ್ಲಾದೇಶ
ನಜ್ಮುಲ್ ಹೊಸೈನ್ ಶಾಂಟೊ, ಲಿಟನ್ ದಾಸ್ (ನಾಯಕ), ಶಕಿಬ್ ಅಲ್ ಹಸನ್, ಮುಷ್ಫಿಕರ್ ರಹೀಮ್, ಮಹಮ್ಮದುಲ್ಲಾ ರಿಯಾದ್, ಅಫೀಫ್ ಹುಸೈನ್, ಮೆಹಿದಿ ಹಸನ್ ಮಿರಾಜ್, ಮುಸ್ತಫಿಜುರ್ ರೆಹಮಾನ್, ಎಬಾದಾತ್ ಹೊಸೈನ್, ಹಸನ್ ಮಹಮೂದ್, ಅನಮುಲ್ ಹಕ್.
ಪಂದ್ಯ ಆರಂಭ: ಬೆಳಗ್ಗೆ 11:30ಕ್ಕೆ
ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್.
ಇದನ್ನೂ ಓದಿ | IND VS BAN | ಸರಣಿ ಜೀವಂತಕ್ಕೆ ಗೆಲ್ಲಲೇಬೇಕಾದ ಒತ್ತಡದಲ್ಲಿ ಟೀಮ್ ಇಂಡಿಯಾ