Site icon Vistara News

IND VS BAN | ಡಾನ್​ ಬ್ರಾಡ್​ಮನ್​ ದಾಖಲೆ ಮುರಿಯುವ ಸನಿಹದಲ್ಲಿ ಚೇತೇಶ್ವರ್​ ಪೂಜಾರ!

Cheteshwar Pujara wrote a new record for the Indian team

ಢಾಕಾ: ಬಾಂಗ್ಲಾದೇಶ ವಿರುದ್ಧ ಗುರುವಾರ ಆರಂಭವಾಗಲಿರುವ ದ್ವಿತೀಯ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡದ ಚೇತೇಶ್ವರ್​ ಪೂಜಾರ ನೂತನ ದಾಖಲೆ ಬರೆಯಲು ಎದುರು ನೋಡುತ್ತಿದ್ದಾರೆ. ಈ ಪಂದ್ಯದಲ್ಲಿ ಪೂಜಾರ 12 ರನ್​ ಗಳಿಸಿದರೆ ಆಸ್ಟ್ರೇಲಿಯಾದ ಡಾನ್ ಬ್ರಾಡ್​ಮನ್​ ದಾಖಲೆ ಮುರಿಯಲಿದ್ದಾರೆ.

ಪೂಜಾರ ಮೊದಲ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 90 ರನ್‌ ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ ಅಜೇಯ 102 ರನ್‌ ಗಳಿಸಿ ಮಿಂಚಿದ್ದರು. ಈ ಅಮೋಘ ಬ್ಯಾಟಿಂಗ್​ ಮೂಲಕ ಪೂಜಾರ ಬಹು ಕಾಲದ ಬಳಿಕ ಬ್ಯಾಟಿಂಗ್​ ಫಾರ್ಮ್​ ಕಂಡುಕೊಂಡರು. ಇದೀಗ ಎರಡನೇ ಟೆಸ್ಟ್‌ ಪಂದ್ಯದಲ್ಲಿ ವಿಶೇಷ ದಾಖಲೆ ಬರೆಯುವ ಸನಿಹದಲ್ಲಿದ್ದಾರೆ.

ಸದ್ಯ ಪೂಜಾರ ಟೆಸ್ಟ್​ ಕ್ರಿಕೆಟ್​ನಲ್ಲಿ 6984 ರನ್​ ಗಳಿಸಿದ್ದಾರೆ. ಈ ಪಂದ್ಯದಲ್ಲಿ 12 ರನ್​ ಗಳಿಸಿದರೆ ಕ್ರಿಕೆಟ್​ ದಿಗ್ಗಜ ಆಸ್ಟ್ರೇಲಿಯಾದ ಡಾನ್ ಬ್ರಾಡ್​ಮನ್(6996)​ ಅವರ ದಾಖಲೆಯೊಂದನ್ನು ಮುರಿಯಲಿದ್ದಾರೆ. ಪೂಜಾರ ಮೊದಲ ಟೆಸ್ಟ್​ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದು ಇದೀಗ ದ್ವಿತೀಯ ಟೆಸ್ಟ್​ ಪಂದ್ಯದಲ್ಲಿಯೂ ಇದೇ ಬ್ಯಾಟಿಂಗ್​ ಲಯವನ್ನು ಮುಂದುರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ | IND VS BAN | ಅಭ್ಯಾಸದ ವೇಳೆ ಕೆ.ಎಲ್​. ರಾಹುಲ್​ಗೆ ಗಾಯ; ಟೀಮ್ ಇಂಡಿಯಾದಲ್ಲಿ ಆತಂಕ!

Exit mobile version